2024 ರ ಟಿ20 ವಿಶ್ವಕಪ್‌ನ (T20 World Cup 2024) ಸೂಪರ್-8 ಸುತ್ತಿನ ವೇಳಾಪಟ್ಟಿ ಈಗ ಅಧಿಕೃತವಾಗಿ ಹೊರಬಿದ್ದಿದೆ. ಎರಡು ಗುಂಪುಗಳಲ್ಲಿ 8 ತಂಡಗಳು ಸೆಮಿಫೈನಲ್‌ಗೆ ಸೆಣಸಲಿವೆ. ಭಾರತವಲ್ಲದೆ ಗ್ರೂಪ್-1ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿದ್ದರೆ, ಗ್ರೂಪ್-2ರಲ್ಲಿ ಅಮೆರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಟಿ20 ವಿಶ್ವಕಪ್ 2024 ರ ಸೂಪರ್-8 ಪಂದ್ಯಗಳು ಜೂನ್ 19 ರಿಂದ ಕೆರಿಬಿಯನ್ ನೆಲದಲ್ಲಿ ನಡೆಯಲಿವೆ.
ಸೂಪರ್ 8 ಸುತ್ತಿನ ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲಿವೆ. ಅದಕ್ಕೂ ಮುನ್ನ ಸೂಪರ್-8 ಸುತ್ತಿನಲ್ಲಿ ಪ್ರತಿ ತಂಡಗಳು ತಲಾ 3 ಪಂದ್ಯಗಳನ್ನು ಆಡಬೇಕು. ಈ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲುವ ತಂಡ ಸೆಮಿಫೈನಲ್ಗೇರಲಿದೆ. ನಂತರ ಸೆಮಿಫೈನಲ್ ಸುತ್ತು ನಾಕೌಟ್ ಆಗಲಿದೆ. ಈ ಸುತ್ತಿನಲ್ಲಿ ಸೋತ ತಂಡದ ಪಯಣ ಅಲ್ಲಿಗೆ ಕೊನೆಗೊಳ್ಳಲಿದೆ. ಉಳಿದಂತೆ ವಿಜೇತ ತಂಡಗಳು ಫೈನಲ್ ತಲುಪಲಿದ್ದು, ಜೂನ್ 29ರಂದು ಬಾರ್ಬಡೋಸ್ನಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.
T20 World Cup 2024: ಸೂಪರ್-8 ಸುತ್ತಿನಲ್ಲಿ ಈ 3 ತಂಡಗಳನ್ನು ಎದುರಿಸಲಿದೆ ಭಾರತ
The schedule for the Super Eight stage of the #T20WorldCup has now been finalised 👀
Details ➡ https://t.co/K8gXT3Qngg pic.twitter.com/UPYqnbo3mx
— ICC (@ICC) June 17, 2024
ಗುಂಪು-1
ಗುಂಪು-2
ಪಂದ್ಯ ಸಂಖ್ಯೆ | ದಿನಾಂಕ | ಮುಖಾಮುಖಿ | ಸಮಯ | ಮೈದಾನ |
1 | 19-06-2024 | ಅಮೆರಿಕ vs ದಕ್ಷಿಣ ಆಫ್ರಿಕಾ | ರಾತ್ರಿ 8 ಗಂಟೆ | ಆಂಟಿಗುವಾ |
2 | 20-06-2024 | ಇಂಗ್ಲೆಂಡ್ vs ವೆಸ್ಟ್ ಇಂಡೀಸ್ | ಬೆಳಿಗ್ಗೆ 6 ಗಂಟೆಗೆ | ಸೇಂಟ್ ಲೂಸಿಯಾ |
3 | ಅಫ್ಘಾನಿಸ್ತಾನ vs ಭಾರತ | ರಾತ್ರಿ 8 ಗಂಟೆಗೆ | ಬಾರ್ಬಡೋಸ್ | |
4 | 21-06-2024 | ಆಸ್ಟ್ರೇಲಿಯಾ vs ಬಾಂಗ್ಲಾದೇಶ | ಬೆಳಿಗ್ಗೆ 6 ಗಂಟೆಗೆ | ಆಂಟಿಗುವಾ |
5 | ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ | ರಾತ್ರಿ 8 ಗಂಟೆಗೆ | ಸೇಂಟ್ ಲೂಸಿಯಾ | |
6 | 22-06-2024 | ಯುಎಸ್ಎ vs ವೆಸ್ಟ್ ಇಂಡೀಸ್ | ಬೆಳಿಗ್ಗೆ 6 ಗಂಟೆಗೆ | ಬಾರ್ಬಡೋಸ್ |
7 | ಭಾರತ vs ಬಾಂಗ್ಲಾದೇಶ | ರಾತ್ರಿ 8 ಗಂಟೆಗೆ | ಆಂಟಿಗುವಾ | |
8 | 23-06-2024 | ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ | ಬೆಳಿಗ್ಗೆ 6 ಗಂಟೆಗೆ | ಕಿಂಗ್ಸ್ ಟೌನ್ |
9 | ಯುಎಸ್ಎ vs ಇಂಗ್ಲೆಂಡ್ | ರಾತ್ರಿ 8 ಗಂಟೆಗೆ | ಬಾರ್ಬಡೋಸ್ | |
10 | 24-06-2024 | ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ | ಬೆಳಿಗ್ಗೆ 6 ಗಂಟೆಗೆ | ಆಂಟಿಗುವಾ |
11 | ಆಸ್ಟ್ರೇಲಿಯಾ vs ಭಾರತ | ರಾತ್ರಿ 8 ಗಂಟೆಗೆ | ಸೇಂಟ್ ಲೂಸಿಯಾ | |
12 | 25-06-2024 | ಅಫ್ಘಾನಿಸ್ತಾನ vs ಬಾಂಗ್ಲಾದೇಶ | ಬೆಳಿಗ್ಗೆ 6 ಗಂಟೆಗೆ | ಕಿಂಗ್ಸ್ ಟೌನ್ |
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Mon, 17 June 24