T20 World Cup: ಇದೊಂದು ಆದರ್ಶವಾದ ವಿಶ್ವಕಪ್‌ ಆಗಿರಲಿಲ್ಲ! ನಾವು ಒಳ್ಳೆಯ ಪಾಠ ಕಲಿತೆವು: ಕೆ.ಎಲ್ ರಾಹುಲ್

| Updated By: ಪೃಥ್ವಿಶಂಕರ

Updated on: Nov 10, 2021 | 4:43 PM

T20 World Cup: ನಮಗೆ ಇದೊಂದು ಆದರ್ಶವಾದ ವಿಶ್ವಕಪ್‌ ಆಗಿರಲಿಲ್ಲ, ಆದರೆ ನಾವು ಕಲಿತೆವು ಮತ್ತು ಬೆಳೆದೆವು. ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು.

T20 World Cup: ಇದೊಂದು ಆದರ್ಶವಾದ ವಿಶ್ವಕಪ್‌ ಆಗಿರಲಿಲ್ಲ! ನಾವು ಒಳ್ಳೆಯ ಪಾಠ ಕಲಿತೆವು: ಕೆ.ಎಲ್ ರಾಹುಲ್
ಕೆ.ಎಲ್ ರಾಹುಲ್
Follow us on

ಆರನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಭಾರತ ಕ್ರಿಕೆಟ್ ತಂಡ (Indian Cricket Team) ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಸೋಮವಾರ ನಡೆದ ಕೊನೇ ಪಂದ್ಯದಲ್ಲಿ ನಮೀಬಿಯಾ (India vs Namibia) ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಕಾಣುವ ಮೂಲಕ ಗೆಲುವಿನ ವಿದಾಯ ಹೇಳಿತು. ಇದರೊಂದಿಗೆ ಟಿ20 ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಯುಗವೂ ಅಂತ್ಯಕಂಡಿದೆ. ಜೊತೆಗೆ ಮುಖ್ಯಕೋಚ್ ರವಿಶಾಸ್ತ್ರಿ (Ravi Shastri) ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗದ ಪಯಣವೂ ಮುಗಿದಿದೆ. 2012ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಮೊದಲ ಬಾರಿಗೆ ನಾಕೌಟ್ ಹಂತಕ್ಕೇರಲು ವಿಫಲವಾದ ಟೀಮ್ ಇಂಡಿಯಾ ಬರಿಗೈಲಿ ತವರಿಗೆ ಮರಳಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯದ ಬಗ್ಗೆ ಮಾತನಾಡಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್ ಇಲ್ಲಿ ನಾವು ಸಾಕಷ್ಟು ಕಲಿತಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಕೂ ಮಾಡಿರುವ ಕ್ರಿಕೆಟಿಗ ಕೆ. ಎಲ್ . ರಾಹುಲ್ ನಮಗೆ ಇದೊಂದು ಆದರ್ಶವಾದ ವಿಶ್ವಕಪ್‌ ಆಗಿರಲಿಲ್ಲ, ಆದರೆ ನಾವು ಕಲಿತೆವು ಮತ್ತು ಬೆಳೆದೆವು. ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಾವು ಕ್ರಿಕೆಟ್ ಪಟುಗಳಾಗಿ ಬೆಳೆಯಲು ಸಹಾಯ ಮಾಡಿದ ನಮ್ಮ ಕೋಚ್‌ಗಳಿಗೆ ಕೃತಜ್ಞತೆಗಳು. ತಂಡವನ್ನು ಮುನ್ನಡೆಸಿದ ಮತ್ತು ನಮಗೆ ಎಲ್ಲ ರೀತಿಯ ಬೆಂಬಲ ನೀಡಿದ ವಿರಾಟ್ ಕೊಹ್ಲಿ ಅವರಿಗೆ ನಮ್ಮ ಅನಂತ ಕೃತಜ್ಞತೆಗಳು. ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾದ ಭಾರತ ತಂಡವು ಸತತ ಮೂರನೇ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತ್ತು. ಐದು ಪಂದ್ಯಗಳಲ್ಲಿ ಒಟ್ಟು ಆರು ಅಂಕಗಳನ್ನು ಕಲೆ ಹಾಕಿತ್ತು. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಭಾರತದ ವಿಶ್ವಕಪ್ ಕನಸು ಭಗ್ನಗೊಳ್ಳಲು ಕಾರಣವಾಗಿದೆ.