IND vs SA: ಯಾವ ತಂಡಕ್ಕೆ ಚಾಂಪಿಯನ್ ಕಿರೀಟ? ಭವಿಷ್ಯ ನುಡಿದ ಗಿಳಿ; ವಿಡಿಯೋ ವೈರಲ್
T20 World Cup 2024, IND vs SA final: ದಕ್ಷಿಣ ಆಫ್ರಿಕಾ ಮತ್ತು ಭಾರತದ ಹೆಸರುಗಳಿರುವ ಸ್ಲಿಪ್‌ಗಳನ್ನು ಗಿಳಿಯ ಮುಂದೆ ಹಿಡಿಯಲಾಗುತ್ತದೆ. ಗಿಳಿ ಸ್ವಲ್ಪ ಹೊತ್ತು ಎರಡೂ ಚೀಟಿಗಳನ್ನು ನೋಡುತ್ತದೆ. ಇದರ ನಂತರ ಅದು ತನ್ನ ಕೊಕ್ಕಿನಿಂದ ಭಾರತದ ಹೆಸರನ್ನು ಆಯ್ಕೆ ಮಾಡುತ್ತದೆ. ಅದೇನೆಂದರೆ, ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬುದು ಗಿಳಿಯ ಭವಿಷ್ಯವಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಭಾರತೀಯ ಕಾಲಮಾನ ಶನಿವಾರ ರಾತ್ರಿ 8 ಗಂಟೆಗೆ ನಡೆಯಲಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಈ ಅಮೋಘ ಪಂದ್ಯ ನಡೆಯಲಿದೆ. ಜಗತ್ತಿನಾದ್ಯಂತ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ. ಒಂದೆಡೆ ಭಾರತ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸತತ ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸುವ ಮೂಲಕ ಫೈನಲ್‌ಗೆ ತಲುಪಿದ್ದರೆ, ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಕೂಡ ಚೋಕರ್‌ಗಳ ಟ್ಯಾಗ್ ತೆಗೆದು ಫೈನಲ್‌ಗೆ ರಹದಾರಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಉಭಯ ತಂಡಗಳ ನಡುವೆ ಫೈನಲ್ ಪಂದ್ಯದಲ್ಲಿ ತೀವ್ರ ಪೈಪೋಟಿ ಏರ್ಪಡಬಹುದು. ಆದರೆ ಅದಕ್ಕೂ ಮುನ್ನ ಈ ಬಾರಿಯ ಚಾಂಪಿಯನ್ ಯಾರು ಎಂಬುದನ್ನು ಗಿಳಿಯೊಂದು ಭವಿಷ್ಯ ನುಡಿದಿದೆ.
ಚಾಂಪಿಯನ್ ತಂಡವನ್ನು ಆಯ್ಕೆ ಮಾಡಿದ ಗಿಳಿ
ವಾಸ್ತವವಾಗಿ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ಹೆಸರುಗಳಿರುವ ಸ್ಲಿಪ್‌ಗಳನ್ನು ಗಿಳಿಯ ಮುಂದೆ ಹಿಡಿಯಲಾಗುತ್ತದೆ. ಗಿಳಿ ಸ್ವಲ್ಪ ಹೊತ್ತು ಎರಡೂ ಚೀಟಿಗಳನ್ನು ನೋಡುತ್ತದೆ. ಇದರ ನಂತರ ಅದು ತನ್ನ ಕೊಕ್ಕಿನಿಂದ ಭಾರತದ ಹೆಸರನ್ನು ಆಯ್ಕೆ ಮಾಡುತ್ತದೆ. ಅದೇನೆಂದರೆ, ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬುದು ಗಿಳಿಯ ಭವಿಷ್ಯವಾಗಿದೆ.
India vs South Africa t20 World cup perrot Prediction #indvssa #t20worldcup2024 #RohitSharma#India #HeinrichKlassen #Shamsi #ViratKohli #Bumrah #Jadeja #Pant #HardikPandya pic.twitter.com/Z47qI2vx6t
— Sports (@Sportsforall90) June 28, 2024
ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯಕ್ಕೂ ಮೊದಲು ಗಿಳಿ ಇದೇ ರೀತಿಯ ಭವಿಷ್ಯ ನುಡಿದಿತ್ತು. ಅದರಂತೆ ಗಿಳಿಯ ಭವಿಷ್ಯವೂ ನಿಜವಾಗಿತ್ತು. ಗಿಳಿ ತನ್ನ ಕೊಕ್ಕಿನಿಂದ ದಕ್ಷಿಣ ಆಫ್ರಿಕಾದ ಹೆಸರನ್ನು ಆರಿಸಿಕೊಂಡಿತ್ತು. ಆ ಬಳಿಕ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿತ್ತು.
If u say something to this 🦜 they will say “ U violated the bird's rights ” Yaaara no Toti 😩😩😭 Lobi wrosta ba dar sara goram 🤯#SAvAFG #AFGvSA #T20WorldCup pic.twitter.com/sJqHonM3vb
— 🇦🇫 𝘏𝘢𝘴𝘴𝘪𝘣 𝘏𝘢𝘪𝘥𝘢𝘳 (@hassib_haidar) June 26, 2024
ಫೈನಲ್ ಪಂದ್ಯಕ್ಕೆ ಮಳೆಯ ಭೀತಿ
ಆದರೆ, ಬಾರ್ಬಡೋಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಬಾರ್ಬಡೋಸ್‌ನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಪಂದ್ಯದ ದಿನವೂ ಶೇ.60ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ಪಂದ್ಯವನ್ನು ಪೂರ್ಣಗೊಳಿಸಲು, ಹೆಚ್ಚುವರಿ 190 ನಿಮಿಷಗಳನ್ನು ಮೀಸಲಿರಿಸಲಾಗಿದೆ. ಇದರ ಹೊರತಾಗಿಯೂ, ಪಂದ್ಯವನ್ನು ನಡೆಸುವ ಸಾಧ್ಯತೆ ಇಲ್ಲದಿದ್ದರೆ ಜೂನ್ 30 ರಂದು ಅಂದರೆ ಮೀಸಲು ದಿನದಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಮೀಸಲು ದಿನದಂದು 190 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯವನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಇರುತ್ತದೆ. ನಿರಂತರವಾಗಿ ಮಳೆ ಸುರಿದರೆ ಅಥವಾ ಒದ್ದೆಯಾದ ಔಟ್‌ಫೀಲ್ಡ್‌ನಿಂದ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಇದರ ನಂತರ, ಎರಡೂ ತಂಡಗಳನ್ನು ಜಂಟಿಯಾಗಿ ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Sat, 29 June 24