ಮಿನಿ ವಿಶ್ವಸಮರ ಗೆಲ್ಲಲು ನ್ಯೂಯಾರ್ಕ್‌ಗೆ ಹಾರಿದ ಕಿಂಗ್ ಕೊಹ್ಲಿಗೆ ಏರ್​ಪೋರ್ಟ್​ನಲ್ಲೂ ಅನುಷ್ಕಾ ಧ್ಯಾನ; ವಿಡಿಯೋ ನೋಡಿ

|

Updated on: May 31, 2024 | 3:48 PM

T20 World Cup 2024, Virat Kohli: ಸುದೀರ್ಘ ಕಾಯುವಿಕೆಯ ನಂತರ, ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಿಮವಾಗಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮಿನಿ ವಿಶ್ವಸಮರ ಗೆಲ್ಲಲು ನ್ಯೂಯಾರ್ಕ್‌ಗೆ ಹಾರಿದ ಕಿಂಗ್ ಕೊಹ್ಲಿಗೆ ಏರ್​ಪೋರ್ಟ್​ನಲ್ಲೂ ಅನುಷ್ಕಾ ಧ್ಯಾನ; ವಿಡಿಯೋ ನೋಡಿ
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
Follow us on

ಸುದೀರ್ಘ ಕಾಯುವಿಕೆಯ ನಂತರ, ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅಂತಿಮವಾಗಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೊಹ್ಲಿ ಹೊರತುಪಡಿಸಿ ಟಿ20 ವಿಶ್ವಕಪ್ (T20 World Cup 2024) ತಂಡದಲ್ಲಿರುವ ಎಲ್ಲಾ ಆಟಗಾರರು ಹಾಗೂ ನಾಲ್ವರು ಮೀಸಲು ಆಟಗಾರರು ಈಗಾಗಲೇ ನ್ಯೂಯಾರ್ಕ್ ತಲುಪಿದ್ದಾರೆ. ಹಾಗೆಯೇ ಬುಧವಾರದಿಂದ ತರಬೇತಿಯನ್ನೂ ಆರಂಭಿಸಿದ್ದಾರೆ. ಇನ್ನು ವಿಮಾನ ಏರಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ವಿರಾಟ್ ಕೊಹ್ಲಿ ಅಲ್ಲೂ ಸಹ ಮಡದಿ ಅನುಷ್ಕಾ ಶರ್ಮಾರನ್ನು (Anushka Sharma) ನೆನೆದಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಪಾಪರಾಜಿಗಳಿಗೆ ವಿಶೇಷ ಉಡುಗೊರೆ

ವಾಸ್ತವವಾಗಿ ವಿರಾಟ್ ಕೊಹ್ಲಿ ವಿಮಾನ ಏರಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ವಿರಾಟ್ ಕೊಹ್ಲಿ ಅವರನ್ನು ಪಾಪರಾಜಿಗಳು ಸುತ್ತುವರೆದಿದ್ದಾರೆ. ಈ ವೇಳೆ ಕೊಹ್ಲಿ ಪಾಪರಾಜಿ ಸೇರಿದಂತೆ ಹಲವು ಮಾಧ್ಯಮದವರಿಗೆ ಉಡುಗೊರೆಯನ್ನೂ ನೀಡಿದ್ದಾರೆ. ಉಡುಗೊರೆಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರು ಕೊಹ್ಲಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ತಕ್ಷಣ ಅನುಷ್ಕಾರನ್ನು ಹೊಗಳಿದ ವಿರಾಟ್, ಇದು ನನ್ನ ಐಡಿಯಾ ಅಲ್ಲ. ಬದಲಿಗೆ ಅನುಷ್ಕಾ ಈ ಉಡುಗೊರೆಗಳನ್ನು ನಿಮಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.

ಅಷ್ಟಕ್ಕೂ ವಿರಾಟ್ ಕೊಹ್ಲಿ ಪಾಪರಾಜಿಗಳಿಗೆ ಉಡುಗೊರೆ ನೀಡಿದ ಕಾರಣವೆನೆಂದರೆ, ಕಳೆದ ಫೆಬ್ರವರಿ 15 ರಂದು ವಿರುಷ್ಕಾ ದಂಪತಿಗಳು ಎರಡನೇ ಬಾರಿಗೆ ಪೋಷಕರಾಗಿದ್ದರು. ಲಂಡನ್​ನಲ್ಲಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ದಂಪತಿಗಳಿಬ್ಬರು ಭಾರತಕ್ಕೆ ವಾಪಸ್ಸಾಗುವ ವೇಳೆ ತಮ್ಮ ಮಗುವಿನ ಫೋಟೋ ಹಾಗೂ ವಿಡಿಯೋವನ್ನು ಚಿತ್ರೀಕರಿಸಿದಂತೆ ಪಾಪರಾಜಿಗಳ ಮನವಿ ಮಾಡಿದ್ದರು. ಅದರಂತೆ ಪಾಪರಾಜಿಗಳು ವಿರಾಟ್ ಅವರ ಮಕ್ಕಳ ಗೌಪ್ಯತೆಯನ್ನು ಕಾಪಾಡಿದ್ದರು. ಹೀಗಾಗಿ ಇದೀಗ ವಿರಾಟ್ ಮತ್ತು ಅನುಷ್ಕಾ ಪಾಪರಾಜಿಗಳಿಗೆ ವಿಶೇಷ ಉಡುಗೊರೆಯನ್ನು ನೀಡುವ ಮೂಲಕ ಧನ್ಯವಾದ ಹೇಳಿದ್ದಾರೆ.

ಅಭ್ಯಾಸ ಪಂದ್ಯ ಆಡುವುದು ಅನುಮಾನ

ಮಾಧ್ಯಮ ವರದಿಗಳ ಪ್ರಕಾರ, ವಿಶ್ವಕಪ್​ನಲ್ಲಿ ಭಾಗವಹಿಸಲು ಕೊಹ್ಲಿ ಅಮೆರಿಕಕ್ಕೆ ತೆರಳಿದ್ದರೂ, ಜೂನ್ 1 ರಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಲಭ್ಯತೆಯ ಬಗ್ಗೆ ಅನುಮಾನವಿದೆ. ಕೊಹ್ಲಿ ತಂಡದ ಅನುಭವಿ ಬ್ಯಾಟ್ಸ್‌ಮನ್ ಆಗಿದ್ದು, ಅವರು ತಂಡಕ್ಕೆ ಸೇರ್ಪಡೆಗೊಳ್ಳುವುದರಿಂದ ಆಟಗಾರರ ನೈತಿಕ ಸ್ಥೈರ್ಯ ಹೆಚ್ಚಲಿದೆ. ಆದರೆ ಸುದೀರ್ಘ ಪ್ರಯಾಣ ಮಾಡಲಿರುವ ಕೊಹ್ಲಿ ಆಯಾಸದ ಕಾರಣದಿಂದಾಗಿ ನಾಳೆ ನಡೆಯಲ್ಲಿರುವ ಅಭ್ಯಾಸ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 31 May 24