ಸೂಪರ್​ 8ಗೆ ಪಾಕಿಸ್ತಾನ ತಲುಪೋದು ಅನುಮಾನ? ಇಲ್ಲಿದೆ ಲೆಕ್ಕಾಚಾರ

ಗ್ರೂಪ್ Aನಲ್ಲಿ ಇರೋದು ಅಮೆರಿಕ, ಭಾರತ, ಪಾಕಿಸ್ತಾನ, ಕೆನಡಾ ಹಾಗೂ ಐರ್ಲೆಂಡ್. ಈ ಪೈಕಿ ಭಾರತ ಹಾಗೂ ಪಾಕಿಸ್ತಾನ ಸ್ಟ್ರಾಂಗ್ ತಂಡ ಎನಿಸಿಕೊಂಡಿದ್ದವು. ಆದರೆ, ಅಮೆರಿಕ ಯಾರೂ ಊಹಿಸದ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದೆ.

ಸೂಪರ್​ 8ಗೆ ಪಾಕಿಸ್ತಾನ ತಲುಪೋದು ಅನುಮಾನ? ಇಲ್ಲಿದೆ ಲೆಕ್ಕಾಚಾರ
ಪಾಕ್ ತಂಡ
Follow us
ರಾಜೇಶ್ ದುಗ್ಗುಮನೆ
|

Updated on: Jun 07, 2024 | 7:40 AM

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ (Pakistan Team) ಮೊದಲ ಪಂದ್ಯದಲ್ಲೇ ಶಾಕ್ ಸಿಕ್ಕಿದೆ. ಈಗತಾನೇ ಕ್ರಿಕೆಟ್ ಜಗತ್ತಲ್ಲಿ ಅಂಬೆಗಾಲಿಡುತ್ತಿರುವ ಅಮೆರಿಕ ತಂಡವು ಪಾಕಿಸ್ತಾನವನ್ನು ರೋಚಕ ಪಂದ್ಯದಲ್ಲಿ ಸೋಲಿಸಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸೂಪರ್ 8ಗೆ ಅರ್ಹತೆ ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಪಾಕಿಸ್ತಾನಕ್ಕೆ ಈ ಸೋಲು ಶಾಕ್ ತಂದಿದೆ. ಸೂಪರ್ 8ಗೆ ಪಾಕ್ ಅರ್ಹತೆ ಪಡೆಯೋದು ಅನುಮಾನ ಎಂದು ಹೇಳಲು ಕಾರಣಗಳು ಇಲ್ಲಿವೆ.

ಗ್ರೂಪ್ Aನಲ್ಲಿ ಇರೋದು ಅಮೆರಿಕ, ಭಾರತ, ಪಾಕಿಸ್ತಾನ, ಕೆನಡಾ ಹಾಗೂ ಐರ್ಲೆಂಡ್. ಈ ಪೈಕಿ ಭಾರತ ಹಾಗೂ ಪಾಕಿಸ್ತಾನ ಸ್ಟ್ರಾಂಗ್ ತಂಡ ಎನಿಸಿಕೊಂಡಿದ್ದವು. ಆದರೆ, ಅಮೆರಿಕ ಯಾರೂ ಊಹಿಸದ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದೆ. ಈ ಸೀಸನ್​ನಲ್ಲಿ ಅಮೆರಿಕ ಆಡಿದ ಎರಡು ಪಂದ್ಯಗಳಲ್ಲಿ ಎರಡಕ್ಕೆ ಎರಡೂ ಗೆದ್ದಿದೆ. ಇದು ಪಾಕಿಸ್ತಾನಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಪಾಕಿಸ್ತಾನ ಜೂನ್ 9ರಂದು ಭಾರತ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕ್ ಸೋತರೆ ‘ಸೂಪರ್ 8’ರ ಹಾದಿ ಮತ್ತಷ್ಟು ದುರ್ಗಮ ಆಗಲಿದೆ. ಭಾರತದ ಜೊತೆ ಪಾಕ್ ಸೋತು, ಮುಂದೆ ಬರುವ ಕೆನಡಾ ಹಾಗೂ ಐರ್ಲೆಂಡ್ ಮ್ಯಾಚ್​​ಗಳಲ್ಲಿ ಗೆದ್ದರೂ ಸೂಪರ್ 8ಗೆ ಅರ್ಹತೆ ಪಡೆಯೋ ಸಾಧ್ಯತೆ ಕಡಿಮೆಯೇ ಇರುತ್ತದೆ. ಅಮೆರಿಕ ತಂಡಕ್ಕೆ ಭಾರತ ಹಾಗೂ ಐರ್ಲೆಂಡ್ ಜೊತೆ ಪಂದ್ಯಗಳಿವೆ. ಭಾರತದ ಜೊತೆ ಸೋತು, ಐರ್ಲೆಂಡ್ ಜೊತೆ ಗೆದ್ದರೆ ಪಾಕ್ ಬದಲು ಅಮೆರಿಕ ತಂಡ ಸೂಪರ್ 8ಗೆ ಅರ್ಹತೆ ಪಡೆಯಲಿದೆ. ಇದು ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ಆತಂಕ ಮೂಡಿಸಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಆಡಲು ಹೋಗಿ ದಂಧೆಗಿಳಿದ ಪಾಕಿಸ್ತಾನ್ ತಂಡ

ಭಾರತ ಹಾಗೂ ಪಾಕಿಸ್ತಾನದ ಪಂದ್ಯಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಪಂದ್ಯ ಸಾಕಷ್ಟು ಹೈ ವೋಲ್ಟೇಜ್ ಪಡೆದುಕೊಳ್ಳಲಿದೆ. ಜೂನ್ 9ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ