T20 World Cup 2024: ಟಿ20 ವಿಶ್ವಕಪ್ನ 13ನೇ ಪಂದ್ಯದಲ್ಲಿ ಕೆನಡಾ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕೆನಡಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಕೇವಲ 28 ರನ್ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕೆನಡಾ ತಂಡಕ್ಕೆ ನಿಕೋಲಸ್ ಕಿರ್ಟನ್ ಹಾಗೂ ಶ್ರೇಯಸ್ ಮೋವಾ ಆಸರೆಯಾದರು. ಉತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿ ಅರ್ಧಶತಕದ ಪಾಲುದಾರಿಕೆ ನೀಡಿದರು.
ಈ ವೇಳೆ ನಿಕೋಲಸ್ ಕಿರ್ಟನ್ 35 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 49 ರನ್ ಬಾರಿಸಿದರೆ, ಶ್ರೇಯಸ್ ಮೋವಾ 36 ಎಸೆತಗಳಲ್ಲಿ 37 ರನ್ ಕಲೆಹಾಕಿದರು. ಈ ಮೂಲಕ ಕೆನಡಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು.
138 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು 53 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜಾರ್ಜ್ ಡಾಕ್ರೆಲ್ 30 ರನ್ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ಕ್ ಅಡೈರ್ 34 ರನ್ಗಳ ಕೊಡುಗೆ ನೀಡಿದರು.
ಆದರೆ ಅಂತಿಮ ಓವರ್ಗಳ ವೇಳೆ ಬಿಗುವಿನ ದಾಳಿ ಸಂಘಟಿಸಿದ ಕೆನಡಾ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸಲು ಯಶಸ್ವಿಯಾದರು. ಪರಿಣಾಮ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೆನಡಾ ತಂಡವು ಟಿ20 ವಿಶ್ವಕಪ್ನಲ್ಲಿ ತನ್ನ ಮೊದಲ ಜಯ ಸಾಧಿಸಿದೆ.
ಕೆನಡಾ ಪ್ಲೇಯಿಂಗ್ 11: ಆರೋನ್ ಜಾನ್ಸನ್ , ನವನೀತ್ ಧಲಿವಾಲ್ , ಪರ್ಗತ್ ಸಿಂಗ್ , ನಿಕೋಲಸ್ ಕಿರ್ಟನ್ , ಶ್ರೇಯಸ್ ಮೋವಾ (ವಿಕೆಟ್ ಕೀಪರ್) , ದಿಲ್ ಪ್ರೀತ್ ಬಾಜ್ವಾ , ಸಾದ್ ಬಿನ್ ಜಾಫರ್ (ನಾಯಕ) , ದಿಲ್ಲನ್ ಹೇಲಿಗರ್ , ಕಲೀಮ್ ಸನಾ , ಜುನೈದ್ ಸಿದ್ದಿಕಿ , ಜೆರೆಮಿ ಗಾರ್ಡನ್.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಉಗಾಂಡ ಬೌಲರ್
ಐರ್ಲೆಂಡ್ ಪ್ಲೇಯಿಂಗ್ 11: ಆಂಡ್ರ್ಯೂ ಬಾಲ್ಬಿರ್ನಿ , ಪಾಲ್ ಸ್ಟಿರ್ಲಿಂಗ್ (ನಾಯಕ) , ಲೋರ್ಕನ್ ಟಕರ್ (ವಿಕೆಟ್ ಕೀಪರ್) , ಹ್ಯಾರಿ ಟೆಕ್ಟರ್ , ಕರ್ಟಿಸ್ ಕ್ಯಾಂಫರ್ , ಜಾರ್ಜ್ ಡಾಕ್ರೆಲ್ , ಗರೆಥ್ ಡೆಲಾನಿ , ಮಾರ್ಕ್ ಅಡೇರ್ , ಬ್ಯಾರಿ ಮೆಕಾರ್ಥಿ , ಜೋಶುವಾ ಲಿಟಲ್ , ಕ್ರೇಗ್ ಯಂಗ್.