ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಇನ್ನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಹೀಗಿರುವಾಗ ಇಲ್ಲಿನ ವಾತಾವರಣ ಉಭಯ ತಂಡಗಳ ಟೆನ್ಷನ್ ಹೆಚ್ಚಿಸಿದೆ. ಬಾರ್ಬಡೋಸ್‌ನ ಹವಾಮಾನದ ಕುರಿತು ದೊಡ್ಡ ಅಪ್ಡೇಟ್ ಇದೀಗ ಹೊರಬಂದಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಬಾರ್ಬಡೋಸ್‌ನ ಹವಾಮಾನ ತಿಳಿಯಾಗಿದೆ, ಆದರೆ ಮೋಡ ಕವಿದ ವಾತಾವರಣ ಮುಂದುವರೆದಿದೆ. ಕೊಂಚ ಬಿಸಿಲು ಕಾಣಿಸಿಕೊಂಡಿದೆಯಾದರೂ ಗಾಳಿ ಕೂಡ ಜೋರಾಗಿ ಬೀಸುತ್ತಿದೆ. ಈ ಪಂದ್ಯ ಬಾರ್ಬಡೋಸ್‌ನಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಇಬ್ಬನಿ ಪ್ರಭಾವ ಬೀರುವ ಅವಕಾಶವಿಲ್ಲ. ಆದರೆ ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ಉಭಯ ತಂಡಗಳಿಗೂ ಸಮಸ್ಯೆ ಎದುರಾಗಬಹುದು.
WEATHER IS PERFECT AT BARBADOS…!!!!
– Great news for cricket fans. [Vipul Kashyap] pic.twitter.com/5ygL3PRlpA
— Johns. (@CricCrazyJohns) June 29, 2024
Latest weather forecast from Kensington Oval right now! pic.twitter.com/U4L9QDpRo5
— Vimal कुमार (@Vimalwa) June 29, 2024
ಕ್ರಿಕೆಟಿಗ ಮತ್ತು ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಕೂಡ ಬಾರ್ಬಡೋಸ್‌ನ ಇತ್ತೀಚಿನ ಪರಿಸ್ಥಿತಿಯನ್ನು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹವಾಮಾನವು ಸಾಕಷ್ಟು ಸ್ಪಷ್ಟವಾಗಿ ಕಾಣುತ್ತದೆ. ಕಾರ್ತಿಕ್ ಪ್ರಕಾರ, ಹವಾಮಾನವು ಸ್ಪಷ್ಟವಾಗಿದ್ದು, ಪಂದ್ಯವು ನಿಗದಿತ ಸಮಯಕ್ಕೆ ಪ್ರಾರಂಭವಾಗುವ ಸಾಧ್ಯತೆಯಿದೆ.
It rained YESTERDAY
As of now, Weather looks SOLID
perfect weather for playing conditions #T20WorldCup #T20WorldCup2024 #INDvsSAFinal #CricketTwitter pic.twitter.com/U2UFm31r1t
— DK (@DineshKarthik) June 29, 2024
ಶುಕ್ರವಾರ ಬಾರ್ಬಡೋಸ್‌ನಲ್ಲಿ ಮಳೆಯಾಗಿದೆ. ಇದು ಅಭಿಮಾನಿಗಳ ಟೆನ್ಷನ್ ಹೆಚ್ಚಿಸಿದೆ. ಆದರೆ, ಪಂದ್ಯದ ವೇಳೆ ಶೇ.60ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯಕ್ಕೆ ಮೀಸಲು ದಿನ ಇಡಲಾಗಿದೆ. ಅಲ್ಲದೆ, ಶನಿವಾರವೂ ಪಂದ್ಯವನ್ನು ಪೂರ್ಣಗೊಳಿಸಲು 190 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ