AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ‘ಹೃದಯ ಒಡೆದಿದೆ, ಇನ್ಮೇಲೆ ಸಪೋರ್ಟ್​ ಮಾಡಲ್ಲ’; ಪಾಕ್ ಅಭಿಮಾನಿಯ ಅಳಲು

T20 World Cup 2024: ಡಲ್ಲಾಸ್‌ನಲ್ಲಿ ಪಂದ್ಯ ಮುಗಿದ ನಂತರ ಪಾಕಿಸ್ತಾನದ ಪತ್ರಕರ್ತೆಯೊಬ್ಬರು, ಮಹಿಳಾ ಅಭಿಮಾನಿಯೊಬ್ಬರನ್ನು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಹಿಳಾ ಅಭಿಮಾನಿ, ತಂಡದ ಈ ಸೋಲಿನಿಂದ ನನ್ನ ಹೃದಯ ಛಿದ್ರವಾಗಿದೆ. ಇದು ಪಾಕಿಸ್ತಾನಿ ತಂಡಕ್ಕೆ ಅಭ್ಯಾಸವಾಗಿ ಹೊಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

T20 World Cup 2024: ‘ಹೃದಯ ಒಡೆದಿದೆ, ಇನ್ಮೇಲೆ ಸಪೋರ್ಟ್​ ಮಾಡಲ್ಲ’; ಪಾಕ್ ಅಭಿಮಾನಿಯ ಅಳಲು
ಪಾಕಿಸ್ತಾನ ತಂಡ
ಪೃಥ್ವಿಶಂಕರ
|

Updated on:Jun 07, 2024 | 4:50 PM

Share

2024ರ ಟಿ20 ವಿಶ್ವಕಪ್ (T20 World Cup 2024) ಗೆಲ್ಲುವ ಕನಸಿನೊಂದಿಗೆ ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದ ಪಾಕಿಸ್ತಾನ ತಂಡಕ್ಕೆ (Pakistan vs America) ಅಮೆರಿಕ ವಿರುದ್ಧದ ಸೋಲು ಭಾರೀ ಆಘಾತ ತಂದಿದೆ. ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಎಲ್ಲರನ್ನು ಬೆಚ್ಚಿ ಬೀಳಿಸಿದ್ದು, ಸೂಪರ್ ಓವರ್‌ನಲ್ಲಿ ಪಾಕಿಸ್ತಾನವನ್ನು 5 ರನ್‌ಗಳಿಂದ ಸೋಲಿಸಿದೆ. ಈ ಸೋಲಿನ ನಂತರ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಗಿದೆ. ಏಕೆಂದರೆ ಈ ಸೋಲು ಪಾಕ್ ತಂಡದ ಸೂಪರ್ 8 ಹಂತದ ದಾರಿಗೆ ಅಡಚಣೆಯನ್ನುಂಟು ಮಾಡಿದೆ. ಇದು ಒಂದೆಡೆಯಾದರೆ ನೆಚ್ಚಿನ ತಂಡದ ಸೋಲು ಕ್ರೀಡಾಂಗಣದಲ್ಲಿದ್ದ ಹಾಜರಿದ್ದ ಪಾಕಿಸ್ತಾನಿ ಅಭಿಮಾನಿಗಳ ಹೃದಯ ಒಡೆದಿದ್ದು, ತಂಡ ಸೋತ ಬಳಿಕ ಅಭಿಮಾನಿಯೊಬ್ಬರು ಬೇಸರದಿಂದ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ನನ್ನ ಹೃದಯ ಛಿದ್ರವಾಗಿದೆ; ಮಹಿಳಾ ಅಭಿಮಾನಿ

ಡಲ್ಲಾಸ್‌ನಲ್ಲಿ ಪಂದ್ಯ ಮುಗಿದ ನಂತರ ಪಾಕಿಸ್ತಾನದ ಪತ್ರಕರ್ತೆಯೊಬ್ಬರು, ಮಹಿಳಾ ಅಭಿಮಾನಿಯೊಬ್ಬರನ್ನು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಹಿಳಾ ಅಭಿಮಾನಿ, ತಂಡದ ಈ ಸೋಲಿನಿಂದ ನನ್ನ ಹೃದಯ ಛಿದ್ರವಾಗಿದೆ. ಇದು ಪಾಕಿಸ್ತಾನಿ ತಂಡಕ್ಕೆ ಅಭ್ಯಾಸವಾಗಿ ಹೊಗಿಬಿಟ್ಟಿದೆ. ಈ ತಂಡ ಕೇವಲ ವಿದೇಶ ಪ್ರವಾಸಕ್ಕೆ ಬಂದಂತೆ ತೊರುತ್ತದೆ. ಈ ತಂಡ ಅಭಿಮಾನಿಗಳ ಭಾವನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಪಾಕ್ ತಂಡದ ಕಳಪೆ ಆಟ

ಪಾಕಿಸ್ತಾನದ ಅಭಿಮಾನಿಗಳ ಈ ಬೇಸರಕ್ಕೂ ಕಾರಣವಿದೆ. ಏಕೆಂದರೆ ಈ ಪಂದ್ಯದಲ್ಲಿ ಪಾಕ್ ತಂಡ ನಿಜವಾಗಿಯೂ ಕೆಟ್ಟ ಕ್ರಿಕೆಟ್ ಆಡಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಚಾರದಲ್ಲಿ ತಮ್ಮ ತಂಡವು ಅಮೆರಿಕದ ವಿರುದ್ಧ ಸೋತಿದೆ ಎಂದು ಸ್ವತಃ ನಾಯಕ ಬಾಬರ್ ಆಝಂ ಅವರೇ ಒಪ್ಪಿಕೊಂಡಿದ್ದಾರೆ. ಡಲ್ಲಾಸ್ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಅತ್ಯಂತ ಕಳಪೆ ಆರಂಭ ಮಾಡಿತು. ಸ್ವತಃ ನಾಯಕ ಬಾಬರ್​ಗೆ ರನ್ ಗಳಿಸುವುದು ಕಷ್ಟವಾಯಿತು. ಪವರ್‌ಪ್ಲೇಯಲ್ಲಿ ಬಾಬರ್ 14 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದರು. ಇದರಿಂದಾಗಿ ಪಾಕಿಸ್ತಾನದ ರನ್ ರೇಟ್ ತುಂಬಾ ಕಡಿಮೆಯಾಯಿತು. ಅಂತಿಮವಾಗಿ ಪಾಕಿಸ್ತಾನ 159 ರನ್ ಗಳಿಸುವಲ್ಲಿ ಯಶಸ್ವಿಯಾಯಿತ್ತಾದರೂ, ತಂಡದ ಬೌಲರ್‌ಗಳು ಗೆಲುವು ತಂದುಕೊಡುವಲ್ಲಿ ವಿಫಲರಾದರು.

T20 World Cup 2024: ಮೊದಲ ಪಂದ್ಯದಲ್ಲೇ ಕಳ್ಳಾಟ? ಪಾಕ್ ಬೌಲರ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ

ಬೌಲಿಂಗ್ ಕೂಡ ವಿಫಲ

ಪಾಕ್ ತಂಡದಲ್ಲಿ ಶಾಹೀನ್ ಅಫ್ರಿದಿ, ಮೊಹಮ್ಮದ್ ಅಮೀರ್, ನಸೀಮ್ ಶಾ, ಹ್ಯಾರಿಸ್ ರೌಫ್ ಅವರಂತಹ ಬೌಲರ್‌ಗಳಿದ್ದರೂ ಅವರ್ಯಾರೂ ಪಾಕಿಸ್ತಾನವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಬೇಕು. ಕೊನೆಯ ಓವರ್‌ನಲ್ಲಿ ಹ್ಯಾರಿಸ್ ರೌಫ್ 15 ರನ್‌ಗಳನ್ನು ಉಳಿಸಬೇಕಾಗಿತ್ತು. ಆದರೆ ಅವರಿಗೆ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತದಲ್ಲಿ ಅಮೆರಿಕಕ್ಕೆ ಐದು ರನ್ ಬೇಕಿತ್ತು. ಈ ವೇಳೆ ಹ್ಯಾರಿಸ್ ಫುಲ್ ಟಾಸ್ ನೀಡುವ ಮೂಲಕ ಅಮೆರಿಕಕ್ಕೆ ಒಂದು ಬೌಂಡರಿಯನ್ನು ಉಡುಗೊರೆಯಾಗಿ ನೀಡಿದರು, ನಂತರ ಪಂದ್ಯ ಟೈ ಆಯಿತು.

ಇದರ ನಂತರ, ಮೊಹಮ್ಮದ್ ಅಮೀರ್ ಸೂಪರ್ ಓವರ್‌ನಲ್ಲಿ ಕಳಪೆ ಬೌಲಿಂಗ್‌ ಮಾಡಿದರು. ಕೇವಲ ವೈಡ್​ಗಳಿಂದಲೇ ಅವರು 7 ರನ್ ನೀಡಿದರು. ಹೀಗಾಗಿ ಅಮೆರಿಕ ತಂಡ 18 ರನ್ ಕಲೆಹಾಕಲು ಸಾಧ್ಯವಾಯಿತು. ಕೊನೆಯಲ್ಲಿ, ಪಾಕಿಸ್ತಾನಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಈ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Fri, 7 June 24

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ