ಈ ಬಾರಿಯ ಏಷ್ಯನ್ ಗೇಮ್ಸ್ಗೆ (Asian Games 2023) ಪುರುಷ ತಂಡದಂತೆ ಮಹಿಳಾ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಕ್ರೀಡಾಕೂಟದಲ್ಲಿ ಮಹಿಳೆಯರ ಟಿ20 ಕ್ರಿಕೆಟ್ ಸ್ಪರ್ಧೆಯು ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದ್ದು, ಇದಕ್ಕಾಗಿ ಭಾರತ ವನಿತಾ ಪಡೆಯನ್ನು ( (indian women cricket team) ) ಆಯ್ಕೆ ಮಾಡಿರುವ ಆಯ್ಕೆ ಮಂಡಳಿ, ತಂಡದ ನಾಯಕತ್ವವನ್ನು ಎಂದಿನಂತೆ ಹರ್ಮನ್‌ಪ್ರೀತ್ ಕೌರ್ಗೆ (Harmanpreet Kaur) ನೀಡಿದೆ. ಹಾಗೆಯೇ ಸ್ಮೃತಿ ಮಂಧಾನ (Smriti Mandhana) ಕೂಡ ಉಪನಾಯಕಿಯಾಗಿ ಮುಂದುವರೆಯಲಿದ್ದಾರೆ. ಇನ್ನು ತಂಡದಲ್ಲಿ ಹೆಚ್ಚು ಬದಲಾವಣೆಗೆ ಮುಂದಾಗದ ಬಿಸಿಸಿಐ, ಈ ಹಿಂದೆ ಬಾಂಗ್ಲಾ ಪ್ರವಾಸಕ್ಕೆ ಗೈರಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (Richa Ghosh) ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದೆ.
ರಿಚಾ ಘೋಷ್ ಹೊರತಾಗಿ, ಹಿರಿಯ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕೂಡ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಆದರೆ ಅನುಭವಿ ವೇಗಿ ಶಿಖಾ ಪಾಂಡೆಗೆ ಈ ಕ್ರೀಡಾಕೂಟದಿಂದಲೂ ಕೋಕ್ ನೀಡಲಾಗಿದೆ. ಹಾಗೆಯೇ ಮಹಿಳಾ ಪ್ರಿಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಬ್ಬರಿಸಿದ್ದ ಪಂಜಾಬ್ ಆಲ್‌ರೌಂಡರ್ ಕನಿಕಾ ಅಹುಜಾ ಅವರೊಂದಿಗೆ ಟಿಟಾಸ್ ಸಾಧು ಅವರಿಗೂ ಭಾರತ ತಂಡದಲ್ಲಿ ಮೊದಲ ಅವಕಾಶ ದೊರೆತಿದೆ. ಆದರೆ, ಅದ್ಭುತ ಪ್ರದರ್ಶನದ ಹೊರತಾಗಿಯೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತುತ ಬಾಂಗ್ಲಾದೇಶದ ಸರಣಿಗಾಗಿ ತಂಡದ ಭಾಗವಾಗಿರುವ ಹರ್ಲೀನ್ ಡಿಯೋಲ್ ಮತ್ತು ಪೂಜಾ ವಸ್ತ್ರಾಕರ್, ಇಶಾಕ್ ಜೊತೆಗೆ ಸ್ಟ್ಯಾಂಡ್‌ಬೈ ಆಟಗಾರ್ತಿಯರಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
Standby list of players: Harleen Deol, Kashvee Gautam, Sneh Rana, Saika Ishaque, Pooja Vastrakar https://t.co/s8Xsjkwgkc
— BCCI Women (@BCCIWomen) July 14, 2023
Asian Games 2023: ಏಷ್ಯನ್ ಗೇಮ್ಸ್ಗೆ ಭಾರತ ತಂಡ ಪ್ರಕಟ; ಧವನ್ಗಿಲ್ಲ ಸ್ಥಾನ! ಹೊಸಬನಿಗೆ ನಾಯಕತ್ವ
ಆಶ್ಚರ್ಯವೆಂದರೆ ಯಾಸ್ತಿಕಾ, ಹರ್ಲೀನ್ ಮತ್ತು ವಸ್ತ್ರಾಕರ್ ಮಾತ್ರವಲ್ಲ, ಮೋನಿಕಾ ಪಟೇಲ್, ಮೇಘನಾ ಸಿಂಗ್, ಎಸ್ ಮೇಘನಾ ಮತ್ತು ರಾಶಿ ಕನೋಜಿಯಾ ಸೇರಿದಂತೆ ಇನ್ನೂ ನಾಲ್ವರು ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದೆ. ಭಾರತೀಯ ಮಹಿಳಾ ತಂಡದ ಪರ ಆಡಿದ ಮೊದಲ ಕೇರಳ ಆಟಗಾರ್ತಿ ಮಿನ್ನು ಮಣಿ ಮತ್ತು ವಿಕೆಟ್‌ಕೀಪರ್ ಉಮಾ ಚೆಟ್ರಿ ತಮ್ಮ ಸ್ಥಾನ ಕಾಯ್ದುಕೊಂಡಿದ್ದಾರೆ. ಸ್ಟಾರ್ ವೇಗಿ ರೇಣುಕಾ ಸಿಂಗ್ ಠಾಕೂರ್ ತಂಡದಲ್ಲಿ ಆಯ್ಕೆಯಾಗದಿರುವುದು ಅಚ್ಚರಿಗೆ ಕಾರಣವಾಗಿದೆ.
ಏಷ್ಯನ್ ಗೇಮ್ಸ್ಗೆ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮಂಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್‌ವಾಡ್, ಮಿನ್ನು ಮಣಿ, ಕನಿಕಾ ಅಹುಜಾ (ವಿಕೆಟ್ ಕೀಪರ್), ಅನುಷಾ ಬಾರೆಡ್ಡಿ
ಸ್ಟ್ಯಾಂಡ್‌ಬೈ ಆಟಗಾರ್ತಿಯರು- ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಸ್ನೇಹ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:29 am, Sat, 15 July 23