ಭಾರತ ತಂಡ 2024 ರ ಟಿ20 ವಿಶ್ವಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಆಫ್ರಿಕಾ ತಂಡವನ್ನು ಮಣಿಸಿದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್‌ನ ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ಆದರೆ ಬೆಳ್ಳಿಯಿಂದ ಮಾಡಿದ ಈ ವಿಶ್ವಕಪ್ ಟ್ರೋಫಿ ಅಂತಿಮವಾಗಿ ಯಾರ ಬಳಿ ಉಳಿಯುತ್ತದೆ? ಇದರ ವಿನ್ಯಾಸಕರು ಯಾರು? ತಯಾರಕರು ಯಾರು? ಚಾಂಪಿಯನ್ ತಂಡಕ್ಕೆ ನೀಡುವ ಟ್ರೋಫಿಯ ಬೆಲೆ ಎಷ್ಟು? ವಿಶ್ವಕಪ್ ಗೆದ್ದ ತಂಡದ ಆಟಗಾರರು ಯಾವ ಬಹುಮಾನವನ್ನು ಪಡೆಯುತ್ತಾರೆ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇದಾಗಿದೆ.
ಟಿ20 ವಿಶ್ವಕಪ್‌ನ ಟ್ರೋಫಿಯು ಏಕದಿನ ವಿಶ್ವಕಪ್‌ಗಿಂತ ಭಿನ್ನವಾಗಿದೆ. ಏಕದಿನ ವಿಶ್ವಕಪ್ ಟ್ರೋಫಿ ಚಿನ್ನದಿಂದ ಮಾಡಲ್ಪಟ್ಟಿದ್ದರೆ, ಟಿ20 ವಿಶ್ವಕಪ್ ಟ್ರೋಫಿ ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯಲ್ಲಿ ಅಂದರೆ 2007 ರಲ್ಲಿ, ಈ ಟ್ರೋಫಿಯನ್ನು ಆಸ್ಟ್ರೇಲಿಯಾದ ಮಿನಾಲೆ ಬ್ರೈಸ್ ಡಿಸೈನ್ ಸ್ಟ್ರಾಟಜಿ ವಿನ್ಯಾಸಗೊಳಿಸಿದರು ಮತ್ತು ಇದನ್ನು ಅಮಿತ್ ಪಬುವಾಲ್ ಅವರು ಭಾರತದಲ್ಲಿ ತಯಾರಿಸಿದರು. ಇದರ ನಂತರ ಇದನ್ನು ಲಂಡನ್‌ನ ಲಿಂಕ್ಸ್‌ನಿಂದ ಉತ್ಪಾದಿಸಲು ಪ್ರಾರಂಭಿಸಲಾಯಿತು. 2021 ರಲ್ಲಿ, ಥಾಮಸ್ ಟ್ರೋಫಿಯ ಅಧಿಕೃತ ಸೃಷ್ಟಿಕರ್ತರಾದರು. ಈ ಟ್ರೋಫಿಯನ್ನು ಸಂಪೂರ್ಣವಾಗಿ ಬೆಳ್ಳಿ ಮತ್ತು ರೋಢಿಯಮ್‌ನಿಂದ ಮಾಡಲಾಗಿದೆ. ಇದರ ತೂಕ ಸುಮಾರು 12 ಕೆ.ಜಿ. ಇದರ ಎತ್ತರ 57.15 ಸೆಂ. ಅಗಲವು 16.5 ಸೆಂ.ಮೀ. ಮಾಧ್ಯಮ ವರದಿಗಳ ಪ್ರಕಾರ ಇದರ ಬೆಲೆ 15-20 ಲಕ್ಷ ರೂ. ಎಂದು ಹೇಳಲಾಗುತ್ತದೆ.
ಏಕದಿನ ವಿಶ್ವಕಪ್‌ನಂತೆ, ಟಿ20 ವಿಶ್ವಕಪ್‌ನ ನಿಜವಾದ ಟ್ರೋಫಿಯನ್ನು ತಂಡಕ್ಕೆ ನೀಡಲಾಗಿಲ್ಲ. ಬದಲಿಗೆ ಐಸಿಸಿ ಈ ಟ್ರೋಫಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದೆ. ಆದರೆ ತದ್ರೂಪಿ ಟ್ರೋಫಿಯನ್ನು (ಒಂದೇ ತರ ಕಾಣುವ ಮತ್ತೊಂದು ಟ್ರೋಫಿ) ವಿಜೇತ ತಂಡಕ್ಕೆ ನೀಡಲಾಗುತ್ತದೆ. ಐಸಿಸಿ ಪ್ರತಿ ತಂಡಕ್ಕೆ ಅನುಗುಣವಾಗಿ ಎಲ್ಲಾ ಮೂಲ ಟ್ರೋಫಿಗಳನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತದೆ.
ವಿಜೇತ ತಂಡವು ಪಡೆಯುವ ತದ್ರೂಪಿ ಟ್ರೋಫಿಯನ್ನು ಯಾವುದೇ ಆಟಗಾರ, ನಾಯಕ ಅಥವಾ ಕೋಚ್‌ಗೆ ನೀಡಲಾಗುವುದಿಲ್ಲ. ಬದಲಿಗೆ ಆಯಾ ಚಾಂಪಿಯನ್ ತಂಡದ ಕ್ರಿಕೆಟ್ ಮಂಡಳಿ ಆ ಟ್ರೋಫಿಯನ್ನು ತನ್ನ ಬಳಿ ಇರಿಸಿಕೊಳ್ಳುತ್ತದೆ. ಇದಕ್ಕೂ ಮುನ್ನ ಭಾರತ 3 ವಿಶ್ವಕಪ್ ಗೆದ್ದಿದೆ. ಇವುಗಳಲ್ಲಿ 2007 ರ ಟಿ20 ವಿಶ್ವಕಪ್ ಮತ್ತು 1983 ಮತ್ತು 2011 ಏಕದಿನ ವಿಶ್ವಕಪ್ ಸೇರಿವೆ. ಈ ಮೂರು ವಿಶ್ವಕಪ್ ಟ್ರೋಫಿಗಳನ್ನು ಬಿಸಿಸಿಐ ತನ್ನ ಬಳಿ ಇರಿಸಿಕೊಂಡಿದೆ.
Team India's trophy cabinet! The wait is over! 🇮🇳 India conquers the T20 World Cup, and the Rohit Army erupts in joy! pic.twitter.com/PrnaH2wYIz
— CricketGully (@thecricketgully) June 29, 2024
ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ ಅಧಿಕೃತ ಪ್ರಮಾಣಪತ್ರಗಳು ಮತ್ತು ಪದಕಗಳನ್ನು ನೀಡಲಾಗುತ್ತದೆ. ಇದರೊಂದಿಗೆ ವಿಜೇತ ತಂಡ ಪಡೆದ ಮೊತ್ತವನ್ನೂ ಈ ಆಟಗಾರರಿಗೆ ಸಮನಾಗಿ ಹಂಚಲಾಗುತ್ತದೆ. ಪ್ರಸಕ್ತ ವಿಶ್ವಕಪ್ ವಿಜೇತ ತಂಡ 20.37 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ವಿಜೇತ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನ ನೀಡಿದ್ದಾರೆ. ಈ ಎಲ್ಲಾ ಮೊತ್ತವನ್ನು ತಂಡದ ಆಟಗಾರರಿಗೆ ಹಂಚಲಾಗುತ್ತದೆ. ಅದೇ ಸಮಯದಲ್ಲಿ, ವಿವಿಧ ರಾಜ್ಯ ಸರ್ಕಾರಗಳು ತಮ್ಮ ಆಟಗಾರರಿಗೆ ಪ್ರಶಸ್ತಿಗಳನ್ನು ನೀಡುತ್ತವೆ. ಇದಲ್ಲದೇ, ಪಂದ್ಯವನ್ನು ಗೆದ್ದಿದ್ದಕ್ಕಾಗಿ ಆಟಗಾರರಿಗೆ ನೀಡಲಾಗುವ ಪಂದ್ಯಶ್ರೇಷ್ಠ ಪ್ರಶಸ್ತಿ ಸೇರಿದಂತೆ ಇತರ ಪ್ರಶಸ್ತಿಗಳಿಂದ ಬಂದ ಬಹುಮಾನ ಆಟಗಾರರ ಖಾತೆಗೆ ಜಮಾವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Mon, 1 July 24