
ಆಸ್ಟ್ರೇಲಿಯಾ ಮತ್ತು ಒಮಾನ್ (Australia vs Oman) ನಡುವೆ ನಡೆದ ಟಿ20 ವಿಶ್ವಕಪ್ 2024 ರ (T20 World Cup 2024) 10ನೇ ಪಂದ್ಯದಲ್ಲಿ ಕಾಂಗರೂ ತಂಡ ಸುಲಭ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಓಪನರ್ ಡೇವಿಡ್ ವಾರ್ನರ್ (David Warner) ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ 56 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಹೆಜ್ಜೆಯಾಕುವ ವೇಳೆ ವಾರ್ನರ್ ಮಾಡಿಕೊಂಡ ಎಡವಟ್ಟಿನ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ 51 ಎಸೆತಗಳಲ್ಲಿ 56 ರನ್‌ಗಳ ಇನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಆದರೆ 56 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ ವಾರ್ನರ್, ಕಲೀಮುಲ್ಲಾ ಬೌಲಿಂಗ್ನಲ್ಲಿ ಕ್ಯಾಚಿತ್ತು ಔಟಾದರು. ಈ ವೇಳೆ ಔಟಾದ ನಿರಾಸೆಯಲ್ಲಿ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದ ವಾರ್ನರ್, ತಮ್ಮ ತಂಡದ ಡ್ರೆಸ್ಸಿಂಗ್ ಕೋಣೆಗೆ ಹೋಗುವ ಬದಲು ಎದುರಾಳಿ ತಂಡದ ಡ್ರೆಸಿಂಗ್ ಕೋಣೆಯತ್ತ ಹೆಜ್ಜೆ ಹಾಕಿದರು.
T20 World Cup 2024: ಗಲ್ಲಿ ಕ್ರಿಕೆಟ್ನಂತೆ ಬಾಲ್ಗಾಗಿ ಆಸೀಸ್ ಆಟಗಾರರ ಹುಡುಕಾಟ; ವಿಡಿಯೋ ವೈರಲ್
ಅದರ ನಂತರ ಯಾರೋ ಜೋರಾಗಿ ಕೂಗಿ ವಾರ್ನರ್ ಅವರು ಬೇರೆ ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದಾರೆ ಎಂದು ಹೇಳಿದರು. ಅದರ ನಂತರ ವಾರ್ನರ್ ಮೆಟ್ಟಿಲುಗಳ ಕೆಳಗೆ ಬಂದು ತನ್ನ ತಂಡದ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋದರು. ವಾರ್ನರ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಅಭಿಮಾನಿಗಳು ಕೂಡ ತರಹೆವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
David Warner almost entered the wrong dressing room 😭😭😭 pic.twitter.com/Qfmuq1ML0N
— DW 31 FOREVER (@jersey_no_46) June 6, 2024
ಇನ್ನು ಪಂದ್ಯದ ಫಲಿತಾಂಶದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯವನ್ನು ಆಸ್ಟ್ರೇಲಿಯಾ 39 ರನ್‌ಗಳಿಂದ ಗೆದ್ದುಕೊಂಡಿತು. ಟಾಸ್ ಗೆದ್ದ ಒಮಾನ್ ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 164 ರನ್ ಕಲೆಹಾಕಿತು. ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ 67 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ವಾರ್ನರ್ 56 ರನ್‌ಗಳ ಕೊಡುಗೆ ನೀಡಿದರು. ಮತ್ತೊಂದೆಡೆ 165 ರನ್‌ಗಳ ಗುರಿ ಬೆನ್ನಟ್ಟಿದ ಒಮಾನ್ ತಂಡ 125 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ