ಏಷ್ಯಾಕಪ್ 2023 ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಸೋಮವಾರ ನಡೆದ ಪಾಕಿಸ್ತಾನ ವಿರುದ್ಧದ ಮೀಸಲು ದಿನದ ಪಂದ್ಯದಲ್ಲಿ ಭಾರತ 228 ರನ್ಗಳ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಇಂದು ಮತ್ತೊಂದು ಮಹತ್ವದ ಪಂದ್ಯಕ್ಕೆ ರೋಹಿತ್ ಪಡೆ ಸಜ್ಜಾಗುತ್ತಿದೆ. ಸೂಪರ್-4ನ ನಾಲ್ಕನೇ ಪಂದ್ಯದಲ್ಲಿ ಇಂದು ಭಾರತ ತಂಡ ದಸನ್ ಶನುಕ ನಾಯಕತ್ವದ ಶ್ರೀಲಂಕಾವನ್ನು (India vs Sri Lanka) ಎದುರಿಸಲಿದೆ. ಇಂಡೋ-ಪಾಕ್ ಪಂದ್ಯ ನಡೆದ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲೇ ಈ ಪಂದ್ಯ ಕೂಡ ನಡೆಯಲಿದೆ.
ಟೀಮ್ ಇಂಡಿಯಾ ಬೊಂಬಾಟ್ ಫಾರ್ಮ್ನಲ್ಲಿದೆ. ಬ್ಯಾಟಿಂಗ್ – ಬೌಲಿಂಗ್ನಲ್ಲಿ ಆಟಗಾರರು ಮಿಂಚುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯವೇ ಸಾಕ್ಷಿ. ಓಪನರ್ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದ್ದರು. ವಿರಾಟ್ ಕೊಹ್ಲಿ ಹಾಗೂ ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದ್ದರು. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್-ಅಪ್ ಬಲಿಷ್ಠವಾಗಿದೆ.
BREAKING: ಸೆ. 17 ರಂದು ನಡೆಯಲ್ಲಿರುವ ಏಷ್ಯಾಕಪ್ ಫೈನಲ್ ಪಂದ್ಯ ಕೊಲಂಬೊದಿಂದ ಸ್ಥಳಾಂತರ..!
ಬೌಲಿಂಗ್ನಲ್ಲಿ ಜಸ್ಪ್ರಿತ್ ಬುಮ್ರಾ ಮಾರಕವಾಗಿ ಗೋಚರಿಸಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಎದುರಾಳಿಗೆ ಕಂಟಕವಾಗಿದ್ದಾರೆ. ಶಾರ್ದೂಲ್ ಥಾಕೂರ್ ಸಾಥ್ ನೀಡಬೇಕಷ್ಟೆ. ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಉತ್ತಮ ಲಯದಲ್ಲಿದ್ದಾರೆ. ಇಂದಿನ ಪಂದ್ಯಕ್ಕೆ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಅನುಮಾನ. ಪಾಕ್ ವಿರುದ್ಧ ಗೆದ್ದ ತಂಡದ ಆಟಗಾರರೇ ಕಣಕ್ಕಿಳಿಯಲಿದ್ದಾರೆ.
ಶ್ರೀಲಂಕಾ ತಂಡ ಕೂಡ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಪಾತುಮ್ ನಿಸ್ಸಾನಕ, ಕುಸಲ್ ಮೆಂಡಿಸ್ ಉತ್ತಮ ಲಯದಲ್ಲಿದ್ದಾರೆ. ಸದೀರ ಸಮರವಿಕ್ರಮ ಅವರು ಬಾಂಗ್ಲಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೇವಲ 72 ಎಸೆತಗಳಲ್ಲಿ 93 ರನ್ ಸಿಡಿಸಿ ಮಿಂಚಿದ್ದರು. ಆದರೆ, ನಾಯಕ ದಸುನ್ ಶನಕ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಟ ಬರಲಿಲ್ಲ. ಶ್ರೀಲಂಕಾ ಬೌಲಿಂಗ್ ವಿಭಾಗ ಮಾರಕವಾಗಿದೆ. ಮಹೇಶ್ ತೀಕ್ಷಣ ಮತ್ತು ಮಥೀಶ ಪತಿರಣ ಪ್ರತಿ ಪಂದ್ಯದಲ್ಲಿ ವಿಕೆಟ್ ಕೀಳುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಸದ್ದು ಮಾಡದ ಶನಕ ಬೌಲಿಂಗ್ನಲ್ಲಿ ಮಿಂಚಿದ್ದಾರೆ. ಹೀಗಾಗಿ ಭಾರತ ಲಂಕಾವನ್ನು ಕಡೆಗಣಿಸುವಂತಿಲ್ಲ.
ಭಾರತ-ಲಂಕಾ ಪಂದ್ಯ ನಡೆಯಲಿರುವ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಮತ್ತೊಂದೆಡೆ, ವೇಗದ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಯಶಸ್ಸು ಸಾಧಿಸುತ್ತಾರೆ. ಪಂದ್ಯದ ಮಧ್ಯದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಹೆಚ್ಚು ಸಹಾಯ ಮಾಡಲಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ, ತನ್ನ ಕೊನೆಯ 9 ಪಂದ್ಯಗಳಲ್ಲಿ 8 ಅನ್ನು ಗೆದ್ದಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾನಕ, ದಿಮುತ್ ಕರುಣಾರತ್ನ, ಕುಸಲ್ ಜನಿತ್ ಪೆರೇರಾ, ಕುಸಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಮತೀಶ ಪತಿರಣ, ಬಿ ಕಸುನ್ ರಜಿತ, ಬಿ. ಫೆರ್ನಾಂಡೋ, ಪ್ರಮೋದ್ ಮದುಶನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ