T20 World Cup 2024: ಸೂಪರ್-8 ಸುತ್ತಿನಲ್ಲಿ ಈ 3 ತಂಡಗಳನ್ನು ಎದುರಿಸಲಿದೆ ಭಾರತ
T20 World Cup 2024: ಭಾರತ ತಂಡ ಸೂಪರ್-8ರ ಗುಂಪು-1ರಲ್ಲಿದೆ. ಇಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧ, ಜೂನ್ 22 ರಂದು ಬಾಂಗ್ಲಾದೇಶ ವಿರುದ್ಧ ಮತ್ತು ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಬಾಂಗ್ಲಾದೇಶ ಮತ್ತು ನೇಪಾಳ (Bangladesh vs Nepal) ನಡುವಿನ ಪಂದ್ಯದ ನಂತರ, ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಸೂಪರ್-8 ಸುತ್ತಿನ ಬಗ್ಗೆ ಚಿತ್ರಣ ಸ್ಪಷ್ಟವಾಗಿದೆ. ಈ ಪಂದ್ಯದ ನಂತರ, ಸೂಪರ್ -8 ಆಡುವ ಎಲ್ಲಾ ತಂಡಗಳನ್ನು ನಿರ್ಧರಿಸಲಾಗಿದೆ. ನೇಪಾಳವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ ಸೂಪರ್-8 ಗೆ ಅರ್ಹತೆ ಪಡೆದಿದೆ. ಈ ಬಾರಿ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಿದ್ದು, ಹಲವು ತಂಡಗಳು ಮೊದಲ ಬಾರಿಗೆ ವಿಶ್ವಕಪ್ ಆಡಿದ್ದವು. ಈ 20 ತಂಡಗಳಲ್ಲಿ 12 ತಂಡಗಳು ಮೊದಲ ಸುತ್ತಿನಲ್ಲೇ ತಮ್ಮ ಪ್ರಯಾಣ ಮುಗಿಸಿದರೆ, ಇನ್ನು ಉಳಿದ 8 ತಂಡಗಳ ನಡುವೆ ಸೂಪರ್-8 ಪಂದ್ಯಗಳು ನಡೆಯಲಿವೆ. ಸೂಪರ್-8 ರ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿವೆ.
8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಣೆ
ಇದೀಗ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ತಂಡಗಳು ಸೂಪರ್-8ಸುತ್ತಿಗೆ ಅರ್ಹತೆ ಪಡೆದಿವೆ. ಈ ಎಲ್ಲಾ ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
- ಮೊದಲ ಗುಂಪು- ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ.
- ಎರಡನೇ ಗುಂಪು- ಯುಎಸ್ಎ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್.
T20 World Cup 2024: ಸೂಪರ್-8 ಸುತ್ತಿಗೆ 8 ತಂಡಗಳು ಎಂಟ್ರಿ; 12 ತಂಡಗಳ ಪ್ರಯಾಣ ಅಂತ್ಯ
ಭಾರತದ ವೇಳಾಪಟ್ಟಿ
ಭಾರತ ತಂಡ ಸೂಪರ್-8ರ ಗುಂಪು-1ರಲ್ಲಿದೆ. ಇಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧ, ಜೂನ್ 22 ರಂದು ಬಾಂಗ್ಲಾದೇಶ ವಿರುದ್ಧ ಮತ್ತು ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಸೂಪರ್-8 ರಲ್ಲಿ ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ
- ಭಾರತ vs ಅಫ್ಘಾನಿಸ್ತಾನ (ಜೂನ್ 20), ರಾತ್ರಿ 8 ಗಂಟೆಗೆ ಆರಂಭ
- ಭಾರತ vs ಬಾಂಗ್ಲಾದೇಶ (ಜೂನ್ 22), ರಾತ್ರಿ 8 ಗಂಟೆಗೆ ಆರಂಭ
- ಭಾರತ vs ಆಸ್ಟ್ರೇಲಿಯಾ (ಜೂನ್ 24), ರಾತ್ರಿ 8 ಗಂಟೆಗೆ ಆರಂಭ
The schedule for the Super Eight stage of the #T20WorldCup has now been finalised 👀
Details ➡ https://t.co/K8gXT3Qngg pic.twitter.com/UPYqnbo3mx
— ICC (@ICC) June 17, 2024
ಟೀಂ ಇಂಡಿಯಾದ ಅಜೇಯ ಓಟ
ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದೆ. ರೋಹಿತ್ ಪಡೆ ಲೀಗ್ ಸುತ್ತಿನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಆದರೆ ಟೀಂ ಇಂಡಿಯಾದ ಒಂದು ಪಂದ್ಯ ಮಾತ್ರ ಮಳೆಯಿಂದಾಗಿ ರದ್ದಾಗಬೇಕಾಯಿತು. ಇದೀಗ ಟೀಂ ಇಂಡಿಯಾ ಸೂಪರ್-8 ಪಂದ್ಯಗಳಲ್ಲೂ ತನ್ನ ಅಜೇಯ ಓಟವನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ