T20 World Cup 2024: ಟಿ20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಹಿಡಿದ ಅದ್ಭುತ ಕ್ಯಾಚ್ಗೆ ಇದೀಗ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಒಲಿದಿದೆ. ಯುಎಸ್ಎ ವಿರುದ್ಧದ ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಎಸೆದ 15ನೇ ಓವರ್ನ 4ನೇ ಎಸೆತವನ್ನು ನಿತೀಶ್ ಕುಮಾರ್ ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ್ದರು. ಚೆಂಡು ಇನ್ನೇನು ಬೌಂಡರಿ ದಾಟಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ನಲ್ಲಿದ್ದ ಸಿರಾಜ್ ಅದ್ಭುತವಾಗಿ ಜಿಗಿದು ಚೆಂಡನ್ನು ಹಿಡಿದರು. ಈ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿರಾಜ್ ಅವರ ಫೀಲ್ಡಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಈ ಪಂದ್ಯದಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಯಾರಿಗೆ ಸಿಗಲಿದೆ ಎಂಬ ಕುತೂಹಲವಿತ್ತು. ಈ ಕುತೂಹಲವನ್ನು ಬ್ರೇಕ್ ಮಾಡಿದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಬಳಿಕ ಯುವರಾಜ್ ಸಿಂಗ್ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಅತ್ಯುತ್ತಮ ಫೀಲ್ಡರ್ಗೆ ನೀಡಲಾಗುವ ಬೆಸ್ಟ್ ಫೀಲ್ಡರ್ ಮೆಡಲ್ ಅನ್ನು ಸಿರಾಜ್ಗೆ ನೀಡಿದರು. ಈ ಮೂಲಕ ಅದ್ಭುತ ಕ್ಯಾಚ್ ಹಿಡಿದ ಮೊಹಮ್ಮದ್ ಸಿರಾಜ್ ಅವರನ್ನು ಹುರಿದುಂಬಿಸಿದರು.
ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಉತ್ತಮ ಫೀಲ್ಡಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಬೆಸ್ಟ್ ಫೀಲ್ಡರ್ ಮೆಡಲ್ ಪಡೆದಿದ್ದರು. ಇದೀಗ ಮತ್ತೊಮ್ಮೆ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಿರಾಜ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ಡ್ರೆಸ್ಸಿಂಗ್ ರೂಮ್ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
A crucial win to qualify for the Super Eight 👌
Another special guest in today’s Best Fielder 👏 🥇
Any guesses who? 🤔 – By @RajalArora #T20WorldCup | #TeamIndia | #USAvIND
WATCH 🎥 🔽https://t.co/0eLcXIdOai
— BCCI (@BCCI) June 13, 2024
ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತು.
ಇದನ್ನೂ ಓದಿ: T20 World Cup 2024: ಸೂಪರ್-8 ಹಂತಕ್ಕೇರಿದ 4 ತಂಡಗಳು
ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 18.2 ಓವರ್ಗಳಲ್ಲಿ 111 ರನ್ ಬಾರಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಸೂಪರ್-8 ಹಂತಕ್ಕೇರಿದೆ.
Published On - 12:48 pm, Thu, 13 June 24