ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಮ್ ಇಂಡಿಯಾ ಇಂದು ಭಾನುವಾರ ನ್ಯೂಜಿಲೆಂಡ್ (India vs New Zealand) ವಿರುದ್ಧ ಕೋಲ್ಕತ್ತಾದ ಇತಿಹಾಸ ಪ್ರಸಿದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೂರನೇ ಹಾಗೂ ಅಂತಿಮ ಟಿ20 (3rd T20I) ಪಂದ್ಯವನ್ನು ಆಡಲಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತಕ್ಕೆ (Team India) ಇದೊಂದು ಔಪಚಾರಿಕ ಪಂದ್ಯವಾದರು ಗೆದ್ದು ಸರಣಿ ಕ್ಲೀನ್ ಸ್ವಿಪ್ ಮಾಡುವತ್ತ ಚಿತ್ತ ನೆಟ್ಟಿದೆ. ಅಲ್ಲದೆ ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಇದು ಚೊಚ್ಚಲ ಸರಣಿ ಆಗಿದೆ. ಇತ್ತ ರಾಹುಲ್ ದ್ರಾವಿಡ್ಗೆ (Rahul Dravid) ಕೂಡ ಕೋಚ್ ಆಗಿ ಮೊದಲ ಸರಣಿ. ಹೀಗಾಗಿ ವೈಟ್ವಾಶ್ ಮಾಡಿ ವಿಶೇಷ ಸಾಧನೆ ಮಾಡುವ ಪ್ಲಾನ್ನಲ್ಲಿದೆ. ಇತ್ತ ನ್ಯೂಜಿಲೆಂಡ್ ಕನಿಷ್ಠ ಅಂತಿಮ ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಯೋಜನೆ ಮಾಡಿಕೊಂಡಿದೆ.
ಟೀಮ್ ಇಂಡಿಯಾದ ಪ್ರಮುಖ ಬಲವೇ ಓಪನರ್ಗಳು. ನಾಯಕ ರೋಹಿತ್ ಶರ್ಮಾ ಮತ್ತು ಉಪ ನಾಯಕ ಕೆಎಲ್ ರಾಹುಲ್ ತಂಡಕ್ಕೆ ಬೊಂಬಾಟ್ ಆರಂಭ ಒದಗಿಸಿ ಅರ್ಧ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಆದರೆ, ಈಗಾಗಲೇ ಟಿ20 ಸರಣಿಯನ್ನ ತನ್ನ ವಶಕ್ಕೆ ತೆಗೆದುಕೊಂಡಿರುವ ಭಾರತವು ತನ್ನ ಬೆಂಚ್ ಸ್ಟ್ರೆಂಥ್ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೆಎಲ್ ರಾಹುಲ್, ರಿಷಭ್ ಪಂತ್, ಆರ್. ಅಶ್ವಿನ್ ಸೇರಿದಂತೆ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯಬಹುದು. ರುತುರಾಜ್ ಗಾಯಕ್ವಾಡ್, ಅವೇಶ್ ಖಾನ್‌ರಂತಹ ಯುವ ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಬಹುದು.
ಭಾರತದ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡಿದ್ದರು. ಹೀಗಾಗಿ ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಯುಜ್ವೇಂದ್ರ ಚಹಾಲ್ ಪ್ಲೇಯಿಂಗ್ ಎಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ಮಹತ್ವದ ಬದಲಾವಣೆಯೊಂದಿಗೆ ಭಾರತ ಇಂದು ಕಣಕ್ಕಿಳಿಯಲಿದ್ದು ಮತ್ತೊಂದು ಅಗ್ನಿ ಪರೀಕ್ಷೆ ನಡೆಸಲಿದೆ.
ಇತ್ತ ನ್ಯೂಜಿಲೆಂಡ್ ತಂಡಕ್ಕೆ ಅನುಭವಿಗಳ ಕೊರತೆ ಎದ್ದು ಕಾಣುತ್ತಿದೆ. ಟಿಮ್ ಸೌಧೀ ನಾಯಕತ್ವ ಅಷ್ಟೊಂದು ಚೆನ್ನಾಗಿ ಕೆಲಸ ಮಾಡುತ್ತಿಲ್ಲ. ಬ್ಯಾಟಿಂಗ್ನಲ್ಲಿ ಮಾರ್ಟಿನ್ ಗಪ್ಟಿಲ್ ಮಾತ್ರ ಆಸರೆಯಾಗುತ್ತಿದ್ದಾರೆ. ಬೌಲರ್ಗಳು ದುಬಾರಿಯಾಗುತ್ತಿದ್ದಾರೆ. ಅಲ್ಲದೆ ತಂಡದಲ್ಲಿರುವ ಬಹುತೇಕ ಆಟಗಾರರು ಸತತ ಕ್ರಿಕೆಟ್ ಆಡಿ ಬಳಲಿದ್ದಾರೆ. ಹೀಗಾಗಿ ಕಿವೀಸ್ ಪಡೆಯನ್ನೂ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗಿದೆ.
ಕೋಲ್ಕತ್ತಾದ ಇತಿಹಾಸ ಪ್ರಸಿದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರಿವರ್ಸ್ ಸ್ವಿಂಗ್ ಪ್ರಯೋಗಿಸುವ ಬೌಲರ್‌ಗಳಿಗೆ ಹೆಚ್ಚು ಪ್ರಯೋಜನ ನೀಡುವಂತಹ ಪಿಚ್. ಹೀಗಾಗಿ ಇನಿಂಗ್ಸ್ ಕೊನೆಯ ಹಂತದ ಓವರ್‌ಗಳಲ್ಲಿ ರನ್ ಗಳಿಸುವುದು ಬ್ಯಾಟರ್‌ಗಳಿಗೆ ಹೆಚ್ಚು ಸವಾಲಿನದ್ದಾಗಬಹುದು. ಮುಸ್ಸಂಜೆಯಿಂದ ಸುರಿಯುವ ಇಬ್ಬನಿ ಕೂಡ ಮಹತ್ವದ ಅಂಶವಾಗಲಿದೆ. ಆದ್ದರಿಂದ ಟಾಸ್ ಗೆದ್ದ ನಾಯಕ ತೆಗೆದುಕೊಳ್ಳುವ ನಿರ್ಣಯವೂ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತ.
AB de Villiers: ಎಬಿಡಿ ನಿವೃತ್ತಿ ಘೋಷಿಸಲು ಇದುವೇ ಅಸಲಿ ಕಾರಣ
(Team India will look to go for the clean sweep and close out the series against New Zealand)