IND vs WI 1st Test: 12 ವಿಕೆಟ್​ ಪಡೆದ ಅಶ್ವಿನ್; ಭಾರತಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್..!

IND vs WI 1st Test: ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಇನ್ನಿಂಗ್ಸ್‌ನಲ್ಲೂ 7 ವಿಕೆಟ್‌ ಪಡೆದು ಮಿಂಚಿದರು.

IND vs WI 1st Test: 12 ವಿಕೆಟ್​ ಪಡೆದ ಅಶ್ವಿನ್; ಭಾರತಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್..!
ಭಾರತ- ವೆಸ್ಟ್ ಇಂಡೀಸ್
Follow us
ಪೃಥ್ವಿಶಂಕರ
|

Updated on:Jul 15, 2023 | 5:41 AM

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಮೊದಲ ಟೆಸ್ಟ್ ನಿರೀಕ್ಷೆಯ ಪಲಿತಾಂಶದೊಂದಿಗೆ ಕೊನೆಗೊಂಡಿದೆ. ಕೇವಲ ಮೂರು ದಿನಗಳವರೆಗೆ ನಡೆದ ಈ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನಿರಾಯಾಸ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಡೊಮಿನಿಕಾ ಟೆಸ್ಟ್​ನ ಮೊದಲೆರಡು ದಿನಗಳಲ್ಲಿ ಪಂದ್ಯದ ಹಣೆಬರಹವನ್ನು ಬಹುತೇಕ ನಿರ್ಧರಿಸಿದ್ದ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ ಇನಿಂಗ್ಸ್ ಹಾಗೂ 141 ರನ್​ಗಳ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಎರಡನೇ ಇನ್ನಿಂಗ್ಸ್‌ನಲ್ಲೂ 7 ವಿಕೆಟ್‌ ಪಡೆದು ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿದರು. ಇದೀಗ ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್ (World Test Championship) ಮೂರನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಇತ್ತ ಮೊದಲ ಪಂದ್ಯದಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಬಾಚಿಕೊಂಡರು.

ಮೊದಲ ಇನಿಂಗ್ಸ್‌ನಲ್ಲಿ ಕೇವಲ 150 ರನ್​ಗಳಿಗೆ ಆಲೌಟ್ ಆಗಿದ್ದ ಆತಿಥೇಯ ವಿಂಡೀಸ್ ತಂಡ ಸುಮಾರು ಎರಡು ದಿನಗಳ ಕಾಲ ಭಾರತದ ವಿರುದ್ಧ ಬೌಲಿಂಗ್‌ ಮಾಡುವುದರಲ್ಲೇ ಕಾಲ ಕಳೆಯಬೇಕಾಯಿತು. ನಂತರ ವಿಂಡೀಸ್ ಪಡೆಯನ್ನು ಬಿಸಿಲಿನಲ್ಲಿ ಹೈರಾಣ ಮಾಡಿದ್ದ ಟೀಂ ಇಂಡಿಯಾ 421 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್‌ ಕೇವಲ 51 ಓವರ್‌ಗಳನಷ್ಟೇ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ಎರಡನೇ ದಿನದಾಟದ ಎರಡನೇ ಸೆಷನ್ ಅಂತ್ಯಕ್ಕೂ ಮುನ್ನ ಇನ್ನಿಂಗ್ಸ್ ಡಿಕ್ಲೇರಿ ಮಾಡಿಕೊಂಡಿದ್ದ ಭಾರತ, ಆ ಸೆಷನ್​ನಲ್ಲೆಯೇ ವಿಂಡೀಸ್ ಪಡೆಯ ಮೊದಲೆರಡು ವಿಕೆಟ್ ಉರುಳಿಸಿತ್ತು. ಆ ಬಳಿಕ ಆರಂಭವಾದ ಕೊನೆಯ ಸೆಷನ್​ನಲ್ಲಿ ಇನ್ನುಳಿದ 8 ವಿಕೆಟ್‌ಗಳನ್ನು ಕಬಳಿಸಿ ಮೂರನೇ ದಿನವೇ ಮೊದಲ ಟೆಸ್ಟ್ ಅಂತ್ಯಗೊಳಿಸಿತು.

Rohit Sharma Century: ಕೆರಿಬಿಯನ್ ನಾಡಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಹಿಟ್​ಮ್ಯಾನ್ ರೋಹಿತ್..!

ಮತ್ತೆ ವಿಫಲವಾದ ವಿಂಡೀಸ್ ಬ್ಯಾಟಿಂಗ್

ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 271 ರನ್‌ಗಳ ಮುನ್ನಡೆ ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಭಾರತದ ಗೆಲುವು ನಿಶ್ಚಯವಾಗಿತ್ತು. ಆದರೆ ವಿಂಡೀಸ್ ತಂಡ ಈ ಪಂದ್ಯವನ್ನು ಎಷ್ಟು ಸಮಯದವರೆಗೆ ಎಳೆಯಬಹುದು ಎಂದು ನೋಡಬೇಕಾಗಿತ್ತು. ಆದರೆ ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಪೆವಲಿಯನ್ ಪರೇಡ್ ಆರಂಭಿಸಿದ ವಿಂಡೀಸ್ ಆಟಗಾರರು ಟೀಂ ಇಂಡಿಯಾಕ್ಕೆ ತೊಂದರೆ ಕೊಡುವ ಗೋಜಿಗೆ ಹೋಗಲಿಲ್ಲ. ಎರಡನೇ ಸೆಷನ್​ನ ಅಂತ್ಯದ ವೇಳೆಗೆ ತಂಡವು ಕೇವಲ 27 ರನ್‌ಗಳಿಗೆ ನಾಯಕ ಕ್ರೇಗ್ ಬ್ರಾಥ್‌ವೈಟ್ ಮತ್ತು ತೇಜ್​ನಾರಾಯಣ್ ಚಂದ್ರಪಾಲ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಈ ವಿಕೆಟ್ ಪಡೆದರು.

ಮೂರನೇ ಸೆಷನ್ ಆರಂಭವಾದ ನಂತರವೂ ಅದೇ ಪರಿಸ್ಥಿತಿ ಮುಂದುವರಿದಿತ್ತು. ಇಬ್ಬರೂ ಸ್ಪಿನ್ನರ್‌ಗಳು ಶೀಘ್ರದಲ್ಲೇ ರಾಮನ್ ರೀಫರ್ ಮತ್ತು ಜೆರ್ಮೈನ್ ಬ್ಲಾಕ್‌ವುಡ್ ಅವರನ್ನು ಬಲಿಪಶುಗಳನ್ನಾಗಿ ಮಾಡಿದರು. ಅದೇ ವೇಳೆ ಮೊಹಮ್ಮದ್ ಸಿರಾಜ್ ಜೋಶುವಾ ಡಿ ಸಿಲ್ವಾ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಪರಿಸ್ಥಿತಿಯ ನಡುವೆಯೂ ಮೊದಲ ಪಂದ್ಯವನ್ನಾಡುತ್ತಿರುವ ಅಲಿಕ್ ಅಥೆನೆಜ್ 27 ರನ್​ಗಳ ಕಾಣಿಕೆ ನೀಡಿ ಅಶ್ವಿನ್​ಗೆ ಬಲಿಯಾದರು.

ಅಶ್ವಿನ್ ಮುಂದೆ ಶರಣಾಗತಿ

ಜೇಸನ್ ಹೋಲ್ಡರ್ (ಔಟಾಗದೆ 20) ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರುವ ಮೂಲಕ ಪಂದ್ಯವನ್ನು ನಾಲ್ಕನೇ ದಿನದವರೆಗೆ ಡ್ರ್ಯಾಗ್ ಮಾಡಲು ಪ್ರಯತ್ನಿಸಿದರು. ಆದರೆ ಆತಿಥೇಯರಿಗೆ ರವಿಚಂದ್ರನ್ ಅಶ್ವಿನ್ ಬೌಲಿಂಗ್​ ಮ್ಯಾಜಿಕ್ ಮುಂದೆ ಕ್ರೀಸ್​ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ಪಡೆದಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್​ನಲ್ಲೂ ಅದ್ಭುತ ಪ್ರದರ್ಶನ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಇನ್ನಿಂಗ್ಸ್‌ವೊಂದರಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು 34 ನೇ ಬಾರಿ ತೆಗೆದ ದಾಖಲೆಯನ್ನು ಅಶ್ವಿನ್ ಬರೆದರು. ಅಂತಿಮವಾಗಿ ಇಡೀ ವಿಂಡೀಸ್ ತಂಡ ಕೇವಲ 130 ರನ್‌ಗಳಿಗೆ ಆಲೌಟ್ ಆಯಿತು. ಅಶ್ವಿನ್ ಹೊರತಾಗಿ ಜಡೇಜಾ ಕೂಡ 2 ವಿಕೆಟ್ ಪಡೆದರು.

ಜೈಸ್ವಾಲ್ ಸ್ಮರಣೀಯ ಇನ್ನಿಂಗ್ಸ್

ಇನ್ನು ಭಾರತದ ಬ್ಯಾಟಿಂಗ್ ಬಗ್ಗೆ ಹೇಳಬೇಕೆಂದರೆ, 312 ರನ್​ಗಳಿಂ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಮತ್ತೆ ಮೈದಾನಕ್ಕೆ ಇಳಿದರು. ಇಬ್ಬರೂ ತಂಡದ ಸ್ಕೋರ್ ಅನ್ನು 350 ರನ್​ಗಳ ಗಡಿ ದಾಟಿಸಿದರು. ಈ ವೇಳೆ ಕೊಹ್ಲಿ 29ನೇ ಅರ್ಧಶತಕ ಪೂರೈಸಿ, ಜೈಸ್ವಾಲ್ ಜತೆ ಶತಕದ ಜೊತೆಯಾಟ ಹಂಚಿಕೊಂಡರು. ಜೈಸ್ವಾಲ್ (171) ಚೊಚ್ಚಲ ಟೆಸ್ಟ್‌ನಲ್ಲಿ 150 ರ ಗಡಿ ದಾಟುವಲ್ಲಿ ಯಶಸ್ವಿಯಾದರು. ಆದರೆ ಶಿಖರ್ ಧವನ್ ಅವರ 187 ರನ್‌ಗಳ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.

ಶತಕ ವಂಚಿತರಾದ ಕೊಹ್ಲಿ

ಇದಾದ ಬಳಿಕ ದಿನದ ಆರಂಭದಲ್ಲೇ ಜೀವದಾನ ಪಡೆದ ವಿರಾಟ್ ಕೊಹ್ಲಿ, ಊಟದ ವೇಳೆಗೆ 72 ರನ್ ಸಿಡಿಸಿದ್ದರಿಂದ ಎರಡನೇ ಸೆಷನ್​ನಲ್ಲೇ ಶತಕದ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಊಟದ ನಂತರ ಕೇವಲ 4 ರನ್ ಕಲೆಹಕಿದ ಕೊಹ್ಲಿ, ಒಟ್ಟು 76 ರನ್​ಗಳಿಗೆ ರಹಕೀಮ್ ಕಾರ್ನ್ವಾಲ್ಗೆ ಬಲಿಯಾದರು. ಬಳಿಕ ರವೀಂದ್ರ ಜಡೇಜಾ ಉತ್ತಮ ಹೊಡೆತಗಳನ್ನು ಆಡುವ ಮೂಲಕ ತಂಡವನ್ನು 400 ರನ್‌ಗಳ ಗಡಿ ದಾಟಿಸಿದರು. ಹೀಗಾಗಿ ಭಾರತ 5 ವಿಕೆಟ್‌ಗೆ 412 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 am, Sat, 15 July 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್