2024ರ ಟಿ20 ವಿಶ್ವಕಪ್ (T20 World Cup 2024) ಗೆಲ್ಲುವ ಕನಸಿನೊಂದಿಗೆ ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದ ಪಾಕಿಸ್ತಾನ ತಂಡಕ್ಕೆ (Pakistan vs America) ಅಮೆರಿಕ ವಿರುದ್ಧದ ಸೋಲು ಭಾರೀ ಆಘಾತ ತಂದಿದೆ. ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಎಲ್ಲರನ್ನು ಬೆಚ್ಚಿ ಬೀಳಿಸಿದ್ದು, ಸೂಪರ್ ಓವರ್‌ನಲ್ಲಿ ಪಾಕಿಸ್ತಾನವನ್ನು 5 ರನ್‌ಗಳಿಂದ ಸೋಲಿಸಿದೆ. ಈ ಸೋಲಿನ ನಂತರ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಗಿದೆ. ಏಕೆಂದರೆ ಈ ಸೋಲು ಪಾಕ್ ತಂಡದ ಸೂಪರ್ 8 ಹಂತದ ದಾರಿಗೆ ಅಡಚಣೆಯನ್ನುಂಟು ಮಾಡಿದೆ. ಇದು ಒಂದೆಡೆಯಾದರೆ ನೆಚ್ಚಿನ ತಂಡದ ಸೋಲು ಕ್ರೀಡಾಂಗಣದಲ್ಲಿದ್ದ ಹಾಜರಿದ್ದ ಪಾಕಿಸ್ತಾನಿ ಅಭಿಮಾನಿಗಳ ಹೃದಯ ಒಡೆದಿದ್ದು, ತಂಡ ಸೋತ ಬಳಿಕ ಅಭಿಮಾನಿಯೊಬ್ಬರು ಬೇಸರದಿಂದ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಡಲ್ಲಾಸ್‌ನಲ್ಲಿ ಪಂದ್ಯ ಮುಗಿದ ನಂತರ ಪಾಕಿಸ್ತಾನದ ಪತ್ರಕರ್ತೆಯೊಬ್ಬರು, ಮಹಿಳಾ ಅಭಿಮಾನಿಯೊಬ್ಬರನ್ನು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಹಿಳಾ ಅಭಿಮಾನಿ, ತಂಡದ ಈ ಸೋಲಿನಿಂದ ನನ್ನ ಹೃದಯ ಛಿದ್ರವಾಗಿದೆ. ಇದು ಪಾಕಿಸ್ತಾನಿ ತಂಡಕ್ಕೆ ಅಭ್ಯಾಸವಾಗಿ ಹೊಗಿಬಿಟ್ಟಿದೆ. ಈ ತಂಡ ಕೇವಲ ವಿದೇಶ ಪ್ರವಾಸಕ್ಕೆ ಬಂದಂತೆ ತೊರುತ್ತದೆ. ಈ ತಂಡ ಅಭಿಮಾನಿಗಳ ಭಾವನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
Pakistan fans outside New York stadium #PakvsUSA pic.twitter.com/aJ8Y2diz4g
— Div🦁 (@div_yumm) June 6, 2024
ಪಾಕಿಸ್ತಾನದ ಅಭಿಮಾನಿಗಳ ಈ ಬೇಸರಕ್ಕೂ ಕಾರಣವಿದೆ. ಏಕೆಂದರೆ ಈ ಪಂದ್ಯದಲ್ಲಿ ಪಾಕ್ ತಂಡ ನಿಜವಾಗಿಯೂ ಕೆಟ್ಟ ಕ್ರಿಕೆಟ್ ಆಡಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಚಾರದಲ್ಲಿ ತಮ್ಮ ತಂಡವು ಅಮೆರಿಕದ ವಿರುದ್ಧ ಸೋತಿದೆ ಎಂದು ಸ್ವತಃ ನಾಯಕ ಬಾಬರ್ ಆಝಂ ಅವರೇ ಒಪ್ಪಿಕೊಂಡಿದ್ದಾರೆ. ಡಲ್ಲಾಸ್ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಅತ್ಯಂತ ಕಳಪೆ ಆರಂಭ ಮಾಡಿತು. ಸ್ವತಃ ನಾಯಕ ಬಾಬರ್ಗೆ ರನ್ ಗಳಿಸುವುದು ಕಷ್ಟವಾಯಿತು. ಪವರ್‌ಪ್ಲೇಯಲ್ಲಿ ಬಾಬರ್ 14 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದರು. ಇದರಿಂದಾಗಿ ಪಾಕಿಸ್ತಾನದ ರನ್ ರೇಟ್ ತುಂಬಾ ಕಡಿಮೆಯಾಯಿತು. ಅಂತಿಮವಾಗಿ ಪಾಕಿಸ್ತಾನ 159 ರನ್ ಗಳಿಸುವಲ್ಲಿ ಯಶಸ್ವಿಯಾಯಿತ್ತಾದರೂ, ತಂಡದ ಬೌಲರ್‌ಗಳು ಗೆಲುವು ತಂದುಕೊಡುವಲ್ಲಿ ವಿಫಲರಾದರು.
T20 World Cup 2024: ಮೊದಲ ಪಂದ್ಯದಲ್ಲೇ ಕಳ್ಳಾಟ? ಪಾಕ್ ಬೌಲರ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ
ಪಾಕ್ ತಂಡದಲ್ಲಿ ಶಾಹೀನ್ ಅಫ್ರಿದಿ, ಮೊಹಮ್ಮದ್ ಅಮೀರ್, ನಸೀಮ್ ಶಾ, ಹ್ಯಾರಿಸ್ ರೌಫ್ ಅವರಂತಹ ಬೌಲರ್‌ಗಳಿದ್ದರೂ ಅವರ್ಯಾರೂ ಪಾಕಿಸ್ತಾನವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಬೇಕು. ಕೊನೆಯ ಓವರ್‌ನಲ್ಲಿ ಹ್ಯಾರಿಸ್ ರೌಫ್ 15 ರನ್‌ಗಳನ್ನು ಉಳಿಸಬೇಕಾಗಿತ್ತು. ಆದರೆ ಅವರಿಗೆ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತದಲ್ಲಿ ಅಮೆರಿಕಕ್ಕೆ ಐದು ರನ್ ಬೇಕಿತ್ತು. ಈ ವೇಳೆ ಹ್ಯಾರಿಸ್ ಫುಲ್ ಟಾಸ್ ನೀಡುವ ಮೂಲಕ ಅಮೆರಿಕಕ್ಕೆ ಒಂದು ಬೌಂಡರಿಯನ್ನು ಉಡುಗೊರೆಯಾಗಿ ನೀಡಿದರು, ನಂತರ ಪಂದ್ಯ ಟೈ ಆಯಿತು.
ಇದರ ನಂತರ, ಮೊಹಮ್ಮದ್ ಅಮೀರ್ ಸೂಪರ್ ಓವರ್‌ನಲ್ಲಿ ಕಳಪೆ ಬೌಲಿಂಗ್ ಮಾಡಿದರು. ಕೇವಲ ವೈಡ್ಗಳಿಂದಲೇ ಅವರು 7 ರನ್ ನೀಡಿದರು. ಹೀಗಾಗಿ ಅಮೆರಿಕ ತಂಡ 18 ರನ್ ಕಲೆಹಾಕಲು ಸಾಧ್ಯವಾಯಿತು. ಕೊನೆಯಲ್ಲಿ, ಪಾಕಿಸ್ತಾನಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಈ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Fri, 7 June 24