T20 World Cup 2024: ಸೂಪರ್-8 ಸುತ್ತಿಗೆ 8 ತಂಡಗಳು ಎಂಟ್ರಿ; 12 ತಂಡಗಳ ಪ್ರಯಾಣ ಅಂತ್ಯ

|

Updated on: Jun 17, 2024 | 2:48 PM

T20 World Cup 2024: ಈ ಬಾರಿ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಿದ್ದವು. ಈ 20 ತಂಡಗಳಲ್ಲಿ ಎಂಟು ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ 12 ತಂಡಗಳ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ. ಈ 12 ತಂಡಗಳಲ್ಲಿ ಎರಡು ಬಲಿಷ್ಠ ತಂಡಗಳೂ ಸೇರಿವೆ ಎಂಬುದು ಅಚ್ಚರಿಯ ಸಂಗತಿ. ಆ ಎರಡು ತಂಡಗಳೆಂದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್.

T20 World Cup 2024: ಸೂಪರ್-8 ಸುತ್ತಿಗೆ 8 ತಂಡಗಳು ಎಂಟ್ರಿ; 12 ತಂಡಗಳ ಪ್ರಯಾಣ ಅಂತ್ಯ
ಟಿ20 ವಿಶ್ವಕಪ್ 2024
Follow us on

ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಇಂದು ಬಾಂಗ್ಲಾದೇಶ ಮತ್ತು ನೇಪಾಳ (Bangladesh vs Nepal) ನಡುವೆ ಮಹತ್ವದ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ, ನೇಪಾಳ ತಂಡವನ್ನು 21 ರನ್‌ಗಳಿಂದ ಮಣಿಸಿ ಸೂಪರ್-8 ಸುತ್ತಿಗೆ ಅರ್ಹತೆ ಪಡೆದಿದೆ. ಈ ಮೂಲಕ ಸೂಪರ್-8 ಆಡಲಿರುವ ಎಂಟು ತಂಡಗಳು ಖಚಿತವಾದಂತ್ತಾಗಿದೆ. ಈ ಎಂಟು ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಜೂನ್ 19 ರಿಂದ ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿವೆ.

ಸೂಪರ್-8 ತಲುಪಿದ ತಂಡಗಳಿವು

ಬಾಂಗ್ಲಾದೇಶ ಇಂದು ನೇಪಾಳ ತಂಡವನ್ನು ಸೋಲಿಸುವ ಮೂಲಕ ಸೂಪರ್-8 ತಲುಪಿದ ಕೊನೆಯ ತಂಡವಾಯಿತು. ಈಗ ಸೂಪರ್-8 ಸುತ್ತಿಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಯುಎಸ್ಎ, ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ತಂಡಗಳು ಅರ್ಹತೆ ಪಡೆದಿವೆ. ಈ ಎಲ್ಲಾ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

  • ಸೂಪರ್-8 ರ ಮೊದಲ ಗುಂಪು- ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ.
  • ಸೂಪರ್-8 ರ ಎರಡನೇ ಗುಂಪು – ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್.

ಈ 12 ತಂಡಗಳ ಪಯಣ ಅಂತ್ಯ

ಈ ಬಾರಿ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಿದ್ದವು. ಈ 20 ತಂಡಗಳಲ್ಲಿ ಎಂಟು ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ 12 ತಂಡಗಳ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ. ಈ 12 ತಂಡಗಳಲ್ಲಿ ಎರಡು ಬಲಿಷ್ಠ ತಂಡಗಳೂ ಸೇರಿವೆ ಎಂಬುದು ಅಚ್ಚರಿಯ ಸಂಗತಿ. ಆ ಎರಡು ತಂಡಗಳೆಂದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್. ಉಳಿದಂತೆ ಪಪುವಾ ನ್ಯೂಗಿನಿಯಾ, ನಮೀಬಿಯಾ, ಐರ್ಲೆಂಡ್, ಕೆನಡಾ, ಓಮನ್, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ವಿಶ್ವಕಪ್​ನಿಂದ ಹೊರಬಿದ್ದಿವೆ.

ಟಿ20 ವಿಶ್ವಕಪ್‌ನಲ್ಲಿ ಒಂದು ರನ್‌ನಿಂದ ಗೆದ್ದ ತಂಡಗಳು ಯಾವ್ಯಾವು ಗೊತ್ತಾ?

ಗೆಲ್ಲುವ ಅವಕಾಶ ಕೈಚೆಲ್ಲಿದ ನೇಪಾಳ

ಮಹತ್ವದ ಪಂದ್ಯದಲ್ಲಿ ನೇಪಾಳ ತಂಡವನ್ನು 21 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ಸೂಪರ್-8 ಗೆ ಲಗ್ಗೆ ಇಟ್ಟಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 106 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನೇಪಾಳ ತಂಡ 85 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ ಪರ ತಂಜಿಮ್ ಹಸನ್ ಗರಿಷ್ಠ 4 ವಿಕೆಟ್ ಪಡೆದರೆ, ಮುಸ್ತಾಫಿಜುರ್ ರೆಹಮಾನ್ 3 ವಿಕೆಟ್ ಪಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ