T20 World Cup 2024: ಟಿ20 ವಿಶ್ವಕಪ್ ಗ್ರೂಪ್-2 ತಂಡಗಳ ವೇಳಾಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Jun 16, 2024 | 3:06 PM

T20 World Cup 2024: ಒಂದು ವೇಳೆ ನೆದರ್​ಲೆಂಡ್ ತಂಡ ಗೆದ್ದರೆ, ಬಾಂಗ್ಲಾದೇಶ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ನೆಟ್ ರನ್​ ರೇಟ್ ಮೂಲಕ ನೆದರ್​ಲೆಂಡ್ಸ್ ತಂಡಕ್ಕೆ ಸೂಪರ್-8 ಗೆ ಪ್ರವೇಶಿಸಲು ಅವಕಾಶವಿದೆ. ಹೀಗಾಗಿ ಗ್ರೂಪ್-1 ರಲ್ಲಿ ಕಾಣಿಸಿಕೊಳ್ಳಲಿರುವ ತಂಡ ಯಾವುದೆಂಬುದೇ ಈಗ ಕುತೂಹಲ.

T20 World Cup 2024: ಟಿ20 ವಿಶ್ವಕಪ್ ಗ್ರೂಪ್-2 ತಂಡಗಳ ವೇಳಾಪಟ್ಟಿ ಇಲ್ಲಿದೆ
T20 World Cup 2024
Follow us on

T20 World Cup 2024: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಬಹುತೇಕ ಪೂರ್ಣಗೊಂಡಿದೆ. 35 ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 7 ತಂಡಗಳು ಸೂಪರ್-8 ಹಂತಕ್ಕೇರಿದೆ. ಇನ್ನುಳಿದಿರುವುದು ಕೇವಲ ಒಂದು ಸ್ಥಾನ ಮಾತ್ರ. ಅದರಂತೆ ನೆದರ್​ಲೆಂಡ್ಸ್ ಅಥವಾ ಬಾಂಗ್ಲಾದೇಶ್ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶ್ ಮತ್ತು ನೆದರ್​ಲೆಂಡ್ಸ್​ ತಂಡಗಳು ಕೊನೆಯ ಪಂದ್ಯವಾಡಬೇಕಿದೆ. ಈ ಪಂದ್ಯದಲ್ಲಿ ನೆದರ್​ಲೆಂಡ್ಸ್ ತಂಡ ಸೋತರೆ ಬಾಂಗ್ಲಾದೇಶ್ ಸೂಪರ್​-8 ಗೆ ಅರ್ಹತೆ ಪಡೆಯಲಿದೆ.

ಒಂದು ವೇಳೆ ನೆದರ್​ಲೆಂಡ್ ತಂಡ ಗೆದ್ದರೆ, ಬಾಂಗ್ಲಾದೇಶ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ನೆಟ್ ರನ್​ ರೇಟ್ ಮೂಲಕ ನೆದರ್​ಲೆಂಡ್ಸ್ ತಂಡಕ್ಕೆ ಸೂಪರ್-8 ಗೆ ಪ್ರವೇಶಿಸಲು ಅವಕಾಶವಿದೆ. ಹೀಗಾಗಿ ಗ್ರೂಪ್-1 ರಲ್ಲಿ ಕಾಣಿಸಿಕೊಳ್ಳಲಿರುವ 4ನೇ ತಂಡ ಯಾವುದೆಂದು ಇನ್ನೂ ಸಹ ನಿರ್ಧಾರವಾಗಿಲ್ಲ.

ಮತ್ತೊಂದೆಡೆ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿರುವ 4 ತಂಡಗಳು ಕನ್ಫರ್ಮ್ ಆಗಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಎರಡನೇ ಗ್ರೂಪ್​ನಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್​, ಯುಎಸ್​ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಅದರಂತೆ ಎರಡು ಗ್ರೂಪ್​-2 ಗಳಲ್ಲಿರುವ ತಂಡಗಳಾವುವು ಮತ್ತು ವೇಳಾಪಟ್ಟಿ ಇಲ್ಲಿದೆ…

  • ಗ್ರೂಪ್-1
  • ಭಾರತ
  • ಆಸ್ಟ್ರೇಲಿಯಾ
  • ಅಫ್ಘಾನಿಸ್ತಾನ್
  • ಬಾಂಗ್ಲಾದೇಶ್ ಅಥವಾ ನೆದರ್​ಲೆಂಡ್ಸ್.

ಇದನ್ನೂ ಓದಿ: David Wiese: ಟಿ20 ವಿಶ್ವಕಪ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ

  • ಗ್ರೂಪ್-2
  • ಯುಎಸ್​ಎ
  • ವೆಸ್ಟ್ ಇಂಡೀಸ್
  • ಸೌತ್ ಆಫ್ರಿಕಾ
  • ಇಂಗ್ಲೆಂಡ್

ಸೂಪರ್-8 ಸುತ್ತಿನ ವೇಳಾಪಟ್ಟಿ:

ದಿನಾಂಕ  ಪಂದ್ಯಗಳು ಸ್ಥಳ
ಜೂನ್ 19 ಯುಎಸ್​ಎ vs ಸೌತ್ ಆಫ್ರಿಕಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಸೇಂಟ್ ಲೂಸಿಯಾ
ಜೂನ್ 20 ಭಾರತ vs ಅಫ್ಘಾನಿಸ್ತಾನ್ ಬಾರ್ಬಡೋಸ್
ಜೂನ್ 20 ಆಸ್ಟ್ರೇಲಿಯಾ vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21 ಇಂಗ್ಲೆಂಡ್ vs ಸೌತ್ ಆಫ್ರಿಕಾ ಸೇಂಟ್ ಲೂಸಿಯಾ
ಜೂನ್ 21 ಯುಎಸ್​ಎ vs ವೆಸ್ಟ್ ಇಂಡೀಸ್ ಬಾರ್ಬಡೋಸ್
ಜೂನ್ 22 ಭಾರತ vs D2 ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22 ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23 ಯುಎಸ್ಎ​ vs ಇಂಗ್ಲೆಂಡ್ ಬಾರ್ಬಡೋಸ್
ಜೂನ್ 23 ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24 ಆಸ್ಟ್ರೇಲಿಯಾ vs ಭಾರತ ಸೇಂಟ್ ಲೂಸಿಯಾ
ಜೂನ್ 24 ಅಫ್ಘಾನಿಸ್ತಾನ್ vs D2 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

ಇಲ್ಲಿ D2 ಎಂಬುದು ಮೊದಲ ಸುತ್ತಿನಲ್ಲಿ ಗ್ರೂಪ್-D ಪಾಯಿಂಟ್ಸ್​ ಟೇಬಲ್​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವ ತಂಡ. ಅಂದರೆ ಡಿ2 ಸ್ಥಾನದಲ್ಲಿ ಬಾಂಗ್ಲಾದೇಶ್ ಅಥವಾ ನೆದರ್​ಲೆಂಡ್ಸ್ ತಂಡ ಕಾಣಿಸಿಕೊಳ್ಳಲಿದೆ.

 

 

 

Published On - 3:06 pm, Sun, 16 June 24