T20 World Cup 2024: ಸೂಪರ್-8 ಸುತ್ತಿಗೆ 8 ತಂಡಗಳು ಎಂಟ್ರಿ; 12 ತಂಡಗಳ ಪ್ರಯಾಣ ಅಂತ್ಯ
T20 World Cup 2024: ಈ ಬಾರಿ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಿದ್ದವು. ಈ 20 ತಂಡಗಳಲ್ಲಿ ಎಂಟು ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ 12 ತಂಡಗಳ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ. ಈ 12 ತಂಡಗಳಲ್ಲಿ ಎರಡು ಬಲಿಷ್ಠ ತಂಡಗಳೂ ಸೇರಿವೆ ಎಂಬುದು ಅಚ್ಚರಿಯ ಸಂಗತಿ. ಆ ಎರಡು ತಂಡಗಳೆಂದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್.
ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಇಂದು ಬಾಂಗ್ಲಾದೇಶ ಮತ್ತು ನೇಪಾಳ (Bangladesh vs Nepal) ನಡುವೆ ಮಹತ್ವದ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ, ನೇಪಾಳ ತಂಡವನ್ನು 21 ರನ್‌ಗಳಿಂದ ಮಣಿಸಿ ಸೂಪರ್-8 ಸುತ್ತಿಗೆ ಅರ್ಹತೆ ಪಡೆದಿದೆ. ಈ ಮೂಲಕ ಸೂಪರ್-8 ಆಡಲಿರುವ ಎಂಟು ತಂಡಗಳು ಖಚಿತವಾದಂತ್ತಾಗಿದೆ. ಈ ಎಂಟು ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಜೂನ್ 19 ರಿಂದ ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿವೆ.
ಸೂಪರ್-8 ತಲುಪಿದ ತಂಡಗಳಿವು
ಬಾಂಗ್ಲಾದೇಶ ಇಂದು ನೇಪಾಳ ತಂಡವನ್ನು ಸೋಲಿಸುವ ಮೂಲಕ ಸೂಪರ್-8 ತಲುಪಿದ ಕೊನೆಯ ತಂಡವಾಯಿತು. ಈಗ ಸೂಪರ್-8 ಸುತ್ತಿಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಯುಎಸ್ಎ, ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ತಂಡಗಳು ಅರ್ಹತೆ ಪಡೆದಿವೆ. ಈ ಎಲ್ಲಾ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
- ಸೂಪರ್-8 ರ ಮೊದಲ ಗುಂಪು- ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ.
- ಸೂಪರ್-8 ರ ಎರಡನೇ ಗುಂಪು – ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್.
Super Eight groups are locked 🔒
Who are the favourites to make it to the #T20WorldCup 2024 semi-finals? 👀 pic.twitter.com/fe0OkJpx2t
— ICC (@ICC) June 17, 2024
ಈ 12 ತಂಡಗಳ ಪಯಣ ಅಂತ್ಯ
ಈ ಬಾರಿ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಿದ್ದವು. ಈ 20 ತಂಡಗಳಲ್ಲಿ ಎಂಟು ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ 12 ತಂಡಗಳ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ. ಈ 12 ತಂಡಗಳಲ್ಲಿ ಎರಡು ಬಲಿಷ್ಠ ತಂಡಗಳೂ ಸೇರಿವೆ ಎಂಬುದು ಅಚ್ಚರಿಯ ಸಂಗತಿ. ಆ ಎರಡು ತಂಡಗಳೆಂದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್. ಉಳಿದಂತೆ ಪಪುವಾ ನ್ಯೂಗಿನಿಯಾ, ನಮೀಬಿಯಾ, ಐರ್ಲೆಂಡ್, ಕೆನಡಾ, ಓಮನ್, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ವಿಶ್ವಕಪ್ನಿಂದ ಹೊರಬಿದ್ದಿವೆ.
ಟಿ20 ವಿಶ್ವಕಪ್‌ನಲ್ಲಿ ಒಂದು ರನ್‌ನಿಂದ ಗೆದ್ದ ತಂಡಗಳು ಯಾವ್ಯಾವು ಗೊತ್ತಾ?
ಗೆಲ್ಲುವ ಅವಕಾಶ ಕೈಚೆಲ್ಲಿದ ನೇಪಾಳ
ಮಹತ್ವದ ಪಂದ್ಯದಲ್ಲಿ ನೇಪಾಳ ತಂಡವನ್ನು 21 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ಸೂಪರ್-8 ಗೆ ಲಗ್ಗೆ ಇಟ್ಟಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 106 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನೇಪಾಳ ತಂಡ 85 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ ಪರ ತಂಜಿಮ್ ಹಸನ್ ಗರಿಷ್ಠ 4 ವಿಕೆಟ್ ಪಡೆದರೆ, ಮುಸ್ತಾಫಿಜುರ್ ರೆಹಮಾನ್ 3 ವಿಕೆಟ್ ಪಡೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ