Team India: ಮತ್ತೆ ಶುರು ವಿಶ್ರಾಂತಿ ಪರ್ವ; ಏಕದಿನ ಸರಣಿಯಿಂದ ರೋಹಿತ್, ಕೊಹ್ಲಿ ಔಟ್! ನಾಯಕ ಯಾರು ಗೊತ್ತಾ?

|

Updated on: May 26, 2023 | 5:17 PM

Team India: ಬಿಡುವಿಲ್ಲದ ಕ್ಯಾಲೆಂಡರ್ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಉತ್ತಮ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ.

Team India: ಮತ್ತೆ ಶುರು ವಿಶ್ರಾಂತಿ ಪರ್ವ; ಏಕದಿನ ಸರಣಿಯಿಂದ ರೋಹಿತ್, ಕೊಹ್ಲಿ ಔಟ್! ನಾಯಕ ಯಾರು ಗೊತ್ತಾ?
ರೋಹಿತ್, ಕೊಹ್ಲಿ, ಪಾಂಡ್ಯ
Follow us on

ಸದ್ಯ ಐಪಿಎಲ್​ನಲ್ಲಿ (IPL) ಬ್ಯುಸಿಯಾಗಿರುವ ಟೀಂ ಇಂಡಿಯಾ (Team India) ಐಪಿಎಲ್ 16 ನೇ ಸೀಸನ್ ಮುಗಿದ ತಕ್ಷಣ ದ್ವಿಪಕ್ಷಿಣ ಸರಣಿಗಳಲ್ಲಿ ನಿರತವಾಗಲಿದೆ. ಐಪಿಎಲ್ ಮುಗಿದೊಡನೆ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಜೂನ್ 7 ರಿಂದ 11 ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಅಂತಿಮ ಪಂದ್ಯದಲ್ಲಿ ಈ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಡಬ್ಲ್ಯುಟಿಸಿ ಫೈನಲ್ ನಂತರ ಟೀಂ ಇಂಡಿಯಾ ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ 3 ಏಕದಿನ ಸರಣಿಯನ್ನು ಆಡಲಿದೆ. ಮತ್ತೊಂದೆಡೆ, ಈ ಸರಣಿಯನ್ನು ರದ್ದುಗೊಳಿಸಲಾಗುವುದು ಎಂಬ ಸುದ್ದಿಯ ಹೊರತಾಗಿಯೂ, ಅನೇಕ ಕ್ರಿಕೆಟ್ ವಿಶ್ಲೇಷಕರು ಅಫ್ಘಾನಿಸ್ತಾನ ವಿರುದ್ಧದ ಸರಣಿಯು ಮುಂಬರುವ ಏಕದಿನ ವಿಶ್ವಕಪ್ 2023ರ ತಯಾರಿಗೆ ಟೀಂ ಇಂಡಿಯಾಗೆ ಸಹಾಯಕವಾಗಲಿದೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಆದರೆ ಈ ನಡುವೆ ಈ ಸರಣಿಯಿಂದ ಟೀಂ ಇಂಡಿಯಾದ ಹಲವು ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಟೀಂ ಇಂಡಿಯಾದ ಬಿಡುವಿಲ್ಲದ ಕ್ಯಾಲೆಂಡರ್

ಮುಂಬರುವ ಮೆಗಾ ಈವೆಂಟ್‌ಗೆ ಹಿರಿಯ ಆಟಗಾರರನ್ನು ಫಿಟ್ ಆಗಿ ಇಡುವ ಸಲುವಾಗಿ ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಶಮಿ ಅವರನ್ನು ಈ ಸರಣಿಯಿಂದ ಹೊರಗಿಡಬಹುದು ಎಂದು ತಿಳಿದುಬಂದಿದೆ. ಅಲ್ಲದೆ ಈ ಸರಣಿಯಿಂದ ಈ ಮೂವರನ್ನು ಹೊರಗಿಟ್ಟು ಆ ಬಳಿಕ ಜುಲೈನಲ್ಲಿ ನಡೆಯಲ್ಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಈ ಮೂವರನ್ನು ತಂಡಕ್ಕೆ ಆಯ್ಕೆ ಮಾಡುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಆ ಬಳಿಕ ಐರ್ಲೆಂಡ್‌ನಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ ತದನಂತರ ಏಷ್ಯಾಕಪ್ ಆರಂಭವಾಗಲಿದೆ. ಅಲ್ಲದೆ, ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ನಡುವೆ, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸರಣಿಯನ್ನು ಆಡಲಿದೆ.

IPL 2023: ಐಪಿಎಲ್ ಪ್ರಯಾಣ ಮುಗಿದಿದ್ದರೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆರ್​ಸಿಬಿ ನಾಯಕ

ಯುವ ಆಟಗಾರರಿಗೆ ಬಂಪರ್ ಅವಕಾಶ

ಇಷ್ಟೊಂದು ಬಿಡುವಿಲ್ಲದ ಕ್ಯಾಲೆಂಡರ್ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಉತ್ತಮ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ. ಈ ಮಟ್ಟಿಗೆ ಅಫ್ಘಾನ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ರೋಹಿತ್ ಅನುಪಸ್ಥಿತಿಯಲ್ಲಿ ಮುಂಬೈನಲ್ಲಿ ನಡೆದ ಏಕದಿನ ಪಂದ್ಯದ ಜವಾಬ್ದಾರಿಯನ್ನೂ ಪಾಂಡ್ಯ ವಹಿಸಿಕೊಂಡಿದ್ದರು. ಏತನ್ಮಧ್ಯೆ.. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮತ್ತು ತಿಲಕ್ ವರ್ಮಾ ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Fri, 26 May 23