AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಗಲ್ಲಿ ಕ್ರಿಕೆಟ್​ನಂತೆ ಬಾಲ್​ಗಾಗಿ ಆಸೀಸ್ ಆಟಗಾರರ ಹುಡುಕಾಟ; ವಿಡಿಯೋ ವೈರಲ್

T20 World Cup 2024: ಸ್ಟ್ರೀಟ್ ಕ್ರಿಕೆಟ್ ಆಡುವಾಗ, ಚೆಂಡು ಕೆಲವೊಮ್ಮೆ ಎಲ್ಲೋ ಕಳೆದುಹೋಗುತ್ತದೆ. ಅದನ್ನು ಹುಡುಕಲು ಆಟಗಾರರು ತುಂಬಾ ಕಷ್ಟಪಡಬೇಕಾಗುತ್ತದೆ. ಇದರಿಂದಾಗಿ ಪಂದ್ಯ ನಿಂತುಹೋಗವುದನ್ನು ನಾವು ನೋಡಿದ್ದೇವೆ. ಇದೀಗ ಆಸ್ಟ್ರೇಲಿಯಾ ಮತ್ತು ಒಮಾನ್ ನಡುವಿನ ಪಂದ್ಯಗಳಲ್ಲಿ ಇದೇ ರೀತಿಯ ಘಟನೆ ನಡೆದಿದೆ.

T20 World Cup 2024: ಗಲ್ಲಿ ಕ್ರಿಕೆಟ್​ನಂತೆ ಬಾಲ್​ಗಾಗಿ ಆಸೀಸ್ ಆಟಗಾರರ ಹುಡುಕಾಟ; ವಿಡಿಯೋ ವೈರಲ್
ಚೆಂಡಿಗಾಗಿ ಹುಡುಕಾಟ
ಪೃಥ್ವಿಶಂಕರ
|

Updated on: Jun 06, 2024 | 5:13 PM

Share

ಆಸ್ಟ್ರೇಲಿಯಾ ತಂಡ 2024ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ಒಮಾನ್‌ ತಂಡವನ್ನು (Australia vs Oman) 39 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 20 ಓವರ್‌ಗಳಲ್ಲಿ 164 ರನ್ ಗಳಿಸಿತು, ಉತ್ತರವಾಗಿ ಒಮನ್ ತಂಡ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಪಂದ್ಯದ ಸಾರಾಂಶವಾದರೆ… ಇನ್ನು ಇದೇ ಪಂದ್ಯದಲ್ಲಿ, ಸಾಮಾನ್ಯವಾಗಿ ಗಲ್ಲಿ ಕ್ರಿಕೆಟ್‌ನಲ್ಲಿ ಕಂಡುಬರುವ ವಿಚಿತ್ರ ಘಟನೆಯೊಂದು ಕಂಡುಬಂತು. ಸ್ಟ್ರೀಟ್ ಕ್ರಿಕೆಟ್ ಆಡುವಾಗ, ಚೆಂಡು ಕೆಲವೊಮ್ಮೆ ಎಲ್ಲೋ ಕಳೆದುಹೋಗುತ್ತದೆ. ಅದನ್ನು ಹುಡುಕಲು ಆಟಗಾರರು ತುಂಬಾ ಕಷ್ಟಪಡಬೇಕಾಗುತ್ತದೆ. ಇದರಿಂದಾಗಿ ಪಂದ್ಯ ನಿಂತುಹೋಗವುದನ್ನು ನಾವು ನೋಡಿದ್ದೇವೆ. ಇದೀಗ ಆಸ್ಟ್ರೇಲಿಯಾ ಮತ್ತು ಒಮಾನ್ ನಡುವಿನ ಪಂದ್ಯಗಳಲ್ಲಿ ಇದೇ ರೀತಿಯ ಘಟನೆ ನಡೆದಿದೆ.

ಚೆಂಡಿಗಾಗಿ ಆಡಮ್ ಝಂಪಾ ಹುಡುಕಾಟ

ಆಸ್ಟ್ರೇಲಿಯಾ ನೀಡಿದ 165 ರನ್​ಗಳ ಗುರಿ ಬೆನ್ನಟ್ಟಲು ಬಂದ ಒಮನ್ ತಂಡ 34 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಇದಾದ ನಂತರ ಅಯಾನ್ ಖಾನ್ ಮತ್ತು ಖಾಲಿದ್ ಕೈಲ್ ಜೊತೆಯಾಗಿ ತಂಡದ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಈ ವೇಳೆ ಅವರು 9ನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ನಾಥನ್ ಎಲ್ಲಿಸ್ ಎಸೆದ ಈ ಎಸೆತ ಬ್ಯಾಟ್​ನ ಅಂಚಿಗೆ ತಾಗಿ ಸ್ಲಿಪ್‌ ಬಳಿ ಬೌಂಡರಿ ದಾಟಿತು.ಆ ಬಳಿಕ ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಆಡಮ್ ಝಂಪಾ ಚೆಂಡನ್ನು ತೆಗೆದುಕೊಂಡು, ಬೌಲರ್​ಗೆ ಎಸೆಯಲು ಹೋದರು. ಆದರೆ ಎಷ್ಟೇ ಹುಡುಕಿದರು ಝಂಪಾ ಕೈಗೆ ಚೆಂಡು ಸಿಗಲಿಲ್ಲ. ಇದರಿಂದಾಗಿ ಪಂದ್ಯವನ್ನೂ ನಿಲ್ಲಿಸಬೇಕಾಯಿತು.

T20 World Cup 2024: ಖಾಲಿ ಹೊಡೆಯುತ್ತಿವೆ ಕ್ರೀಡಾಂಗಣಗಳು; ಭಾರತ- ಪಾಕ್ ಪಂದ್ಯವೇ ಐಸಿಸಿ ಪಾಲಿಗೆ ನಿರ್ಣಾಯಕ..!

ಕೆಲಕಾಲ ಚೆಂಡು ಸಿಗದೇ ಇದ್ದಾಗ ಆಸ್ಟ್ರೇಲಿಯದ ಆಟಗಾರರು ಬೀದಿ ಕ್ರಿಕೆಟ್‌ನ ವಾತಾವರಣ ಕಂಡು ಅಚ್ಚರಿಗೊಂಡರು. ಚೆಂಡಿಗಾಗಿ ಕಾದು ಕಾದು ವೇಗಿ ನಾಥನ್ ಎಲ್ಲಿಸ್ ಕೂಡ ಸುಸ್ತಾದರು. ಆ ಬಳಿಕ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್, ಝಂಪಾ ಕಷ್ಟದಲ್ಲಿರುವುದನ್ನು ಕಂಡು ಅವರಿಗೆ ಸಹಾಯ ಮಾಡಲು ಹೋದರು. ಆದರೆ, ಅವರು ಬೌಂಡರಿ ಲೈನ್ ಬಳಿಗೆ ಹೋಗುವಷ್ಟರಲ್ಲಿ ಝಂಪಾ ಕೈಗೆ ಚೆಂಡು ಸಿಕ್ಕಿತು. ಅಂತಿಮವಾಗಿ ಪಂದ್ಯ ಮತ್ತೆ ಆರಂಭವಾಯಿತು.

View this post on Instagram

A post shared by ICC (@icc)

ಮ್ಯಾಕ್ಸ್‌ವೆಲ್-ಹೆಡ್ ಮತ್ತೆ ಫೇಲ್

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯದಲ್ಲಿ ಆಸೀಸ್ ಗೆದ್ದಿತ್ತಾದರೂ, ತಂಡದ ಬ್ಯಾಟಿಂಗ್ ಜೀವಾಳವಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಟ್ರಾವಿಸ್ ಹೆಡ್ ಅವರ ಕೆಟ್ಟ ಫಾರ್ಮ್ ಟಿ20 ವಿಶ್ವಕಪ್‌ನಲ್ಲೂ ಮುಂದುವರೆಯಿತು. ಇಬ್ಬರೂ ದಯನೀಯವಾಗಿ ವಿಫಲರಾದರು. ಹೆಡ್ ಕೇವಲ 12 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಆದರೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡದ್ದ ಡೇವಿಡ್ ವಾರ್ನರ್ ಕಠಿಣ ಪಿಚ್‌ನಲ್ಲಿ 51 ಎಸೆತಗಳಲ್ಲಿ 56 ರನ್‌ಗಳ ಇನಿಂಗ್ಸ್ ಆಡಿದರು. ಇದಲ್ಲದೇ, ಮಾರ್ಕಸ್ ಸ್ಟೋನಿಸ್ 36 ಎಸೆತಗಳಲ್ಲಿ 67 ರನ್‌ಗಳ ಬಿರುಸಿನ ಇನ್ನಿಂಗ್ಸ್‌ನೊಂದಿಗೆ ಆಸ್ಟ್ರೇಲಿಯಾವನ್ನು 164 ರನ್‌ಗಳಿಗೆ ಕೊಂಡೊಯ್ದರು ಮತ್ತು ಬೌಲಿಂಗ್‌ನಲ್ಲಿಯೂ ಅವರು 3 ಓವರ್‌ಗಳಲ್ಲಿ 19 ರನ್‌ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿನ ಹೀರೋ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್