
ಖ್ಯಾತ ಕ್ರೀಡಾಪಟುಗಳು ತಮ್ಮ ಅದ್ಭುತ ಆಟದಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾರೆ. ಆ ಸಂಪಾದನೆಯಿಂದ ಐಷರಾಮಿ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಕೆಲವರು ತಾವು ಸಂಪಾದಿಸಿದ ಹಣವನ್ನು ಐಷರಾಮಿ ಬಂಗಲೆ ಖರೀದಿಗೆ ಅಥವಾ ದುಬಾರಿ ಬೆಲೆಯ ಕಾರು ಖರೀದಿಗೆ ಮೀಸಲಿಡುತ್ತಾರೆ. ಇನ್ನು ಕೆಲವರು ಬೇರೆ ಬೇರೆ ಕ್ಷೇತ್ರದಲ್ಲಿ ಹಣ ತೊಡಗಿಸಿ ಮತ್ತಷ್ಟು ಗಳಿಸುತ್ತಾರೆ. ಇನ್ನೂ ಕೆಲವರು ತಮ್ಮ ಪ್ರಯಾಣಕ್ಕಾಗಿ ಖಾಸಗಿ ಜೆಟ್ ಖರೀದಿಗೆ ಮುಂದಾಗುತ್ತಾರೆ. ಅಂತಹವರಲ್ಲಿ ಕೆಲವರು ನಮ್ಮ ಟೀಂ ಇಂಡಿಯಾ ಕ್ರಿಕೆಟಿಗರು ಇದ್ದಾರೆ. ಅವರುಗಳು ಯಾರೆಂಬುದರ ಪಟ್ಟಿ ಇಲ್ಲಿದೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ನಟಿ ಪತ್ನಿ ಅನುಷ್ಕಾ ಶರ್ಮಾ ಅವರು ಖಾಸಗಿ ಜೆಟ್‌ನಿಂದ ಇಳಿಯುತ್ತಿರುವ ಚಿತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಕೊಹ್ಲಿ ಮತ್ತು ಅನುಷ್ಕಾ ಬಳಸಿದ ಖಾಸಗಿ ಜೆಟ್ ಸುಮಾರು 125 ಕೋಟಿ ರೂ. ಬೆಲೆ ಬಾಳುವಂತಹದ್ದಾಗಿದ್ದು, ವಿರಾಟ್ ಮತ್ತು ಅನುಷ್ಕಾ ಪ್ರವಾಸದ ಸಮಯದಲ್ಲಿ ಪ್ರಯಾಣಿಸಲು ಸೆಸ್ನಾ 680 ಸಿಟೇಶನ್ ಸಾವರಿನ್ ಜೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.



Published On - 6:04 pm, Sat, 9 July 22