T20 World Cup 2024: ಟಿ20 ವಿಶ್ವಕಪ್‌ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ? ಭಾರತ ಯಾವ ದಿನ ಯಾವ ತಂಡವನ್ನು ಎದುರಿಸಲಿದೆ?

T0 World Cup 2024: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಜೂನ್ 2 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗೂ ಮೊದಲು ಹಲವು ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಇದರಲ್ಲಿ ಟೀಂ ಇಂಡಿಯಾ ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡಲ್ಲಿದ್ದು, ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ

T20 World Cup 2024: ಟಿ20 ವಿಶ್ವಕಪ್‌ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ? ಭಾರತ ಯಾವ ದಿನ  ಯಾವ ತಂಡವನ್ನು ಎದುರಿಸಲಿದೆ?
ಟಿ20 ವಿಶ್ವಕಪ್ 2024
Follow us
ಪೃಥ್ವಿಶಂಕರ
|

Updated on:May 27, 2024 | 9:05 PM

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ (T0 World Cup 2024) ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಜೂನ್ 2 ರಿಂದ ಪ್ರಾರಂಭವಾಗುವ ವಿಶ್ವಕಪ್‌ಗೂ ಮೊದಲು ಹಲವು ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಇದರಲ್ಲಿ ಟೀಂ ಇಂಡಿಯಾ (Team India) ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡಲ್ಲಿದ್ದು, ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ (IND vs BAN) ಅಭ್ಯಾಸ ಪಂದ್ಯವನ್ನು ಆಡಲಿದೆ. ಇದರ ನಂತರ ಲೀಗ್ ಪ್ರಾರಂಭವಾಗುತ್ತದೆ. ಹೀಗಾಗಿ ಈ ಮಿನಿ ವಿಶ್ವಸಮರದಲ್ಲಿ ಭಾರತ ತಂಡದ ಪಂದ್ಯಗಳು ಯಾವಾಗ ನಡೆಯಲ್ಲಿವೆ. ಇಡೀ ಪಂದ್ಯಾವಳಿಯನ್ನು ವಿಶ್ವಕಪ್ ಪಂದ್ಯಗಳನ್ನು ಎಲ್ಲಿ ಉಚಿತವಾಗಿ ವೀಕ್ಷಿಸಬಹುದು (Live Streaming) ಎಂಬುದರ ವಿವರವನ್ನು ನಾವು ನಿಮಗೆ ತಿಳಿಸಲ್ಲಿದ್ದೇವೆ.

ಹಾಟ್‌ಸ್ಟಾರ್‌ನಲ್ಲಿ ಉಚಿತ ಪ್ರಸಾರ

ಟಿ20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಇದಲ್ಲದೆ, ಇದನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ಟಿವಿಯಲ್ಲಿ ನೋಡಬಹುದು. ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಜೂನ್ 1 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಭಾರತ ತಂಡದ ಏಕೈಕ ಅಭ್ಯಾಸ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮಾಡ್ಯುಲರ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದಾದ ಬಳಿಕ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 5 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಟೀಂ ಇಂಡಿಯಾ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಭಾರತ ಹೊರತಾಗಿ ಕೆನಡಾ, ಐರ್ಲೆಂಡ್, ಪಾಕಿಸ್ತಾನ ಮತ್ತು ಅಮೆರಿಕ ತಂಡಗಳು ಸ್ಥಾನ ಪಡೆದಿವೆ.

T20 World Cup 2024: ಟಿ20 ವಿಶ್ವಕಪ್​ ಆಡುತ್ತಿರುವ ಎಲ್ಲಾ 20 ತಂಡಗಳ ವಿವರ ಇಲ್ಲಿದೆ

ಭಾರತ-ಪಾಕ್ ಪಂದ್ಯ ಯಾವಾಗ?

ಜೂನ್ 8 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಾ ಪಂದ್ಯ ನಡೆಯಲಿದೆ. ಇದರ ನಂತರ ಜೂನ್ 12 ರಂದು ಯುಎಸ್ಎ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ. ಗುಂಪಿನ ಎಲ್ಲಾ ತಂಡಗಳು ಪರಸ್ಪರ ವಿರುದ್ಧವಾಗಿ ಆಡುತ್ತವೆ. ಈಗಾಗಲೇ ಹಲವು ಭಾರತೀಯ ಆಟಗಾರರು ವಿಶ್ವಕಪ್‌ಗಾಗಿ ಅಮೆರಿಕ ತಲುಪಿದ್ದಾರೆ. ಕೆಲವು ಆಟಗಾರರು ಎರಡನೇ ಬ್ಯಾಚ್​ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ.

16 ಅಭ್ಯಾಸ ಪಂದ್ಯಗಳು

ಈ ವಿಶ್ವಕಪ್​ನಲ್ಲಿ ಒಟ್ಟು 16 ಅಭ್ಯಾಸ ಪಂದ್ಯಗಳನ್ನು ಮೇ 27 ರಿಂದ ಆಡಲಾಗುತ್ತದೆ. ಹೆಚ್ಚಿನ ತಂಡಗಳು ಮುಖ್ಯ ಸ್ಪರ್ಧೆಯ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ನ್ಯೂಜಿಲೆಂಡ್ ಅಭ್ಯಾಸ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದೆ. ಆದರೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಅಭ್ಯಾಸ ಪಂದ್ಯಗಳನ್ನು ಬಿಟ್ಟು ನೇರವಾಗಿ ಪಂದ್ಯಾವಳಿಗೆ ಪ್ರವೇಶಿಸಲಿವೆ. ಏಕೆಂದರೆ ಪ್ರಸ್ತುತ ಉಭಯ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Mon, 27 May 24

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ