ಟಿ20 ವಿಶ್ವಕಪ್​ ಪರಿಷ್ಕೃತ ವೇಳಾಪಟ್ಟಿ ಪ್ರಕಟ

T20 World Cup 2026 Schedule: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಒಟ್ಟು 20 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಬಾಂಗ್ಲಾದೇಶ್ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅವಕಾಶ ನೀಡಲಾಗಿದೆ.

ಟಿ20 ವಿಶ್ವಕಪ್​ ಪರಿಷ್ಕೃತ ವೇಳಾಪಟ್ಟಿ ಪ್ರಕಟ
T20 World Cup 2026

Updated on: Jan 25, 2026 | 8:59 AM

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವು ಹೊರಬಿದ್ದಿದೆ. ಭಾರತದಲ್ಲಿ ಟೂರ್ನಿ ಆಡಲು ನಿರಾಕರಿಸಿರುವ ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್​ನಿಂದ ಐಸಿಸಿ ಕೈ ಬಿಟ್ಟಿದೆ. ಬದಲಾಗಿ ಸ್ಕಾಟ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಇದೀಗ ಟಿ20 ವಿಶ್ವಕಪ್​ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆಯಾಗಿದೆ.

ಈ ಹಿಂದೆ ಬಾಂಗ್ಲಾದೇಶ್ ತಂಡವು ಗ್ರೂಪ್ ಸಿ ನಲ್ಲಿ ಸ್ಥಾನ ಪಡೆದಿತ್ತು. ಇದೀಗ ಗ್ರೂಪ್ ಸಿ ನಲ್ಲಿ ಸ್ಕಾಟ್ಲೆಂಡ್ ತಂಡ ಕಾಣಿಸಿಕೊಂಡಿದೆ. ಅದರಂತೆ ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್ ತಂಡವು ಇಂಗ್ಲೆಂಡ್, ಇಟಲಿ, ವೆಸ್ಟ್ ಇಂಡೀಸ್ ಹಾಗೂ ನೇಪಾಳ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಈ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಈ ಪಂದ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಟಿ20 ವಿಶ್ವಕಪ್ ವೇಳಾಪಟ್ಟಿ:

ದಿನಾಂಕ ಪಂದ್ಯ ಸ್ಥಳ
ಫೆಬ್ರವರಿ 7
ಪಾಕಿಸ್ತಾನ vs ನೆದರ್​ಲೆಂಡ್ಸ್ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 7 ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಕೋಲ್ಕತ್ತಾ
ಫೆಬ್ರವರಿ 7 ಭಾರತ vs ಅಮೆರಿಕ ಮುಂಬೈ
ಫೆಬ್ರವರಿ 8 ನ್ಯೂಝಿಲೆಂಡ್ vs ಅಫ್ಘಾನಿಸ್ತಾನ್ ಚೆನ್ನೈ
ಫೆಬ್ರವರಿ 8 ಇಂಗ್ಲೆಂಡ್ vs ನೇಪಾಳ ಮುಂಬೈ
ಫೆಬ್ರವರಿ 8 ಶ್ರೀಲಂಕಾ vs ಐರ್ಲೆಂಡ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 9 ಸ್ಕಾಟ್ಲೆಂಡ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 9 ಝಿಂಬಾಬ್ವೆ vs ಓಮನ್ ಎಸ್‌ಎಸ್‌ಸಿ, ಕೊಲಂಬೊ
 ಫೆಬ್ರವರಿ 9 ಸೌತ್ ಆಫ್ರಿಕಾ vs ಕೆನಡಾ ಅಹಮದಾಬಾದ್
ಫೆಬ್ರವರಿ 10 ನೆದಲೆಂಡ್ಸ್ vs ನಮೀಬಿಯಾ ದೆಹಲಿ
ಫೆಬ್ರವರಿ 10 ನ್ಯೂಝಿಲೆಂಡ್ vs ಯುಎಇ ಚೆನ್ನೈ
ಫೆಬ್ರವರಿ 10 ಪಾಕಿಸ್ತಾನ್ vs ಅಮೆರಿಕ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 11 ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ ಅಹಮದಾಬಾದ್
ಫೆಬ್ರವರಿ 11 ಆಸ್ಟ್ರೇಲಿಯಾ vs ಐರ್ಲೆಂಡ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 11 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮುಂಬೈ
ಫೆಬ್ರವರಿ 12 ಶ್ರೀಲಂಕಾ vs ಒಮಾನ್ ಕ್ಯಾಂಡಿ
ಫೆಬ್ರವರಿ 12 ನೇಪಾಳ vs ಇಟಲಿ ಮುಂಬೈ
ಫೆಬ್ರವರಿ 12 ಭಾರತ vs ನಮೀಬಿಯಾ ದೆಹಲಿ
ಫೆಬ್ರವರಿ 13 ಆಸ್ಟ್ರೇಲಿಯಾ vs ಝಿಂಬಾಬ್ವೆ ಪ್ರೇಮದಾಸ, ಕೊಲಂಬೊ
ಫೆಬ್ರವರಿ 13 ಕೆನಡಾ vs ಯುಎಇ ದೆಹಲಿ
ಫೆಬ್ರವರಿ 13 ಅಮೆರಿಕ vs ನೆದಲೆಂಡ್ಸ್ ಚೆನ್ನೈ
ಫೆಬ್ರವರಿ 14 ಐರ್ಲೆಂಡ್ vs ಒಮಾನ್ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 14 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಕೋಲ್ಕತ್ತಾ
ಫೆಬ್ರವರಿ 14 ನ್ಯೂಝಿಲೆಂಡ್ vs ಸೌತ್ ಆಫ್ರಿಕಾ ಅಹಮದಾಬಾದ್
ಫೆಬ್ರವರಿ 15 ವೆಸ್ಟ್ ಇಂಡೀಸ್ vs ನೇಪಾಳ ಮುಂಬೈ
ಫೆಬ್ರವರಿ 15 ಅಮೆರಿಕ vs ನಮೀಬಿಯಾ ಚೆನ್ನೈ
ಫೆಬ್ರವರಿ 15 ಭಾರತ vs ಪಾಕಿಸ್ತಾನ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 16 ಅಫ್ಘಾನಿಸ್ತಾನ vs ಯುಎಇ ದೆಹಲಿ
ಫೆಬ್ರವರಿ 16 ಇಂಗ್ಲೆಂಡ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 16 ಆಸ್ಟ್ರೇಲಿಯಾ vs ಶ್ರೀಲಂಕಾ ಕ್ಯಾಂಡಿ
ಫೆಬ್ರವರಿ 17 ನ್ಯೂಝಿಲೆಂಡ್ vs ಕೆನಡಾ ಚೆನ್ನೈ
ಫೆಬ್ರವರಿ 17 ಐರ್ಲೆಂಡ್ vs ಝಿಂಬಾಬ್ವೆ ಕ್ಯಾಂಡಿ
ಫೆಬ್ರವರಿ 17 ಸ್ಕಾಟ್ಲೆಂಡ್ vs ನೇಪಾಳ ಮುಂಬೈ
ಫೆಬ್ರವರಿ 18 ಸೌತ್ ಆಫ್ರಿಕಾ vs ಯುಎಇ ದೆಹಲಿ
ಫೆಬ್ರವರಿ 18 ಪಾಕಿಸ್ತಾನ್ vs ನಮೀಬಿಯಾ ಎಸ್‌ಎಸ್‌ಸಿ, ಕೊಲಂಬೊ
ಫೆಬ್ರವರಿ 18 ಭಾರತ vs ನೆದರ್​ಲೆಂಡ್ಸ್ ಅಹಮದಾಬಾದ್
ಫೆಬ್ರವರಿ 19 ವೆಸ್ಟ್ ಇಂಡೀಸ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 19 ಶ್ರೀಲಂಕಾ vs ಝಿಂಬಾಬ್ವೆ ಪ್ರೇಮದಾಸ, ಕೊಲಂಬೊ
ಫೆಬ್ರವರಿ 19 ಅಫ್ಘಾನಿಸ್ತಾನ vs ಕೆನಡಾ ಚೆನ್ನೈ
ಫೆಬ್ರವರಿ 20 ಆಸ್ಟ್ರೇಲಿಯಾ vs ಒಮಾನ್ ಕ್ಯಾಂಡಿ

ಸೂಪರ್-8 ಮತ್ತು ನಾಕೌಟ್ ಪಂದ್ಯಗಳು:

ಲೀಗ್ ಹಂತದಲ್ಲಿ ಕಣಕ್ಕಿಳಿಯುವ 20 ತಂಡಗಳಲ್ಲಿ  ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸುತ್ತದೆ.
  • ಸೂಪರ್ 8 ಹಂತದ ಪಂದ್ಯಗಳು: ಫೆಬ್ರವರಿ 21 ರಿಂದ ಮಾರ್ಚ್ 1, 2026 ರವರೆಗೆ ನಡೆಯಲಿದೆ. ಇದಾದ ಬಳಿಕ ಸೆಮಿಫೈನಲ್ ಜರುಗಲಿದೆ.
  • ಸೆಮಿಫೈನಲ್  ಪಂದ್ಯಗಳು: ಮಾರ್ಚ್ 4 ರಂದು ಮೊದಲ ಸೆಮಿಫೈನಲ್ ಹಾಗೂ ಮಾರ್ಚ್ 5 ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.
  • ಫೈನಲ್: ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಸೋತ RCB ತಂಡದ ಫೈನಲ್​ ಲೆಕ್ಕಾಚಾರ ಹೀಗಿದೆ

ತಂಡಗಳ ಗ್ರೂಪ್:

  • ಗುಂಪು A: ಭಾರತ, ಪಾಕಿಸ್ತಾನ್, ನೆದರ್‌ಲೆಂಡ್ಸ್, ನಮೀಬಿಯಾ, ಯುಎಸ್‌ಎ.
  • ಗುಂಪು B: ಶ್ರೀಲಂಕಾ, ಆಸ್ಟ್ರೇಲಿಯಾ, ಝಿಂಬಾಬ್ವೆ, ಐರ್ಲೆಂಡ್, ಒಮಾನ್.
  • ಗುಂಪು C: ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ , ನೇಪಾಳ, ಇಟಲಿ.
  • ಗುಂಪು D: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ. 

 

 

Published On - 8:56 am, Sun, 25 January 26