ಟಿ20 ವಿಶ್ವಕಪ್‌ಗೆ (T20 World Cup 2024) ಕೌಂಟ್‌ಡೌನ್ ಶುರುವಾಗಿದೆ. ಜೂನ್ 2 ರಿಂದ ಮಿನಿ ವಿಶ್ವಸಮರ 20 ತಂಡಗಳ ನಡುವೆ ಪ್ರಾರಂಭವಾಗಲಿದೆ. ಟೀಂ ಇಂಡಿಯಾದ (Team India) ಮೊದಲ ಪಂದ್ಯ ಜೂನ್ 5 ರಂದು ಐರ್ಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡಬೇಕಿದೆ. ಕುತೂಹಲಕಾರಿ ಸಂಗತಿಯೆಂದರೆ ಟೀಂ ಇಂಡಿಯಾ ಈ ಅಭ್ಯಾಸ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿ (new york) ಆಡಲು ಬಯಸಿದೆ. ಆದರೆ ಟೀಂ ಇಂಡಿಯಾದ ಈ ಮನವಿಯನ್ನು ತಿರಸ್ಕರಿಸಿರುವ ಐಸಿಸಿ, ಅಭ್ಯಾಸ ಪಂದ್ಯವನ್ನು ಫ್ಲೋರಿಡಾದಲ್ಲಿ ಆಯೋಜನೆ ಮಾಡುತ್ತಿದೆ. ವಾಸ್ತವವಾಗಿ ಟೀಂ ಇಂಡಿಯಾ ತನ್ನ ಮೊದಲ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ನ್ಯೂಯಾರ್ಕ್‌ನಲ್ಲಿ ಆಡಬೇಕಾಗಿದೆ. ಹೀಗಾಗಿ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ನ್ಯೂಯಾರ್ಕ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲು ಬಯಸಿದೆ. ಆದರೆ ವರದಿಗಳ ಪ್ರಕಾರ ಐಸಿಸಿ (ICC) ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್, ಬಿಸಿಸಿಐನ (BCCI) ಈ ಮನವಿಗೆ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ ಎಂದು ವರದಿಯಾಗಿದೆ.
ಟೀಂ ಇಂಡಿಯಾ ನ್ಯೂಯಾರ್ಕ್‌ನಲ್ಲಿ ಅಭ್ಯಾಸ ಪಂದ್ಯ ಆಡಿದರೆ ಅದು ತಂಡಕ್ಕೆ ನಿಸ್ಸಂಶಯವಾಗಿ ಲಾಭ ತರಲಿದೆ. ಏಕೆಂದರೆ ಇದೇ ಮೈದಾನದಲ್ಲಿ ರೋಹಿತ್ ಪಡೆ, ಪಾಕಿಸ್ತಾನದ ವಿರುದ್ಧ ಪಂದ್ಯ ಆಡಬೇಕಿದೆ. ಒಂದು ವೇಳೆ ಈ ಮೈದಾನದಲ್ಲಿ ಅಭ್ಯಾಸ ಪಂದ್ಯ ನಡೆದರೆ, ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ನ್ಯೂಯಾರ್ಕ್‌ನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಐಸಿಸಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ವಾಸ್ತವವಾಗಿ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕರಿಸಲು ಬಲವಾದ ಕಾರಣವೂ ಇದೆ. ಆ ಕಾರಣವೆಂದರೆ, ಟೀಂ ಇಂಡಿಯಾಗೆ ಈ ಮೈದಾನದಲ್ಲಿ ಅಭ್ಯಾಸ ಪಂದ್ಯ ಆಡಲು ಅವಕಾಶ ಕೊಟ್ಟರೆ, ಇದರಿಂದ ತಂಡಕ್ಕೆ ಲಾಭವಾಗುವ ಸಾಧ್ಯತೆಗಳಿವೆ. ಅಲ್ಲದೆ ಈ ವಿಚಾರದಲ್ಲಿ ವಿವಾದ ಉಂಟಾಗಬಹುದು ಎಂಬುದು ಐಸಿಸಿಯ ಈ ವಿರೋಧಕ್ಕೆ ಕಾರಣವಾಗಿದೆ.
T20 World Cup 2024: ಒಲ್ಲದ ಮನಸ್ಸಿನಲ್ಲಿ ಟಿ20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ..!
ಮೇ 25 ಅಥವಾ 26ರಂದು ಟೀಂ ಇಂಡಿಯಾದ ಅಭ್ಯಾಸ ಪಂದ್ಯ ನಡೆಯಲಿದೆ. ಮೇ 21 ರಂದು ಟೀಂ ಇಂಡಿಯಾದ ಕೆಲವು ಆಟಗಾರರು ವಿಶ್ವಕಪ್‌ಗೆ ತೆರಳಲಿದ್ದಾರೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಆದರೆ ನಂತರ ಈ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಐಪಿಎಲ್ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ಕೆಲವು ಆಟಗಾರರು ಮೇ 24 ರಂದು ಅಮೆರಿಕಕ್ಕೆ ಹೊರಡಲಿದ್ದಾರೆ. ಇವರಲ್ಲಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್ ಮುಂತಾದ ಆಟಗಾರರು ಸೇರಿದ್ದಾರೆ.
ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ 4 ಲೀಗ್ ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾದ ಗುಂಪಿನಲ್ಲಿ ಐರ್ಲೆಂಡ್, ಪಾಕಿಸ್ತಾನ, ಅಮೆರಿಕ ಮತ್ತು ಕೆನಡಾ ಸೇರಿವೆ. ಈ ಗುಂಪಿನ ನಂತರ ಮತ್ತೊಂದು ಸೂಪರ್ 8 ಸುತ್ತು ನಡೆಯಲಿದ್ದು, ಈ ಗುಂಪಿನ ಅಗ್ರ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Thu, 16 May 24