T20 World Cup 2024: ಸಂಕಷ್ಟಕ್ಕೆ ಸಿಲುಕಿದ ಆಸ್ಟ್ರೇಲಿಯಾ ತಂಡ; ನಾಯಕನಿಗೆ 2 ಪಂದ್ಯಗಳಿಂದ ನಿಷೇಧದ ಆತಂಕ..!

|

Updated on: Jun 13, 2024 | 5:00 PM

T20 World Cup 2024: ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯದ ಫಲಿತಾಂಶವನ್ನು ದುರ್ಬಳಕೆ ಮಾಡುವ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಲೀಗ್​ನಿಂದ ಹೊರಹಾಕಲು ಪ್ರಯತ್ನಿಸಿದರೆ, ತಂಡದ ನಾಯಕ ಮಿಚೆಲ್ ಮಾರ್ಷ್ ನಿಷೇಧದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನಿಯಮದ ಪ್ರಕಾರ ತಂಡದ ನಾಯಕ ಮಾರ್ಷ್ ತನ್ನ ಮೂರು ಸೂಪರ್ ಎಂಟು ಪಂದ್ಯಗಳಲ್ಲಿ ಎರಡು ಪಂದ್ಯಗಳಿಂದ ನಿಷೇಧಕ್ಕೊಳಗಾಗಬಹುದು.

T20 World Cup 2024: ಸಂಕಷ್ಟಕ್ಕೆ ಸಿಲುಕಿದ ಆಸ್ಟ್ರೇಲಿಯಾ ತಂಡ; ನಾಯಕನಿಗೆ 2 ಪಂದ್ಯಗಳಿಂದ ನಿಷೇಧದ ಆತಂಕ..!
ಆಸ್ಟ್ರೇಲಿಯಾ ತಂಡ
Follow us on

ಟಿ20 ವಿಶ್ವಕಪ್​ನ (T20 World Cup 2024) ಲೀಗ್ ಹಂತದ ಪಯಣ ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇದರೊಂದಿಗೆ ಸೂಪರ್ 8 ಸುತ್ತಿನ ಬಗ್ಗೆ ಚಿತ್ರಣ ಸ್ಪಷ್ಟವಾಗುತ್ತಿದೆ. ಮುಂದಿನ ಸುತ್ತಿಗೆ ಯಾವ್ಯಾವ ತಂಡಗಳು ಅರ್ಹತೆ ಪಡೆಯಲ್ಲಿವೆ ಎಂಬುದರ ಬಗ್ಗೆ ಈಗಾಗಲೇ ಅಂದಾಜು ಸಿಕ್ಕಿದೆ. ಅದರಂತೆ ಬಿ ಗುಂಪಿನಲ್ಲಿರುವ ಆಸ್ಟ್ರೇಲಿಯಾ ತಂಡ ಕೂಡ ಆಡಿರುವ 3 ಪಂದ್ಯಗಳಲ್ಲಿ 6 ಅಂಕ ಸಂಪಾದಿಸುವ ಮೂಲಕ ಈಗಾಗಲೇ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ ತನ್ನ ಮುಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಬೇಕಾಗಿರುವ ಆಸ್ಟ್ರೇಲಿಯಾ ತಂಡ (AUS vs SCO) ಐಸಿಸಿಯಿಂದ ಖಡಕ್ ಸೂಚನೆ ಪಡೆದಿದೆ. ಒಂದು ವೇಳೆ ಈ ಪಂದ್ಯದ ಪಲಿತಾಂಶ ಉದ್ದೇಶಕ ಪೂರ್ವಕವಾಗಿದೆ ಎಂಬುದು ಸಾಭೀತಾದರೆ, ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ (Mitchell Marsh) 2 ಪಂದ್ಯಗಳಿಂದ ನಿಷೇಧಕ್ಕೊಳಗಾಗಲಿದ್ದಾರೆ.

ಆಸೀಸ್ ಕೈಯಲ್ಲಿ ಇಂಗ್ಲೆಂಡ್ ಭವಿಷ್ಯ

ವಾಸ್ತವವಾಗಿ, ಹಾಲಿ ಚಾಂಪಿಯನ್ ಇಂಗ್ಲೆಂಡ್‌ ಕೂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಇಂಗ್ಲೆಂಡ್ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಆಸ್ಟ್ರೇಲಿಯಾ ಹಾಗೂ ಸ್ಕಾಟ್ಲೆಂಡ್ ನಡುವಿನ ಪಂದ್ಯ ನಿರ್ಣಾಯಕವಾಗಿದೆ. ‘ಬಿ’ ಗುಂಪಿನಲ್ಲಿರುವ ಆಸ್ಟ್ರೇಲಿಯಾ ಇದೇ ಜೂನ್ 16ರಂದು ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ, ಈಗಾಗಲೇ ಅರ್ಹತೆ ಪಡೆದಿರುವ ಕಾರಣ ಯಾವುದೇ ವ್ಯತ್ಯಾಸವಾಗುವುದಿಲ್ಲ. ಒಂದು ವೇಳೆ ಆಸೀಸ್ ಪಡೆ ಈ ಪಂದ್ಯದಲ್ಲಿ ಸೋತರೆ ಇಂಗ್ಲೆಂಡ್ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಏಕೆಂದರೆ ಬಿ ಗುಂಪಿನಲ್ಲಿರುವ ಇಂಗ್ಲೆಂಡ್ ತಂಡ ಈಗ 2 ಪಂದ್ಯಗಳನ್ನಾಡಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾದರೆ, ಇನ್ನೊಂದು ಪಂದ್ಯದಲ್ಲಿ ಸೋಲನುಭವಿಸಿದೆ. ಹೀಗಾಗಿ ತಂಡದ ಬಳಿ ಕೇವಲ 1 ಅಂಕ ಮಾತ್ರ ಇದೆ. ಇಂತಹ ಪರಿಸ್ಥಿತಿಯಲ್ಲಿ ಆಸೀಸ್ ವಿರುದ್ಧ ಸ್ಕಾಟ್ಲೆಂಡ್ ಗೆದ್ದರೆ, ಇಂಗ್ಲೆಂಡ್ ಮುಂದಿನ ಸುತ್ತಿಗೆ ಹೋಗುವ ಕನಸು ಭಗ್ನವಾಗಲಿದೆ. ಇದಲ್ಲದೆ ಸ್ಕಾಟ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಅಲ್ಪ ಅಂತರದಿಂದ ಸೋಲಿಸಿದರೂ ಇಂಗ್ಲೆಂಡ್​ನ ಕನಸು ಭಗ್ನವಾಗಬಹುದು. ಏಕೆಂದರೆ ಸ್ಕಾಟ್ಲೆಂಡ್ ಈಗಾಗಲೇ 2 ಗೆಲುವುಗಳೊಂದಿಗೆ +2.164 ನೆಟ್ ರನ್ ರೇಟ್ ಹೊಂದಿದೆ. ಆದರೆ ಇಂಗ್ಲೆಂಡಿನ ನೆಟ್ ರನ್ ರೇಟ್ -1.800 ಆಗಿದೆ. ಆದ್ದರಿಂದ ಮುಂದಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದರೂ ದೊಡ್ಡ ಅಂತರದಿಂದ ಗೆಲ್ಲಲೇಬೇಕಾಗಿದೆ.

T20 World Cup 2024: ಭಾರತ- ಪಾಕ್ ಪಂದ್ಯ ನಡೆದ ನ್ಯೂಯಾರ್ಕ್ ಕ್ರೀಡಾಂಗಣ ನೆಲಸಮ! ಕಾರಣವೇನು ಗೊತ್ತಾ?

ಮಾರ್ಷ್​ಗೆ 2 ಪಂದ್ಯಗಳಿಂದ ನಿಷೇಧ

ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯದ ಫಲಿತಾಂಶವನ್ನು ದುರ್ಬಳಕೆ ಮಾಡುವ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಲೀಗ್​ನಿಂದ ಹೊರಹಾಕಲು ಪ್ರಯತ್ನಿಸಿದರೆ, ತಂಡದ ನಾಯಕ ಮಿಚೆಲ್ ಮಾರ್ಷ್ ನಿಷೇಧದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನಿಯಮದ ಪ್ರಕಾರ ತಂಡದ ನಾಯಕ ಮಾರ್ಷ್ ತನ್ನ ಮೂರು ಸೂಪರ್ 8 ಪಂದ್ಯಗಳಲ್ಲಿ ಎರಡು ಪಂದ್ಯಗಳಿಂದ ನಿಷೇಧಕ್ಕೊಳಗಾಗಬಹುದು.

ನಿಯಮ ಏನು ಹೇಳುತ್ತದೆ?

ಐಸಿಸಿ ಈವೆಂಟ್‌ನಲ್ಲಿ ತಂಡವೊಂದು ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತರೆ ಮತ್ತು ಅದು ಇತರ ತಂಡಗಳ ಸ್ಥಾನದ ಮೇಲೆ ಪರಿಣಾಮ ಬೀರಿದರೆ, ತಂಡದ ನಾಯಕನನ್ನು ತಪ್ಪಿತಸ್ಥರೆಂದು ಪರಿಗಣಿಸಬಹುದು ಮತ್ತು ಅವರನ್ನು ನಿಷೇಧಿಸಬಹುದು. ಅಪರಾಧದ ಗಂಭೀರತೆಯನ್ನು ಅವಲಂಬಿಸಿ, ಪಂದ್ಯದ ಶುಲ್ಕದ ಕನಿಷ್ಠ 50% ದಂಡವನ್ನು ಸಹ ವಿಧಿಸಬಹುದು. ಇದರರ್ಥ ಮಾರ್ಷ್, ಗರಿಷ್ಠ ನಾಲ್ಕು ಡಿಮೆರಿಟ್ ಅಂಕ ಮತ್ತು ಎರಡು ಅಮಾನತು ಅಂಕಗಳೊಂದಿಗೆ ಮೊದಲ ಎರಡು ಸೂಪರ್ 8 ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 13 June 24