IND vs CAN: ಫ್ಲೋರಿಡಾದಲ್ಲಿ ಭಾರಿ ಮಳೆ; ಭಾರತದ ಅಭ್ಯಾಸ ರದ್ದು! ಕೆನಡಾ ವಿರುದ್ಧದ ಪಂದ್ಯ ನಡೆಯುವುದು ಡೌಟ್
IND vs CAN, T20 World Cup 2024: ಫ್ಲೋರಿಡಾದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಟೀಂ ಇಂಡಿಯಾದ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಇದೀಗ ಭಾರತ ಮತ್ತು ಕೆನಡಾ ನಡುವಿನ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ.
ಟಿ20ವಿಶ್ವಕಪ್‌ನಲ್ಲಿ (T20 World Cup 2024) ಸತತ ಮೂರು ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿರುವ ಟೀಂ ಇಂಡಿಯಾ (Team India) ತನ್ನ ಕೊನೆಯ ಲೀಗ್ ಪಂದ್ಯವನ್ನು ಕೆನಡಾ ವಿರುದ್ಧ ಫ್ಲೋರಿಡಾದಲ್ಲಿ ಆಡಬೇಕಾಗಿದೆ. ಇದಕ್ಕಾಗಿ ಇಡೀ ತಂಡ ಈಗಾಗಲೇ ಫ್ಲೋರಿಡಾ (Florida) ತಲುಪಿದೆ ಟೀಂ ಇಂಡಿಯಾ ಈಗಾಗಲೇ ಸೂಪರ್-8ಗೆ ಅರ್ಹತೆ ಪಡೆದಿರುವ ಕಾರಣ ಈ ಸುತ್ತಿನಲ್ಲಿ 3 ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿದೆ. ಹೀಗಾಗಿ ತಂಡವನ್ನು ಇನ್ನಷ್ಟು ಬಲಪಡಿಸಲು ಅಭ್ಯಾಸ ಹಾಗೂ ಕೆನಡಾ ವಿರುದ್ಧದ (IND vs CAN) ಪಂದ್ಯ ಅತ್ಯವಶ್ಯಕವಾಗಿದೆ. ಆದರೆ ಫ್ಲೋರಿಡಾದಲ್ಲಿನ ಕಟ್ಟ ಹವಾಮಾನದಿಂದಾಗಿ (Bad Weather) ಕೆನಡಾ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮಾಡಬೇಕಾಗಿದ್ದ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಹಾಗೆಯೇ ಪಂದ್ಯಕ್ಕೂ ಮಳೆಯ ಕಾರ್ಮೋಡ ಆವರಿಸಿದೆ.
ಫ್ಲೋರಿಡಾದಲ್ಲಿ ಭಾರಿ ಮಳೆ
ವಾಸ್ತವವಾಗಿ, ಫ್ಲೋರಿಡಾದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಟೀಂ ಇಂಡಿಯಾದ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಇದೀಗ ಭಾರತ ಮತ್ತು ಕೆನಡಾ ನಡುವಿನ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಭಾರತ ಮತ್ತು ಕೆನಡಾ ನಡುವಿನ ಈ ಪಂದ್ಯವು ಜೂನ್ 15 ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಆದರೆ ಫ್ಲೋರಿಡಾ ಹವಾಮಾನ ಇಲಾಖೆ ಮುಂದಿನ 2 ದಿನಗಳ ಕಾಲ ಮಳೆ ಮತ್ತು ಚಂಡಮಾರುತದ ಎಚ್ಚರಿಕೆ ನೀಡಿದೆ. ಹೀಗಾಗಿ ಭಾರತ ಕೊನೆಯ ಲೀಗ್ ಪಂದ್ಯ ನಡೆಯುವುದು ಅನುಮಾನವಾಗಿದೆ.
The condition in Florida.
– India Vs Canada, Ireland Vs USA and Pakistan Vs Ireland are set to take place in Lauderhill, Florida. pic.twitter.com/11zPRpVovX
— Mufaddal Vohra (@mufaddal_vohra) June 13, 2024
New York ✅#TeamIndia arrive in Florida 🛬 for their last group-stage match of the #T20WorldCup! 👍 pic.twitter.com/vstsaBbAQx
— BCCI (@BCCI) June 14, 2024
ಟೀಂ ಇಂಡಿಯಾ ಸಿದ್ಧತೆಗೆ ಹಿನ್ನಡೆ
ಸೂಪರ್-8ಸುತ್ತಿನಲ್ಲಿ ಟೀಂ ಇಂಡಿಯಾ ಯಾವ ತಂಡಗಳನ್ನು ಎದುರಿಸಲಿದೆ ಎಂಬುದು ಈಗಾಗಲೇ ಬಹುತೇಕ ಖಚಿತಗೊಂಡಿದೆ. ಟೀಂ ಇಂಡಿಯಾ ಮುಂದಿನ ಸುತ್ತಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡವನ್ನು ಎದುರಿಸುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಗೆ ಪ್ರತಿಯೊಂದು ಅಭ್ಯಾಸ ಮತ್ತು ಪ್ರತಿಯೊಂದು ಪಂದ್ಯವೂ ಬಹಳ ಮುಖ್ಯವಾಗುತ್ತದೆ. ಆದರೆ ಇದೀಗ ಟೀಂ ಇಂಡಿಯಾದ ಅಭ್ಯಾಸವೇ ರದ್ದಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಕೆನಡಾ ಜೊತೆಗಿನ ಪಂದ್ಯವೂ ರದ್ದಾದರೆ ಸೂಪರ್-8ಕ್ಕೂ ಮುನ್ನ ಟೀಂ ಇಂಡಿಯಾದ ಸಿದ್ಧತೆಗೆ ದೊಡ್ಡ ಪೆಟ್ಟು ಬೀಳಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ