T20 World Cup 2024: ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ?ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
T20 World Cup 2024 Opening Ceremony: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಟೂರ್ನಿಯಲ್ಲಿ 20 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಎಲ್ಲ ತಂಡಗಳನ್ನು ತಲಾ 5ರಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಅನೇಕ ಖ್ಯಾತ ನಾಮರು ಪ್ರದರ್ಶನ ನೀಡಲಿದ್ದಾರೆ.
9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಜೂನ್ 2 ರಿಂದ ಪ್ರಾರಂಭವಾಗುತ್ತಿದೆ. ಮೊದಲ ದಿನ 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾ ತಂಡವನ್ನು ಎದುರಿಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಪಪುವಾ ನ್ಯೂಗಿನಿ ತಂಡವನ್ನು ಎದುರಿಸಲಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಟೂರ್ನಿಯಲ್ಲಿ 20 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಎಲ್ಲ ತಂಡಗಳನ್ನು ತಲಾ 5ರಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ (Opening Ceremony) ನಡೆಯಲಿದ್ದು, ಈ ಸಮಾರಂಭದಲ್ಲಿ ಅನೇಕ ಖ್ಯಾತ ನಾಮರು ಪ್ರದರ್ಶನ ನೀಡಲಿದ್ದಾರೆ.
ಯಾರ್ಯಾರು ಪ್ರದರ್ಶನ ನೀಡಲಿದ್ದಾರೆ?
2024 ರ ಟಿ20 ವಿಶ್ವಕಪ್ನ ಉದ್ಘಾಟನಾ ಸಮಾರಂಭವು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದಲ್ಲಿ ಉದ್ಘಾಟನಾ ಸಮಾರಂಭದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನಡೆಯಲಿದೆ. ಇದಲ್ಲದೆ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು. ಟ್ರಿನಿಡಾಡಿಯನ್ ಗಾಯಕರಾದ ಡೇವಿಡ್ ರಡ್ಡರ್, ರವಿ ಬಿ, ಸಂಯೋಜಕ ಮತ್ತು ಗೀತರಚನೆಕಾರ ಇರ್ಫಾನ್ ಅಲ್ವೆಸ್, ಗಾಯಕ ಡಿಜೆ ಅನಾ ಮತ್ತು ಅಲ್ಟ್ರಾ ಸಿಮ್ಮೋ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.
2024 T20 WORLD CUP OPENING CEREMONY ON 2ND JUNE…!!! 🏆 pic.twitter.com/ZPVCkw8kwi
— Mufaddal Vohra (@mufaddal_vohra) May 31, 2024
ಈ ತಂಡಗಳು ಭಾಗವಹಿಸಲಿವೆ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಇವುಗಳಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಉಗಾಂಡಾ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸೇರಿವೆ.
T20 World Cup 2024: ಈ 9 ಕ್ರೀಡಾಂಗಣಗಳಲ್ಲಿ ನಡೆಯಲ್ಲಿದೆ ಈ ಬಾರಿಯ ಟಿ20 ವಿಶ್ವಕಪ್
ಯಾವ ಗುಂಪಿನಲ್ಲಿ ಯಾವ ತಂಡ?
ಗುಂಪು ಎ: ಭಾರತ , ಪಾಕಿಸ್ತಾನ, ಯುಎಸ್ಎ, ಐರ್ಲೆಂಡ್, ಕೆನಡಾ.
ಗುಂಪು ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್.
ಸಿ ಗುಂಪು: ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂಗಿನಿಯಾ.
ಗುಂಪು ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ.
ವಿಶ್ವಕಪ್ ನಡೆಯುವ ಸ್ಥಳಗಳಿವು
ಗುಂಪು ಹಂತದ ಪಂದ್ಯಗಳನ್ನು ಅಮೆರಿಕಾದ ನ್ಯೂಯಾರ್ಕ್, ಡಲ್ಲಾಸ್ ಮತ್ತು ಲಾಡರ್ಹಿಲ್ (ಫ್ಲೋರಿಡಾ) ನಲ್ಲಿ ಆಡಲಾಗುತ್ತದೆ. ಗ್ರೂಪ್ ಹಂತ, ಸೂಪರ್-8, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ವೆಸ್ಟ್ ಇಂಡೀಸ್‌ನ ಬ್ರಿಡ್ಜ್‌ಟೌನ್, ಪ್ರಾವಿಡೆನ್ಸ್, ನಾರ್ತ್ ಸೌಂಡ್, ಗ್ರಾಸ್ ಐಲೆಟ್, ಕಿಂಗ್‌ಸ್ಟನ್ ಮತ್ತು ತರೋಬಾದಲ್ಲಿ ನಡೆಯಲಿವೆ. ಫೈನಲ್ ಪಂದ್ಯವು ಬ್ರಿಡ್ಜ್‌ಟೌನ್‌ನಲ್ಲಿ (ಬಾರ್ಬಡೋಸ್) ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ