T20 World Cup 2024: ಸೂಪರ್-8 ನಲ್ಲಿ ಭಾರತ ಯಾವಾಗ, ಎಲ್ಲಿ, ಯಾವ ತಂಡಗಳನ್ನು ಎದುರಿಸಲಿದೆ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

T20 World Cup 2024: ಟೀಂ ಇಂಡಿಯಾವಿರುವ ಗುಂಪು 1 ರಲ್ಲಿ ಈಗಾಗಲೇ ಎರಡು ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿವೆ. ಮೂರನೇ ತಂಡ ಯಾವುದೆಂದು ಇನ್ನಷ್ಟೇ ನಿರ್ಧರಿಸಬೇಕಾಗಿದೆ.  ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ಸಿ ಗುಂಪಿನಿಂದ ಅಫ್ಘಾನಿಸ್ತಾನ ತಂಡ ಗುಂಪು-1 ರ ಭಾಗವಾಗಿವೆ. ಈಗ ನಾಲ್ಕನೇ ತಂಡ ಡಿ ಗುಂಪಿನಿಂದ ಆಯ್ಕೆಯಾಗಬೇಕಾಗಿದೆ.

T20 World Cup 2024: ಸೂಪರ್-8 ನಲ್ಲಿ ಭಾರತ ಯಾವಾಗ, ಎಲ್ಲಿ, ಯಾವ ತಂಡಗಳನ್ನು ಎದುರಿಸಲಿದೆ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Jun 14, 2024 | 9:22 PM

2024ರ ಟಿ20 ವಿಶ್ವಕಪ್‌ನ (T20 World Cup 2024) ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಳ್ಳುವ ಹಂತದಲ್ಲಿವೆ. ಇದಾದ ಬಳಿಕ ಜೂನ್ 19ರಿಂದ ಸೂಪರ್-8 ಪಂದ್ಯಗಳು ಆರಂಭವಾಗಲಿವೆ. ಈ ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದು, ಈ ಪೈಕಿ 6 ತಂಡಗಳು ಗುಂಪು ಹಂತದಿಂದ ಹೊರಬಿದ್ದಿವೆ. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಈಗಾಗಲೇ ಸೂಪರ್-8 ಗೆ ಅರ್ಹತೆ ಪಡೆದಿವೆ. ಉಳಿದಿರುವ ಆರು ತಂಡಗಳಲ್ಲಿ ಮೂರು ತಂಡಗಳು ಇನ್ನೂ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬೇಕಿದೆ. ಈ ಸೂಪರ್ 8 ಸುತ್ತಿನಲ್ಲಿ ಎರಡು ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಲಾ 2 ತಂಡಗಳು ಅಂದರೆ ಒಟ್ಟು 4 ತಂಡಗಳು ಸೆಮಿಫೈನಲ್​ಗೆ ಲಗ್ಗೆ ಇಡಲಿವೆ. ಈ ಸುತ್ತಿನಲ್ಲಿ ಟೀಂ ಇಂಡಿಯಾ (Team India) ಮೂರು ಪಂದ್ಯಗಳನ್ನು ಆಡಬೇಕಾಗಿದ್ದು, ತಂಡದ ಮೂರು ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಪಂದ್ಯಗಳು ಯಾವಾಗ, ಎಲ್ಲಿ ನಡೆಯುತ್ತವೆ?

ಟಿ20 ವಿಶ್ವಕಪ್‌ನ ಸೂಪರ್-8 ಸುತ್ತಿನಲ್ಲಿ ಭಾರತ ಗುಂಪು-1ರಲ್ಲಿ ಸ್ಥಾನ ಪಡೆದಿದ್ದು, ಸದ್ಯಕ್ಕೆ ಈ ಗುಂಪಿನಲ್ಲಿ ಸ್ಥಾನ ಪಡೆಯುವ ಎಲ್ಲಾ 4 ತಂಡಗಳನ್ನು ಇನ್ನು ನಿರ್ಧರಿಸಲಾಗಿಲ್ಲ. ಆದಾಗ್ಯೂ, ಭಾರತ ತಂಡವು ತನ್ನ ಮೂರು ಪಂದ್ಯಗಳನ್ನು ಯಾವ ದಿನಾಂಕ ಮತ್ತು ಸ್ಥಳದಲ್ಲಿ ಆಡುತ್ತದೆ ಎಂಬುದನ್ನು ಈಗಾಗಲೇ ನಿರ್ಧರಿಸಲಾಗಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ಆಡಲಿದೆ. ಇದಾದ ಬಳಿಕ ಎರಡನೇ ಪಂದ್ಯ ಜೂನ್ 22 ರಂದು ಆಂಟಿಗುವಾದಲ್ಲಿ ನಡೆಯಲಿದೆ. ಈ ಸುತ್ತಿನ ಮೂರನೇ ಮತ್ತು ಕೊನೆಯ ಪಂದ್ಯ ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ನಡೆಯಲ್ಲಿದೆ.

IND vs CAN: ಫ್ಲೋರಿಡಾದಲ್ಲಿ ಭಾರಿ ಮಳೆ; ಭಾರತದ ಅಭ್ಯಾಸ ರದ್ದು! ಕೆನಡಾ ವಿರುದ್ಧದ ಪಂದ್ಯ ನಡೆಯುವುದು ಡೌಟ್

ಯಾವ ತಂಡಗಳನ್ನು ಎದುರಿಸಲಿದೆ?

ಟೀಂ ಇಂಡಿಯಾವಿರುವ ಗುಂಪು 1 ರಲ್ಲಿ ಈಗಾಗಲೇ ಎರಡು ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿವೆ. ಮೂರನೇ ತಂಡ ಯಾವುದೆಂದು ಇನ್ನಷ್ಟೇ ನಿರ್ಧರಿಸಬೇಕಾಗಿದೆ.  ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ಸಿ ಗುಂಪಿನಿಂದ ಅಫ್ಘಾನಿಸ್ತಾನ ತಂಡ ಗುಂಪು-1 ರ ಭಾಗವಾಗಿವೆ. ಈಗ ನಾಲ್ಕನೇ ತಂಡ ಡಿ ಗುಂಪಿನಿಂದ ಆಯ್ಕೆಯಾಗಬೇಕಾಗಿದೆ. ಡಿ ಗುಂಪಿನಲ್ಲಿ ಯಾವ ತಂಡ ಎರಡನೇ ಸ್ಥಾನ ಪಡೆಯುತ್ತದೋ, ಆ ತಂಡವು ಗುಂಪು-1 ರ ಭಾಗವಾಗಲಿದೆ. ಶ್ರೀಲಂಕಾ ತಂಡ ಈಗಾಗಲೇ ಡಿ ಗುಂಪಿನಿಂದ ಹೊರಗುಳಿದಿದೆ. ಆದರೆ ದಕ್ಷಿಣ ಆಫ್ರಿಕಾ ತಂಡ ಸೂಪರ್-8 ಸುತ್ತಿನಲ್ಲಿ ಗುಂಪು-2 ಭಾಗವಾಗಿದೆ. ಇದರರ್ಥ ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ, ಈ ಮೂರು ತಂಡಗಳಲ್ಲಿ ಒಂದು ತಂಡವು ಸೂಪರ್-8 ಸುತ್ತಿನಲ್ಲಿ ಗುಂಪು-1 ರಲ್ಲಿ ಸ್ಥಾನ ಪಡೆಯಲ್ಲಿವೆ.

4ನೇ ಸ್ಥಾನಕ್ಕೆ ಬಾಂಗ್ಲಾ ಪ್ರಬಲ ಸ್ಪರ್ಧಿ

ಸದ್ಯ ಗುಂಪು 1 ರಲ್ಲಿ ಸ್ಥಾನ ಪಡೆಯಲು ಬಾಂಗ್ಲಾದೇಶ ಪ್ರಬಲ ಸ್ಪರ್ಧಿಯಾಗಿದೆ. ಬಾಂಗ್ಲಾ ತನ್ನ ಮುಂದಿನ ಪಂದ್ಯ ನೇಪಾಳ ವಿರುದ್ಧ ನಡೆಯಲಿರುವ ಕಾರಣ ಭಾರತದ ಗುಂಪಿನ ನಾಲ್ಕನೇ ತಂಡವಾಗುವ ನಿರೀಕ್ಷೆಯಿದೆ. ಬಾಂಗ್ಲಾದೇಶ ಭಾರತದ ಗುಂಪಿಗೆ ಬಂದರೆ ಜೂನ್ 22 ರಂದು ಆಂಟಿಗುವಾದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಜೂನ್ 20 ರಂದು ಭಾರತ ತಂಡವು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Fri, 14 June 24

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ