T20 World Cup 2024: ಟಿ20 ವಿಶ್ವಕಪ್ ಆಡಲು ಹೋಗಿ ದಂಧೆಗಿಳಿದ ಪಾಕಿಸ್ತಾನ್ ತಂಡ

T20 World Cup 2024: ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಜೂನ್ 9 ರಂದು ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೊ-ಪಾಕ್ ಕದನ ಏರ್ಪಡಲಿದೆ. ಟಿ20 ವಿಶ್ವಕಪ್​ನಲ್ಲಿನ ಈ ರಣರೋಚಕ ಪಂದ್ಯಕ್ಕಾಗಿ ಈಗಾಗಲೇ ವಿಶ್ವ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

T20 World Cup 2024: ಟಿ20 ವಿಶ್ವಕಪ್ ಆಡಲು ಹೋಗಿ ದಂಧೆಗಿಳಿದ ಪಾಕಿಸ್ತಾನ್ ತಂಡ
Pakistan team
Follow us
ಝಾಹಿರ್ ಯೂಸುಫ್
|

Updated on:Jun 05, 2024 | 12:08 PM

T20 World Cup 2024: ಟಿ20 ವಿಶ್ವಕಪ್​ನಲ್ಲಿ ಈಗಾಗಲೇ 7 ಪಂದ್ಯಗಳು ಮುಗಿದಿವೆ. ಇದಾಗ್ಯೂ ಪಾಕಿಸ್ತಾನ್ ತಂಡದ ಅಭಿಯಾನ ಶುರುವಾಗಿಲ್ಲ. ಜೂನ್ 6 ರಂದು ನಡೆಯಲಿರುವ ಯುಎಸ್​ಎ ವಿರುದ್ಧದ ಪಂದ್ಯದ ಮೂಲಕ ಪಾಕ್ ಪಡೆ ವಿಶ್ವಕಪ್ ಶುರು ಮಾಡಲಿದೆ. ಆದರೆ ಅದಕ್ಕೂ ಮುನ್ನ ಪಾಕಿಸ್ತಾನ್ ಆಟಗಾರರು ದಂಧೆಗೆ ಇಳಿದು ವಿವಾದಕ್ಕೀಡಾಗಿದ್ದಾರೆ.

ಪಾಕಿಸ್ತಾನ್ ಆಟಗಾರರು ತನ್ನ ಮೊದಲ ಪಂದ್ಯಕ್ಕೂ ಮುನ್ನ ಅಮೆರಿಕದಲ್ಲಿ ಖಾಸಗಿ ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ಅಭಿಮಾನಿಗಳು ಕೂಡ ಪಾಲ್ಗೊಳ್ಳಬಹುದು. ಆದರೆ ಅದಕ್ಕೆ 25 ಯುಸ್​ ಡಾಲರ್ ಪಾವತಿಸಬೇಕಾಗುತ್ತದೆ.

ಅಂದರೆ ಪಾಕಿಸ್ತಾನ್ ತಂಡವು ಔತಣಕೂಟವನ್ನು ಆಯೋಜಿಸಿ, ಅದಕ್ಕೆ ಟಿಕೆಟ್ ನಿಗದಿ ಮಾಡಿ ಅದರಿಂದ ದುಡ್ಡುಗಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಮೂಲಕ ತಮ್ಮನ್ನು ಭೇಟಿಯಾಗಲು ಪಾಕ್ ಆಟಗಾರರು  ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ್ದಾರೆ.

ಈ ಆಫರ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಏಕೆಂದರೆ ಕ್ರಿಕೆಟ್ ಆಡಲು ತೆರಳಿದ ತಂಡವೊಂದು ಔತಣಕೂಟ ಏರ್ಪಡಿಸಿದ ಅದರಿಂದ ದುಡ್ಡುಗಳಿಸಲು ಮುಂದಾಗುತ್ತಿರುವ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕ್ ಕ್ರಿಕೆಟ್ ಮಂಡಳಿಯ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಆಟಗಾರ ರಶೀದ್ ಲತೀಫ್, ಇಂತಹ ಐಡಿಯಾ ಕೊಟ್ಟದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪ್ರಕಾರ, ನಮ್ಮ ಆಟಗಾರರನ್ನು ಭೇಟಿ ಮಾಡಲು ತಗಲುವ ವೆಚ್ಚ ಕೇವಲ 25 ಯುಎಸ್ ಡಾಲರ್. ಇದು ನಿಜಕ್ಕೂ ನಾಚಿಕೆಗೇಡು. ಪಾಕಿಸ್ತಾನ್ ಕ್ರಿಕೆಟ್ ಹೆಸರಿನಲ್ಲಿ ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​ ಆಡಲು ತೆರಳಿರುವ ಪಾಕಿಸ್ತಾನ್ ತಂಡದ ಆಟಗಾರರು ಅಭಿಮಾನಿಗಳ ಭೇಟಿಗಾಗಿ ಔತಣಕೂಟದ ಆಫರ್ ನೀಡಿ ಹಣ ಪೀಕಲು ಮುಂದಾಗಿರುವುದು ಮಾತ್ರ ವಿಪರ್ಯಾಸ. ಇಂತಹ ನಾಚಿಕೆಗೇಡಿನ ಕೆಲಸಕ್ಕೆ ಕೈ ಹಾಕಿ ಇದೀಗ ಪಾಕಿಸ್ತಾನ್ ತಂಡವು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ: IND vs PAK: ಭಾರತದ ವಿರುದ್ಧ ಪಾಕಿಸ್ತಾನ್ ಗೆಲ್ಲಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ

ಇಂಡೊ vs ಪಾಕ್ ಮುಖಾಮುಖಿ ಯಾವಾಗ?

ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದರೆ, ಪಾಕಿಸ್ತಾನ್ ತಂಡವು ಜೂನ್ 6 ರಂದು ಯುಎಸ್​ಎ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಇನ್ನು ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂ ಆತಿಥ್ಯವಹಿಸುತ್ತಿರುವುದರಿಂದ ಈ ಬಾರಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Published On - 12:07 pm, Wed, 5 June 24