AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಸೊನ್ನೆ ಸುತ್ತಿದ ಹತಾಶೆ; ಕೆಣಕಿದ ಅಭಿಮಾನಿಯೊಂದಿಗೆ ಜಗಳಕ್ಕಿಳಿದ ಪಾಕ್ ಬ್ಯಾಟರ್! ವಿಡಿಯೋ ನೋಡಿ

T20 World Cup 2024: ಆಝಂ ಖಾನ್, ಔಟಾದ ಹತಾಶೆಯಲ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಪಾಕಿಸ್ತಾನಿ ಅಭಿಮಾನಿಯೊಬ್ಬ ಅವರಿಗೆ ಏನೋ ಹೇಳಿದರು. ಇದರಿಂದಾಗಿ ಕೋಪಗೊಂಡ ಆಝಂ ಖಾನ್, ತಕ್ಷಣವೇ ಕೋಪದಿಂದ ಹಿಂದೆ ತಿರುಗಿ ಆ ಅಭಿಮಾನಿಗೆ ಏನನ್ನೋ ಹೇಳಿದರು. ನಂತರ ಇಬ್ಬರು ಪರಸ್ಪರ ವಾಕ್ಸಮರ ನಡೆಸಿದರು.

T20 World Cup 2024: ಸೊನ್ನೆ ಸುತ್ತಿದ ಹತಾಶೆ; ಕೆಣಕಿದ ಅಭಿಮಾನಿಯೊಂದಿಗೆ ಜಗಳಕ್ಕಿಳಿದ ಪಾಕ್ ಬ್ಯಾಟರ್! ವಿಡಿಯೋ ನೋಡಿ
ಆಝಂ ಖಾನ್
ಪೃಥ್ವಿಶಂಕರ
|

Updated on:Jun 07, 2024 | 3:12 PM

Share

ಆತಿಥೇಯ ಅಮೆರಿಕ ವಿರುದ್ಧ ಸೂಪರ್​ ಓವರ್​ ಥ್ರಿಲ್ಲರ್​ನಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡ (Pakistan vs USA) ವಿಶ್ವ ಕ್ರಿಕೆಟ್ ಮುಂದೆ ಮುಜುಗರಕ್ಕೀಡಾಗಿದೆ. ಕ್ರಿಕೆಟ್‌ನಲ್ಲಿ ಅಮೆರಿಕದಂತಹ ಕ್ರಿಕೆಟ್ ಶಿಶು ದೇಶದ ವಿರುದ್ಧ ಸೋಲನ್ನು ಎದುರಿಸಿದ್ದೇವೆ ಎಂಬುದನ್ನು ಅರಗಿಸಿಕೊಳ್ಳಲು ಪಾಕ್ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಗೆಲ್ಲುವ ಪಂದ್ಯವನ್ನು ಕೈಯಾರೆ ಕಳೆದುಕೊಂಡ ಪಾಕ್ ಆಟಗಾರರ ವಿರುದ್ಧ ಅಭಿಮಾನಿಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಪಂದ್ಯ ವೀಕ್ಷಿಸಲು ಅಮೆರಿಕಕ್ಕೆ ತೆರಳಿರುವ ಪಾಕಿಸ್ತಾನಿ ಅಭಿಮಾನಿಗಳು ಆಟಗಾರರ ಪ್ರದರ್ಶನಕ್ಕೆ ಕ್ರೀಡಾಂಗಣದಲ್ಲೇ ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅಮೆರಿಕ ವಿರುದ್ಧ ತಾನು ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಝಂ ಖಾನ್ (Azam Khan) ವಿರುದ್ಧ ಅಭಿಮಾನಿಯೊಬ್ಬ ಬಹಿರಂಗವಾಗೆ ಅಸಮಾಧಾನ ಹೊರಹಾಕಿದ್ದು, ಆ ಅಭಿಮಾನಿಯೊಂದಿಗೆ ಆಝಂ ಖಾನ್ ಕಾಲ್ಕೆರೆದು ಜಗಳ ಮಾಡಿರುವ ಘಟನೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಅಷ್ಟಕ್ಕೂ ನಡೆದಿದ್ದೇನು?

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಪವರ್ ಪ್ಲೇನಲ್ಲಿಯೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಬಾಬರ್ ಆಝಂ ಕ್ರೀಸ್​ನಲ್ಲಿ ಇದ್ದರೂ ಕೂಡ ಅವರ ನಿಧಾನಗತಿಯ ಬ್ಯಾಟಿಂಗ್ ತಂಡಕ್ಕೆ ಇನ್ನಷ್ಟು ಹಿನ್ನಡೆಯನ್ನುಂಟು ಮಾಡಿತು. ಆದರೆ ಪಾಕ್ ಪರ ಗಮನಾರ್ಹ ಪ್ರದರ್ಶನ ನೀಡಿದ ಶಾದಾಬ್ ಖಾನ್ 40 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿ ಪೆವಿಲಿಯನ್ ಸೇರಿಕೊಂಡರು.

T20 World Cup 2024: ಖಾಲಿ ಹೊಡೆಯುತ್ತಿವೆ ಕ್ರೀಡಾಂಗಣಗಳು; ಭಾರತ- ಪಾಕ್ ಪಂದ್ಯವೇ ಐಸಿಸಿ ಪಾಲಿಗೆ ನಿರ್ಣಾಯಕ..!

ಸೊನ್ನೆ ಸುತ್ತಿದ ಆಝಂ ಖಾನ್

ಶಾದಾಬ್ ಔಟಾದ ಬಳಿಕ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 98 ರನ್ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಆಝಂ ಖಾನ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಪಾಕಿಸ್ತಾನದ ಈ ಕೆಟ್ಟ ಪರಿಸ್ಥಿತಿಯಲ್ಲಿಯೂ ಅವರು ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಪೆವಿಲಿಯನತ್ತ ಹೆಜ್ಜೆಹಾಕಿದರು. ಈ ವೇಳೆ ಅವರು ಅಭಿಮಾನಿಗಳ ಕೋಪಕ್ಕೆ ಗುರಿಯಾಗಬೇಕಾಯಿತು.

ಆಝಂ ಖಾನ್, ಔಟಾದ ಹತಾಶೆಯಲ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಪಾಕಿಸ್ತಾನಿ ಅಭಿಮಾನಿಯೊಬ್ಬ ಅವರಿಗೆ ಏನೋ ಹೇಳಿದರು. ಇದರಿಂದಾಗಿ ಕೋಪಗೊಂಡ ಆಝಂ ಖಾನ್, ತಕ್ಷಣವೇ ಕೋಪದಿಂದ ಹಿಂದೆ ತಿರುಗಿ ಆ ಅಭಿಮಾನಿಗೆ ಏನನ್ನೋ ಹೇಳಿದರು. ಇಬ್ಬರು ಪರಸ್ಪರ ವಾಕ್ಸಮರ ನಡೆಸಿದರು. ಪಂದ್ಯ ವೀಕ್ಷಿಸಲು ಬಂದಿದ್ದವರು ಇಬ್ಬರ ನಡುವೆ ನಿಂದನೆ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಈ ಸಮಯದಲ್ಲಿ ಇಬ್ಬರೂ ಪರಸ್ಪರ ಏನು ಹೇಳಿದರು ಎಂಬುದರ ಕುರಿತು ಯಾವುದೇ ಕಾಂಕ್ರೀಟ್ ವೀಡಿಯೊ ಇನ್ನೂ ಸಿಕ್ಕಿಲ್ಲ.

ಆಝಂ ಖಾನ್ ಕಳಪೆ ಫಾರ್ಮ್​

ಅಜಮ್ ಖಾನ್ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಯಿನ್ ಖಾನ್ ಅವರ ಮಗ. ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಅವರಿಗೆ ಕೆಲ ದಿನಗಳಿಂದ ಪಾಕಿಸ್ತಾನ ತಂಡದಲ್ಲಿ ನಿರಂತರವಾಗಿ ಆಡುವ ಅವಕಾಶ ಸಿಕ್ಕರೂ ನಿರೀಕ್ಷೆಗೆ ತಕ್ಕಂತೆ ಅವರಿಂದ ಪ್ರದರ್ಶನ ಹೊರಬರುತ್ತಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಅವರು ಸತತವಾಗಿ ಶೂನ್ಯಕ್ಕೆ ಔಟಾಗಿದ್ದಾರೆ. ಇದುವರೆಗೆ 14 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು 8.8ರ ಸರಾಸರಿಯಲ್ಲಿ 88 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Fri, 7 June 24

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ