T20 World Cup 2024: ಖಾಲಿ ಹೊಡೆಯುತ್ತಿವೆ ಕ್ರೀಡಾಂಗಣಗಳು; ಭಾರತ- ಪಾಕ್ ಪಂದ್ಯವೇ ಐಸಿಸಿ ಪಾಲಿಗೆ ನಿರ್ಣಾಯಕ..!

T20 World Cup 2024: ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಟೀಂ ಇಂಡಿಯಾದ ಪಂದ್ಯಗಳೇ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ನಿನ್ನೆ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಕ್ಕೆ ಅಭಿಮಾನಿಗಳ ಕೊರತೆ ಎದ್ದು ಕಾಣುತ್ತಿತತ್ತು.

T20 World Cup 2024: ಖಾಲಿ ಹೊಡೆಯುತ್ತಿವೆ ಕ್ರೀಡಾಂಗಣಗಳು; ಭಾರತ- ಪಾಕ್ ಪಂದ್ಯವೇ ಐಸಿಸಿ ಪಾಲಿಗೆ ನಿರ್ಣಾಯಕ..!
ಟಿ20 ವಿಶ್ವಕಪ್ 2024
Follow us
ಪೃಥ್ವಿಶಂಕರ
|

Updated on:Jun 06, 2024 | 4:35 PM

2024ರ ಟಿ20 ವಿಶ್ವಕಪ್‌ (T20 World Cup 2024) ಆರಂಭವಾಗಿ ಹತ್ತಿರಹತ್ತಿರ ಒಂದು ವಾರ ಕಳೆದಿದೆ. ಆದಾಗ್ಯೂ ಈ ಬಾರಿಯ ಟಿ20 ವಿಶ್ವಕಪ್​ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಐಸಿಸಿ (ICC) ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಟೀಂ ಇಂಡಿಯಾದ ಪಂದ್ಯಗಳೇ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ನಿನ್ನೆ ನಡೆದ ಐರ್ಲೆಂಡ್ ವಿರುದ್ಧದ (IND vs IRE) ಪಂದ್ಯವೇ ಇದಕ್ಕೆ ಸಾಕ್ಷಿ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಕ್ಕೆ ಅಭಿಮಾನಿಗಳ ಕೊರತೆ ಎದ್ದು ಕಾಣುತ್ತಿತ್ತು. ಇದಕ್ಕೆ ದೊಡ್ಡ ಕಾರಣವೆಂದರೆ ಟೀಂ ಇಂಡಿಯಾದ (Team India) ಪಂದ್ಯಗಳ ಟಿಕೆಟ್ ದರ ದುಬಾರಿಯಾಗಿರುವುದು ಮತ್ತು ಐಸಿಸಿಯ ಕಳಪೆ ಮಾರ್ಕೆಟಿಂಗ್ ಯೋಜನೆ ಎಂದು ಹೇಳಲಾಗುತ್ತಿದೆ. 2024 ರ ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳಲ್ಲಿ ಇದುವರೆಗೆ ಆಡಿದ ಕ್ರೀಡಾಂಗಣದ ಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿಮಾನಿಗಳು ಹಾಜರಾಗಿಲ್ಲ. ಮುಂದಿನ ದಿನಗಳಲ್ಲೂ ಇದೇ ಕಥೆಯಾದರೆ ಈ ಬಾರಿ ಐಸಿಸಿ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳಲಿದೆ. ಹಾಗದರೆ ಐಸಿಸಿ ಎಡವಿದ್ದಾದರೂ ಎಲ್ಲಿ? ಅಭಿಮಾನಿಗಳ ನಿರಾಸಕ್ತಿ ಏಕೆ? ಇದೆಲ್ಲದಕ್ಕೂ ಉತ್ತರ ಇಲ್ಲಿದೆ.

ಐಸಿಸಿ ಎಡವಿದ್ದೇಲ್ಲಿ?

ಹೊಡಿಬಡಿ ಆಟದಿಂದಾಗಿ ಅಭಿಮಾನಿಗಳಿಗೆ ಹೆಚ್ಚು ಮನರಂಜನೆ ನೀಡುವುದೇ ಈ ಟಿ20 ಮಾದರಿ. ಹೀಗಾಗಿ ಈ ಬಾರಿ 2 ದೇಶಗಳಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಮೂಲಕ ಭರ್ಜರಿ ಲಾಭ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಐಸಿಸಿಯ ಯೋಜನೆ ಉಲ್ಟಾ ಹೊಡೆದಿದೆ. ಇದುವರೆಗೆ ನಡೆದಿರುವ 10 ಪಂದ್ಯಗಳೂ ಭಾಗಶಃ ಖಾಲಿ ಕ್ರೀಡಾಂಗಣದಲ್ಲೇ ನಡೆದಿವೆ. ಇದಕ್ಕೆ ಪ್ರಮುಖ ಕಾರಣ ಐಸಿಸಿ ನಿಗದಿಪಡಿಸಿರುವ ಟಿಕೆಟ್ ದರ ಎಂದು ಹೇಳಲಾಗುತ್ತಿದೆ.

Breaking: ವಿನ್ನರ್​ಗೆ ದಾಖಲೆ ಮೊತ್ತದ ಬಹುಮಾನ! ಟಿ20 ವಿಶ್ವಕಪ್ ಬಹುಮಾನದ ಮೊತ್ತ ಪ್ರಕಟಿಸಿದ ಐಸಿಸಿ

ಟಿಕೆಟ್ ಬೆಲೆ ಬಲು ದುಬಾರಿ

ಉದಾಹರಣೆಗೆ ಭಾರತ ಹಾಗೂ ಐರ್ಲೆಂಡ್ ನಡುವಿನ ಪಂದ್ಯಕ್ಕೆ ಕ್ರೀಡಾಂಗಣದ ಪ್ರೀಮಿಯಂ ಉತ್ತರ ಮತ್ತು ದಕ್ಷಿಣ ಸ್ಟ್ಯಾಂಡ್‌ಗಳ ಟಿಕೆಟ್‌ಗಳ ಬೆಲೆ ಸುಮಾರು 1,000 ಯುಎಸ್ ಡಾಲರ್‌ಗಳು ಅಂದರೆ 83 ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಟಿಕೆಟ್​ಗಳನ್ನು ಯಾರೂ ಖರೀದಿಸಿಲ್ಲ. ಅಲ್ಲದೆ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಪರದೆಯ ಸುತ್ತಲೂ ಸಾಕಷ್ಟು ಖಾಲಿ ಆಸನಗಳು ಗೋಚರಿಸಿದ್ದರಿಂದ ಪ್ರಸಾರಕರಿಗೂ ಇದು ಮುಜುಗರ ತಂದಿತ್ತು.

ಭಾರತ-ಐರ್ಲೆಂಡ್ ಪಂದ್ಯದ ವೇಳೆ, 34 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಸುಮಾರು 20 ಸಾವಿರ ಪ್ರೇಕ್ಷಕರು ಮಾತ್ರ ಕ್ರೀಡಾಂಗಣದಲ್ಲಿ ಹಾಜರಿದ್ದರು. ಈ ಪಂದ್ಯ ವೀಕ್ಷಿಸಲು ಬಂದವರು ಕೂಡ ಕ್ರೀಡಾಂಗಣದ ವ್ಯವಸ್ಥೆ, ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸೌಲಭ್ಯಗಳು ಟಿಕೆಟ್‌ಗಳ ಬೆಲೆಗಿಂತ ಕೆಳಮಟ್ಟದ್ದಾಗಿವೆ ಎಂದು ಅಭಿಮಾನಿಗಳು ದೂರಿದ್ದರು.

ಭಾರತ- ಪಾಕ್ ಪಂದ್ಯವೇ ನಿರ್ಣಾಯಕ

ಇದೀಗ ಜೂನ್ 9 ರಂದು ಇದೇ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಐಸಿಸಿ ಆಯೋಜಿಸಬೇಕಿದೆ. ಈ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಲಿ ಎಂಬುದು ಐಸಿಸಿ ಪ್ರಾರ್ಥನೆಯಾಗಿದೆ. ಆದರೆ, ಸದ್ಯಕ್ಕಂತೂ ಇದರ ಸಾಧ್ಯತೆ ಕಾಣುತ್ತಿಲ್ಲ. ಇದಕ್ಕೆ ದೊಡ್ಡ ಕಾರಣ ನ್ಯೂಯಾರ್ಕ್‌ನ ಕೆಟ್ಟ ಪಿಚ್ ಎಂದು ಹೇಳಲಾಗುತ್ತಿದೆ. ಈ ಮೈದಾನದಲ್ಲಿ ನಡೆದಿರುವ ಎರಡು ಪಂದ್ಯಗಳಲ್ಲಿ 100 ರನ್ ಕೂಡ ದಾಖಲಾಗಿಲ್ಲ. ಇದಲ್ಲದೇ ಟಿಕೆಟ್ ದರ ಏರಿಕೆಯೂ ಪ್ರಮುಖ ಕಾರಣವಾಗಿದೆ.

ನಾವು ಇಲ್ಲಿಯವರೆಗಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದರೆ, ಭಾರತ- ಪಾಕ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಡೈಮಂಡ್ ಕ್ಲಬ್ ಸೀಟ್‌ಗಳ ಬೆಲೆ ರೂ 8 ಲಕ್ಷ ($ 10,000), ಕಾರ್ನರ್ ಕ್ಲಬ್ ಸೀಟ್‌ಗಳ ಬೆಲೆ ರೂ 2.2 ಲಕ್ಷ ($ 2,750) ಮತ್ತು ಪ್ರೀಮಿಯಂ ಕ್ಲಬ್ ಲೌಂಜ್ ಸೀಟ್‌ಗಳ ಬೆಲೆ ರೂ 2 ಲಕ್ಷ ($ 2,500) ನಿಗದಿಪಡಿಸಲಾಗಿದ್ದು, ಮೂರೂ ಸ್ಥಳಗಳಲ್ಲಿ ಇನ್ನೂ ಸಾಕಷ್ಟು ಆಸನಗಳು ಲಭ್ಯವಿವೆ.

ಹೆಚ್ಚುವರಿ ಟಿಕೆಟ್‌ಗಳನ್ನೂ ನೀಡಲಾಗಿದೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಐಸಿಸಿ ಇತ್ತೀಚೆಗೆ ಹಲವಾರು ಹೆಚ್ಚುವರಿ ಟಿಕೆಟ್‌ಗಳನ್ನು ನೀಡಿತ್ತು. ಇದೀಗ ಐಸಿಸಿ ಈ ಪಂದ್ಯಕ್ಕೆ ಕ್ರೀಡಾಂಗಣವನ್ನು ಭರ್ತಿ ಮಾಡಲು ವಿಫಲವಾದರೆ, ವಿಶ್ವಕಪ್ ಅನ್ನು ಯುಎಸ್ಎಯಲ್ಲಿ ಆಯೋಜಿಸುವ ಕ್ರಮ ಐಸಿಸಿ ತೆಗೆದುಕೊಂಡ ದೊಡ್ಡ ತಪ್ಪು ನಿರ್ಧಾರ ಎಂದು ಸಾಭೀತಾಗಲಿದೆ. ಏಕೆಂದರೆ ಈ ಪಂದ್ಯಕ್ಕೆ ಜನ ಬರದಿದ್ದರೆ, ಉಳಿದ ಪಂದ್ಯಗಳ ಕತೆ ಅಯೋಮಯವಾಗಲಿದೆ. ಭಾರತದ ನಾಲ್ಕು ಗುಂಪು ಪಂದ್ಯಗಳಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿವೆ. ಈ ಪಂದ್ಯಗಳಿಗೆ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಕರೆತರಲು ಸಂಘಟಕರು ಹೆಣಗಾಡುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್ ಅಥವಾ 2021-2022ರ ಟಿ20 ವಿಶ್ವಕಪ್‌ನಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಮಾರುಕಟ್ಟೆಯನ್ನು ಸಂಶೋಧಿಸದೆ ಅಮೆರಿಕದಲ್ಲಿ ಟೂರ್ನಿ ನಡೆಸಲು ಐಸಿಸಿ ಆತುರದ ನಿರ್ಧಾರ ಕೈಗೊಂಡಿರುವುದು ಅವರಿಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ತಜ್ಞರು.

ದಾಖಲೆ ಸೃಷ್ಟಿಸಿದ್ದ ಏಕದಿ ವಿಶ್ವಕಪ್

ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ಗೆ ಪ್ರೇಕ್ಷಕರ ಅನುಪಸ್ಥಿತಿ ಎದುರಾಗಿದ್ದರೆ, ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್​ನ ಕೆಲವು ಆಯ್ದ ಪಂದ್ಯಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಕ್ರೀಡಾಂಗಣವು ತುಂಬಿತ್ತು. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ ಅಭಿಮಾನಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಇದರಿಂದ ಐಸಿಸಿ ಖಜಾನೆಗೆ ನಿರೀಕ್ಷೆಗೂ ಮೀರಿದ ಆದಾಯ ಬಂದು ಬಿದ್ದಿತ್ತು. ಇದೇ ಹುಮ್ಮಸ್ಸಿನಲ್ಲಿ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದ ಐಸಿಸಿ ಇದೀಗ ಕೈಸುಟ್ಟುಕೊಂಡಂತೆ ತೋರುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Thu, 6 June 24

ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ