- Kannada News Photo gallery Cricket photos T20 World Cup 2024 Virat Kohli Set To Miss Warm Up Match Against Bangladesh
T20 World Cup 2024: ಟಿ20 ವಿಶ್ವಕಪ್ ಆರಂಭಕ್ಕೆ 3 ದಿನ ಬಾಕಿ; ಇನ್ನೂ ತಂಡ ಸೇರಿಕೊಳ್ಳದ ಕೊಹ್ಲಿ..!
T20 World Cup 2024: ಟಿ20 ವಿಶ್ವಕಪ್ ಆರಂಭಕ್ಕೆ ಮೂರು ದಿನ ಬಾಕಿಯಿದ್ದು, ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಈ ಮಿನಿ ವಿಶ್ವಕಪ್ ಟೂರ್ನಮೆಂಟ್‌ಗಾಗಿ ಕೊಹ್ಲಿ ಯಾವಾಗ ನ್ಯೂಯಾರ್ಕ್ ತಲುಪುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ, ಆದರೆ ಸದ್ಯಕ್ಕೆ ಉತ್ತರ ಲಭ್ಯವಿಲ್ಲ.
Updated on: May 30, 2024 | 10:38 PM

ಟಿ20 ವಿಶ್ವಕಪ್ ಆರಂಭಕ್ಕೆ ಮೂರು ದಿನ ಬಾಕಿಯಿದ್ದು, ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಈ ಮಿನಿ ವಿಶ್ವಕಪ್ ಟೂರ್ನಮೆಂಟ್‌ಗಾಗಿ ಕೊಹ್ಲಿ ಯಾವಾಗ ನ್ಯೂಯಾರ್ಕ್ ತಲುಪುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ, ಆದರೆ ಸದ್ಯಕ್ಕೆ ಉತ್ತರ ಲಭ್ಯವಿಲ್ಲ.

ಕೊಹ್ಲಿ ಹೊರತುಪಡಿಸಿ ಟಿ20 ವಿಶ್ವಕಪ್ ತಂಡದಲ್ಲಿರುವ ಎಲ್ಲಾ ಆಟಗಾರರು ಹಾಗೂ ನಾಲ್ವರು ಮೀಸಲು ಆಟಗಾರರು ಸೇರಿದಂತೆ ನ್ಯೂಯಾರ್ಕ್ ತಲುಪಿದ್ದಾರೆ. ಈ ಆಟಗಾರರು ಬುಧವಾರದಿಂದ ತರಬೇತಿಯನ್ನೂ ಆರಂಭಿಸಿದ್ದಾರೆ. ಆದರೆ ಕೊಹ್ಲಿ ಮಾತ್ರ ತಂಡ ಸೇರಿಕೊಳ್ಳುವ ಮನಸ್ಸು ಮಾಡಿಲ್ಲ.

ಕೊಹ್ಲಿ ಇತ್ತೀಚೆಗೆ ಮುಂಬೈನಲ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಎರಡು ತಿಂಗಳ ಸುದೀರ್ಘ ಐಪಿಎಲ್ ನಂತರ ಕೊಹ್ಲಿ ಕೆಲವು ದಿನಗಳ ವಿಶ್ರಾಂತಿ ಕೇಳಿದ್ದು ಕೊಹ್ಲಿ ಮನವಿಗೆ ಬಿಸಿಸಿಐ ಸಮ್ಮತಿ ನೀಡಿದೆ ಎಂದು ವರದಿಯಾಗಿತ್ತು.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕೊಹ್ಲಿ ಶುಕ್ರವಾರ ನ್ಯೂಯಾರ್ಕ್ ತಲುಪಬಹುದು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಐಪಿಎಲ್‌ನಿಂದ ಆರ್‌ಸಿಬಿ ಹೊರಬಿದ್ದ ನಂತರ, ಕೊಹ್ಲಿ ವೈಯಕ್ತಿಕ ಕೆಲಸಕ್ಕಾಗಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಶುಕ್ರವಾರ ತಂಡವನ್ನು ಸೇರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಆದರೆ, ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಭಾರತ ತಂಡದ ಏಕೈಕ ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಲಭ್ಯವಿರುವುದಿಲ್ಲ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಸುದೀರ್ಘ ಪ್ರಯಾಣದ ನಂತರ, ಶನಿವಾರ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಭಾಗವಹಿಸುತ್ತಾರೆ ಎಂಬ ಭರವಸೆ ಇಲ್ಲ ಎಂದು ಹೇಳಲಾಗುತ್ತಿದೆ.

17ನೇ ಆವೃತ್ತಿಯ ಐಪಿಎಲ್ನಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಆಡಿದ 15 ಪಂದ್ಯಗಳಲ್ಲಿ 154.70 ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಬಾರಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ಗೆದ್ದಿದ್ದರು. ಹೀಗಾಗಿ ಇದೇ ಫಾರ್ಮ್ ಅನ್ನು ಕೊಹ್ಲಿ ಟಿ20 ವಿಶ್ವಕಪ್ನಲ್ಲೂ ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಉಳಿದಂತೆ ಮೇ 25 ರಂದು ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತೀಯ ಆಟಗಾರರ ಮೊದಲ ಬ್ಯಾಚ್ ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳಿದ್ದು, ಐಪಿಎಲ್ ಕ್ವಾಲಿಫೈಯರ್-2 ನಂತರ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಯುಜ್ವೇಂದ್ರ ಚಾಹಲ್ ನ್ಯೂಯಾರ್ಕ್ ತಲುಪಿದ್ದು ಗೊತ್ತೇ ಇದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಜೂನ್ 5 ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
























