T20 World Cup 2024: USA ಆಟಗಾರನ ಅದ್ಭುತ ಫೀಲ್ಡಿಂಗ್​ಗೆ ಸಲ್ಯೂಟ್ ಹೊಡೆದ ಕ್ರಿಕೆಟ್ ಜಗತ್ತು! ವಿಡಿಯೋ

T20 World Cup 2024: ರಿಜ್ವಾನ್, ಓವರ್‌ನ ಎರಡನೇ ಎಸೆತವನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ನ ಹೊರಗಿನ ಅಂಚನ್ನು ತಾಗಿ ಎರಡನೇ ಸ್ಲಿಪ್‌ಗೆ ಹೋಯಿತು. ವಾಸ್ತವವಾಗಿ ಎರಡನೇ ಸ್ಲಿಪ್‌ನಲ್ಲಿ ಯಾರು ಫೀಲ್ಡರ್ ಇರಲಿಲ್ಲ. ಆದರೆ ಮೊದಲ ಸ್ಲಿಪ್‌ನಲ್ಲಿ ಪೋಸ್ಟ್ ಮಾಡಿದ ಟೇಲರ್, ಚಿರತೆಯಂತೆ ಎಗರುವ ಮೂಲಕ ಅದ್ಭುತ ಕ್ಯಾಚ್ ತೆಗೆದುಕೊಂಡರು.

T20 World Cup 2024: USA ಆಟಗಾರನ ಅದ್ಭುತ ಫೀಲ್ಡಿಂಗ್​ಗೆ ಸಲ್ಯೂಟ್ ಹೊಡೆದ ಕ್ರಿಕೆಟ್ ಜಗತ್ತು! ವಿಡಿಯೋ
ಸ್ಟೀವನ್ ಟೇಲರ್
Follow us
|

Updated on:Jun 06, 2024 | 11:36 PM

2024 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಕೆಲವು ಹೊಸ ತಂಡಗಳು ಆಡುತ್ತಿದ್ದರೆ, ಕೆಲವು ತಂಡಗಳು ಎರಡನೇ ಅಥವಾ ಮೂರನೇ ಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಈ ತಂಡಗಳು ತಮ್ಮದೇ ಆದ ರೀತಿಯಲ್ಲಿ ಪಂದ್ಯಾವಳಿಯನ್ನು ಆಸಕ್ತಿದಾಯಕವಾಗಿಸುವಲ್ಲಿ ನಿರತವಾಗಿವೆ. ಅದಕ್ಕೆ ಪೂರಕವಾಗಿ ಪಂದ್ಯಾವಳಿಯಲ್ಲಿ ಇದುವರೆಗೆ ಕೆಲವು ಅದ್ಭುತ ಕ್ಯಾಚ್​​ಗಳು ಕಂಡುಬಂದಿವೆ. ಅದರಲ್ಲೂ ಕ್ರಿಕೆಟ್ ಶಿಶು ತಂಡಗಳಿಂದ ಈ ರೀತಿಯ ಪ್ರಯತ್ನ ಕಂಡು ಬರುತ್ತಿರುವುದು ಪಂದ್ಯಾವಳಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಅದಕ್ಕೆ ಉದಾಹರಣೆಯಾಗಿ ಇಂದು ನಡೆಯುತ್ತಿರುವ ಪಾಕಿಸ್ತಾನ ಹಾಗೂ ಅಮೆರಿಕ (USA vs Pakistan) ನಡುವಿನ ಪಂದ್ಯ ಕೂಡ ಸಾಕ್ಷಿಯಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ, ಅಮೆರಿಕ ತಂಡದ ಫೀಲ್ಡರ್ ಸ್ಟೀವನ್ ಟೇಲರ್ (Steven Taylor) ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಇಡೀ ಕ್ರೀಡಾಂಗಣವೇ ನಿಬ್ಬೇರಗಾಗುವಂತೆ ಮಾಡಿದ್ದಾರೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ತಂಡವನ್ನು ಭರ್ಜರಿಯಾಗಿ ಮಣಿಸಿದ್ದ ಅಮೆರಿಕ ಎರಡನೇ ಪಂದ್ಯದಲ್ಲೂ ಅಮೋಘ ಆರಂಭ ಮಾಡಿತು. ಡಲ್ಲಾಸ್‌ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಅಮೆರಿಕ ತಂಡ ಎರಡನೇ ಓವರ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಅವರನ್ನು ಔಟ್ ಮಾಡುವ ಮೂಲಕ ಪಾಕ್ ತಂಡಕ್ಕೆ ಬಿಗ್ ಶಾಕ್ ನೀಡಿತು.

ಸೆನ್ಸೇಷನಲ್ ಕ್ಯಾಚ್ ಹಿಡಿದ ಟೇಲರ್

ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರಿಜ್ವಾನ್ ಮೊದಲ ಓವರ್‌ನಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಎರಡನೇ ಓವರ್‌ನಲ್ಲಿ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಾಲ್ಕರ್ ಅವರು ಬಂದ ತಕ್ಷಣವೇ ರಿಜ್ವಾನ್ ವಿಕೆಟ್ ಉರುಳಿಸಿದರು. ರಿಜ್ವಾನ್ ಓವರ್‌ನ ಎರಡನೇ ಎಸೆತವನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ನ ಹೊರಗಿನ ಅಂಚನ್ನು ತಾಗಿ ಎರಡನೇ ಸ್ಲಿಪ್‌ಗೆ ಹೋಯಿತು. ವಾಸ್ತವವಾಗಿ ಎರಡನೇ ಸ್ಲಿಪ್‌ನಲ್ಲಿ ಯಾರು ಫೀಲ್ಡರ್ ಇರಲಿಲ್ಲ. ಆದರೆ ಮೊದಲ ಸ್ಲಿಪ್‌ನಲ್ಲಿ ಪೋಸ್ಟ್ ಮಾಡಿದ ಟೇಲರ್, ಚಿರತೆಯಂತೆ ಎಗರುವ ಮೂಲಕ ಅದ್ಭುತ ಕ್ಯಾಚ್ ತೆಗೆದುಕೊಂಡರು. ಹೀಗಾಗಿ ರಿಜ್ವಾನ್ ಕೇವಲ 9 ರನ್ ಗಳಿಸಿ ಪೆವಿಲಿಯನ್​ಗೆ ಮರಳಬೇಕಾಯಿತು.

View this post on Instagram

A post shared by ICC (@icc)

17 ವರ್ಷದ ಕ್ಯಾಚ್ ನೆನಪಿಸಿತು

ಟೇಲರ್‌ನ ಈ ಕ್ಯಾಚ್ ಅದ್ಭುತವಾಗಿತ್ತು ಮಾತ್ರವಲ್ಲ, ಇದು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕಾಕತಾಳೀಯವಾಗಿ ಹಿಡಿದ 17 ವರ್ಷದ ಕ್ಯಾಚ್ ಅನ್ನು ನೆನಪಿಸಿತು. ಅದೆನೆಂದರೆ, ಭಾರತ ವಿರುದ್ಧದ ಪಂದ್ಯದಲ್ಲಿ ಬರ್ಮುಡಾ ಫೀಲ್ಡರ್ ಡ್ವೇನ್ ಲಾವ್ರಾಕ್ ಒಂದು ಕೈಯಿಂದ ರಾಬಿನ್ ಉತ್ತಪ್ಪ ಅವರು ನೀಡಿದ ಕ್ಯಾಚ್ ಅನ್ನು ಹಿಡಿದಿದ್ದರು. ಆ ಕ್ಯಾಚ್ ಇದುವರೆಗೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಇದೀಗ ಟೇಲರ್ ಹಿಡಿದ ಕ್ಯಾಚ್​ಗೂ ಇಡೀ ಕ್ರಿಕೆಟ್ ಜಗತ್ತೇ ಸಲ್ಯೂಟ್ ಹೊಡೆಯುತ್ತಿದೆ.

160 ರನ್ ಟಾರ್ಗೆಟ್ ನೀಡಿದ ಪಾಕಿಸ್ತಾನ

ಆರಂಭದಲ್ಲೇ ಪಾಕ್ ತಂಡ ಸತತ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಹೀಗಾಗಿ ತಂಡ 5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 26 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಮೊದಲ ಓವರ್​ಗಳವರೆಗೂ ಪಂದ್ಯದಲ್ಲಿ ಅಮೆರಿಕ ತಂಡ ಹಿಡಿತ ಸಾಧಿಸಿತ್ತು. ಆದರೆ ಆ ಬಳಿಕ ನಾಯಕ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ಬಾಬರ್ 43 ರನ್​ಗಳ ಇನ್ನಿಂಗ್ಸ್ ಆಡಿದರೆ, ಶಾದಾಬ್ 40 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶಾಹೀನ್ ಆಫ್ರಿದಿ 23 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಪಾಕ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 pm, Thu, 6 June 24