AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಗಯಾನಾ ಪಿಚ್‌ ಯಾರಿಗೆ ಸಹಕಾರಿ; ಈ ಮೈದಾನದಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿದೆ?

IND vs ENG, Guyana Pitch Report: ಉಭಯ ತಂಡಗಳ ನಡುವೆ ಇದುವರೆಗೆ 23 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದಿದ್ದು, ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಇನ್ನು ಕಳೆದ 5 ಟಿ20 ಪಂದ್ಯಗಳ ಬಗ್ಗೆ ಹೇಳುವುದಾದರೆ, ಭಾರತ 3 ಮತ್ತು ಇಂಗ್ಲೆಂಡ್ 2 ಪಂದ್ಯಗಳನ್ನು ಗೆದ್ದಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಎರಡೂ ತಂಡಗಳು ಬಲಿಷ್ಠವಾಗಿದ್ದು, ಪಂದ್ಯ ಕಠಿಣವಾಗಿರಲಿದೆ.

IND vs ENG: ಗಯಾನಾ ಪಿಚ್‌ ಯಾರಿಗೆ ಸಹಕಾರಿ; ಈ ಮೈದಾನದಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿದೆ?
ಭಾರತ- ಇಂಗ್ಲೆಂಡ್
Follow us
ಪೃಥ್ವಿಶಂಕರ
|

Updated on: Jun 26, 2024 | 9:26 PM

2024 ರ ಟಿ20 ವಿಶ್ವಕಪ್ ಚಾಂಪಿಯನ್ ಆಗಬೇಕಾದರೆ, ಭಾರತ ಈಗ ಕೇವಲ 2 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಅದರಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಬೇಕಾಗಿದೆ. ಇದಾದ ಬಳಿಕ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ನಾಳೆ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಮುಖಾಮುಖಿ ದಾಖಲೆ ಹಾಗೂ ಈ ಪಂದ್ಯ ನಡೆಯಲ್ಲಿರುವ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂಬುದರ ವಿವರ ಇಲ್ಲಿದೆ.

ಗಯಾನಾ ಪಿಚ್‌ ಯಾರಿಗೆ ಸಹಕಾರಿ

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನ ಪಿಚ್​ನಲ್ಲಿ ಇಲ್ಲಿಯವರೆಗೆ ಸ್ಪಿನ್ ಬೌಲರ್‌ಗಳು ಹೆಚ್ಚು ಮೇಲುಗೈ ಸಾಧಿಸಿದ್ದಾರೆ. ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಇದುವರೆಗೆ ಟಿ20 ಮಾದರಿಯ 34 ಪಂದ್ಯಗಳು ನಡೆದಿದ್ದು, ಇದರಲ್ಲಿ 16 ಬಾರಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದ್ದರೆ, 14 ಬಾರಿ ಗುರಿ ಬೆನ್ನಟ್ಟಿದ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದೇ ಸಮಯದಲ್ಲಿ, ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ ಸುಮಾರು 127 ರನ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ ಕೇವಲ 95 ರನ್ ಆಗಿದೆ.

T20 World Cup: ಅತಿ ಹೆಚ್ಚು ಸೆಮಿಫೈನಲ್ ಪಂದ್ಯಗಳನ್ನು ಸೋತ ತಂಡ ಯಾವುದು ಗೊತ್ತಾ?

ಯಾರು ಮೇಲುಗೈ ಸಾಧಿಸಿದ್ದಾರೆ?

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಒಟ್ಟು 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಎರಡು ಬಾರಿ ಗೆದ್ದಿದ್ದರೆ, ಇಂಗ್ಲೆಂಡ್ ಎರಡು ಬಾರಿ ಗೆದ್ದಿದೆ. ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯ 2007ರ ವಿಶ್ವಕಪ್‌ನಲ್ಲಿ ನಡೆದಿತ್ತು. ಇದರಲ್ಲಿ ಭಾರತ 18 ರನ್‌ಗಳ ಜಯ ಸಾಧಿಸಿತು. ಇದಾದ ಬಳಿಕ 2009ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಭಾರತವನ್ನು 3 ರನ್‌ಗಳಿಂದ ಸೋಲಿಸಿತ್ತು. ಅದೇ ಸಮಯದಲ್ಲಿ, 2012 ರ ವಿಶ್ವಕಪ್‌ನಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು 90 ರನ್‌ಗಳಿಂದ ಸೋಲಿಸಿತು. ಇದರ ನಂತರ, 2022 ರ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು, ಇದರಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಗೆದ್ದಿತು.

ಇನ್ನು ಅಂತರರಾಷ್ಟ್ರೀಯ ಟಿ20 ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 23 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದಿದ್ದು, ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಇನ್ನು ಕಳೆದ 5 ಟಿ20 ಪಂದ್ಯಗಳ ಬಗ್ಗೆ ಹೇಳುವುದಾದರೆ, ಭಾರತ 3 ಮತ್ತು ಇಂಗ್ಲೆಂಡ್ 2 ಪಂದ್ಯಗಳನ್ನು ಗೆದ್ದಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಎರಡೂ ತಂಡಗಳು ಬಲಿಷ್ಠವಾಗಿದ್ದು, ಪಂದ್ಯ ಕಠಿಣವಾಗಿರಲಿದೆ.

ಭಾರತ- ಇಂಗ್ಲೆಂಡ್‌ ದಾಖಲೆ ಹೇಗಿದೆ

ಭಾರತ ತಂಡವು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಇದುವರೆಗೆ 3 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಪೈಕಿ ಟೀಂ ಇಂಡಿಯಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯದಲ್ಲಿ ಸೋಲು ಅನುಭವಿಸಬೇಕಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಇಲ್ಲಿ ಕೇವಲ 2 ಟಿ20 ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ ಸೋಲನ್ನು ಎದುರಿಸುದ್ದರೆ, ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ