ಟಿ 20 ವಿಶ್ವಕಪ್‌ಗೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೇಯ ಸುದ್ದಿ ಸಿಕ್ಕಿದೆ. ಈ ಸುದ್ದಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ತಂದಿದೆ. ಐಸಿಸಿ ಮತ್ತು ಪಂದ್ಯಾವಳಿಯ ಆತಿಥೇಯ ಬಿಸಿಸಿಐ ಕ್ರೀಡಾಂಗಣದಲ್ಲಿ ಶೇ .70 ಪ್ರೇಕ್ಷಕರ ಪ್ರವೇಶಕ್ಕೆ ಹಸಿರು ನಿಶಾನೆ ತೋರಿದೆ. ಇದರರ್ಥ ಟಿ 20 ವಿಶ್ವಕಪ್ ಪಂದ್ಯಗಳು ಇನ್ನು ಮುಂದೆ ಮೌನವಾಗಿ ನಡೆಯುವುದಿಲ್ಲ. ಸ್ಟೇಡಿಯಂನಲ್ಲಿ ಪ್ರತಿ ವಿಕೆಟ್, ಪ್ರತಿ ರನ್ಗಳಿಸಿದಾಗಲೂ ಅಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಕೇಳಲಿದೆ. ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ.
ಈ ಮಾಹಿತಿಯನ್ನು ಹಂಚಿಕೊಂಡಿರುವ ಐಸಿಸಿ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗಾಗಿ 70 % ಪ್ರೇಕ್ಷಕರನ್ನು ಕ್ರೀಡಾಂಗಣದಲ್ಲಿ ಅನುಮತಿಸಲಾಗುವುದು ಎಂದು ಹೇಳಿದೆ. ಇದರೊಂದಿಗೆ ಆನ್‌ಲೈನ್ ಟಿಕೆಟ್‌ಗಳ ಮಾರಾಟವನ್ನು ಆರಂಭಿಸಲಾಗಿದೆ. ಐಸಿಸಿಯ ಈ ಮೆಗಾ ಈವೆಂಟ್‌ನಲ್ಲಿ, ಸೂಪರ್ 12 ಹಂತದ ಮೊದಲ ಪಂದ್ಯವು ಅಕ್ಟೋಬರ್ 23 ರಂದು ನಡೆಯಲಿದೆ. ಈ ಟೂರ್ನಿಯ ಅತ್ಯಂತ ಉನ್ನತ ಮಟ್ಟದ ಪಂದ್ಯವು ಅಕ್ಟೋಬರ್ 24 ರಂದು ನಡೆಯಲಿದೆ, ಇದರಲ್ಲಿ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿದೆ.
ಟಿಕೆಟ್ ಮಾರಾಟ ಆರಂಭ
ಐಸಿಸಿ ಟಿ 20 ವಿಶ್ವಕಪ್ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ. ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ, ಈ ಟೂರ್ನಿಯ ಟಿಕೆಟ್‌ಗಳ ಆರಂಭಿಕ ಬೆಲೆಯನ್ನು ಒಮಾನ್‌ನಲ್ಲಿ 10 ಒಮಾನಿ ರಿಯಾಲ್ ಮತ್ತು ಯುಎಇಯಲ್ಲಿ 30 ದಿರ್ಹಾಮ್‌ನಲ್ಲಿ ಇರಿಸಲಾಗಿದೆ. ಐಸಿಸಿ ಪ್ರಕಾರ, ಟಿಕೆಟ್‌ಗಳನ್ನು www.t20worldcup.com/tickets ನಿಂದ ಖರೀದಿಸಬಹುದು.
The ICC Men’s #T20WorldCup 2021 is fast approaching!
Be a part of the cricketing carnival and #LiveTheGame ??
Ticket booking now OPEN ?️ https://t.co/F78P6m0weU pic.twitter.com/tmjYZbHwMn
— T20 World Cup (@T20WorldCup) October 3, 2021
ಪ್ರೇಕ್ಷಕರ ಪ್ರವೇಶಕ್ಕೆ ಜೈ ಶಾ ಸಂತಸ
ಟಿ 20 ವಿಶ್ವಕಪ್‌ಗಾಗಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರವೇಶದ ಕುರಿತು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಟಿ 20 ವಿಶ್ವಕಪ್ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದಕ್ಕಾಗಿ, ಕ್ರೀಡಾಂಗಣಕ್ಕೆ ಪ್ರವೇಶಿಸುವ ಅಭಿಮಾನಿಗಳ ನಿರ್ಧಾರವನ್ನು ಅನುಮೋದಿಸಿದ ಯುಎಇ ಮತ್ತು ಒಮಾನ್ ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಈಗ ಪ್ರಪಂಚದ ಪ್ರತಿಯೊಂದು ಭಾಗದ ಕ್ರಿಕೆಟ್ ಅಭಿಮಾನಿಗಳು ಯುಎಇ ಮತ್ತು ಒಮಾನ್‌ಗೆ ತಮ್ಮ ತಂಡವನ್ನು ಹುರಿದುಂಬಿಸಲು ಆಗಮಿಸುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ಪ್ರೇಕ್ಷಕರ ಉಪಸ್ಥಿತಿಯಿಂದ ಸೃಷ್ಟಿಯಾದ ವಾತಾವರಣವು ಮೈದಾನದಲ್ಲಿರುವ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.