ವಿಶ್ವ ಕ್ರಿಕೆಟ್‌ನಲ್ಲಿ ಈತನಿಗಿಂತ ಉತ್ತಮ ಸ್ಪಿನ್ನರ್ ಇಲ್ಲ: ಮಾಜಿ ಆರ್ಸಿಬಿ ಸ್ಪಿನ್ನರ್ಗೆ ಹೊಗಳಿಕೆಯ ಮಹಾಪೂರ
Yuzvendra Chahal: ಇಂಗ್ಲೆಂಡ್‌ನ ಮಾಜಿ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್, ಯುಜ್ವೇಂದ್ರ ಚಹಲ್ ಅವರನ್ನು "ಪ್ರಸ್ತುತ ವಿಶ್ವದ ಅತ್ಯುತ್ತಮ ಸ್ಪಿನ್ನರ್" ಎಂದು ಹಾಡಿ ಹೊಗಳಿದ್ದಾರೆ. ಅದರಲ್ಲೂ ವಿಶೇಷವಾಗಿ T20 ಸ್ವರೂಪದಲ್ಲಿ ಚಹಲ್ರನ್ನು ಮೀರಿಸುವವರಿಲ್ಲ ಎಂದಿದ್ದಾರೆ.
ಇಂಗ್ಲೆಂಡ್‌ನ ಮಾಜಿ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್, ಯುಜ್ವೇಂದ್ರ ಚಹಲ್ (Yuzvendra Chahal) ಅವರನ್ನು “ಪ್ರಸ್ತುತ ವಿಶ್ವದ ಅತ್ಯುತ್ತಮ ಸ್ಪಿನ್ನರ್” ಎಂದು ಹಾಡಿ ಹೊಗಳಿದ್ದಾರೆ. ಅದರಲ್ಲೂ ವಿಶೇಷವಾಗಿ T20 ಸ್ವರೂಪದಲ್ಲಿ ಚಹಲ್ರನ್ನು ಮೀರಿಸುವವರಿಲ್ಲ ಎಂದಿದ್ದಾರೆ. ಜುಲೈ 7 ರಂದು ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಚಹಲ್ 4 ಓವರ್‌ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಅವರ ಅಮೋಘ ಬೌಲಿಂಗ್‌ನಿಂದ ಭಾರತ 50 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಯುಜ್ವೇಂದ್ರ ಚಹಲ್ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂದು ಸೋನಿ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಗ್ರೇಮ್ ಸ್ವಾನ್ (Graeme Swann) ಹೇಳಿದ್ದಾರೆ. ಚಹಲ್ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಈ ಟಿ20 ಫಾಮ್ರ್ಯಾಟ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಎಲ್ಲಾ ಸ್ಪಿನ್ನರ್‌ಗಳ ವಿರುದ್ಧ ಸಾಕಷ್ಟು ರನ್ ಗಳಿಸಿದ್ದನ್ನು ಸಹ ನೀವು ನೋಡಿದ್ದೀರಿ. ಆದರೆ ಚಹಲ್ ಉತ್ತಮ ಬೌಲಿಂಗ್ ಮಾಡಿದ್ದರಿಂದ ಅವರಿಗೆ ಹೆಚ್ಚು ರನ್ ಗಳಿಸಲಾಗಲಿಲ್ಲ ಎಂದಿದ್ದಾರೆ.
ಐಪಿಎಲ್‌ನಲ್ಲಿಯೂ ಸಹ ಅವರು ತಮ್ಮ ಬೌಲಿಂಗ್‌ನಿಂದ ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿರುವುದನ್ನು ನೀವು ನೋಡಬಹುದು ಎಂದು ಗ್ರೇಮ್ ಸ್ವಾನ್ ಹೇಳಿದರು. ಅವರ ಬೌಲಿಂಗ್ ಮೊದಲಿಗಿಂತ ಉತ್ತಮವಾಗಿದೆ ಎಂಬುದನ್ನು ನಾನೇ ನೋಡಿದ್ದೇನೆ. ಅವರು ತಮ್ಮ ಬೌಲಿಂಗ್ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ. ಹೀಗಾಗಿ ಚಹಲ್ ಉತ್ತಮವಾಗಿ ಬೌಲಿಂಗ್ ಮಾಡಿದಾಗ ನಾನು ಎಂದಿಗೂ ಆಶ್ಚರ್ಯಪಡುವುದಿಲ್ಲ ಎಂದು ಗ್ರೇಮ್ ಸ್ವಾನ್ ಹೇಳಿದರು. ಸೌತಾಂಪ್ಟನ್‌ನ ಮೈದಾನವು ದೊಡ್ಡದಾಗಿದ್ದು, ಇಲ್ಲಿಯೂ ತಮ್ಮ ಬೌಲಿಂಗ್ ಎಷ್ಟು ಸ್ಥಿರವಾಗಿದೆ ಎಂಬುದನ್ನು ಚಹಲ್ ತೋರಿಸಿದರು ಎಂದಿದ್ದಾರೆ.
ಯುಜ್ವೇಂದ್ರ ಚಹಲ್ ಸ್ಟಂಪ್‌ನಲ್ಲಿ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ: ಅಜಿತ್ ಅಗರ್ಕರ್
ಅಜಿತ್ ಅಗರ್ಕರ್ ಕೂಡ ಯುಜ್ವೇಂದ್ರ ಚಹಲ್ ಅವರನ್ನು ಹೊಗಳಿದ್ದಾರೆ. ಚಹಲ್ ತಮ್ಮ ಬೌಲಿಂಗ್ನಲ್ಲಿ ಆತ್ಮವಿಶ್ವಾಸವನ್ನು ಗಳಿಸಿದ್ದರಿಂದ ಸ್ಟಂಪ್ ಟು ಸ್ಟಂಪ್ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು. ಜೊತೆಗೆ ಚಹಲ್ ಈ ನಡುವೆ ಸ್ಲೋ ಬಾಲ್ ಅನ್ನು ಹೆಚ್ಚು ಬಳಸಲು ಆರಂಭಿಸಿದ್ದಾರೆ. ಈ ಹಿಂದೆ ಈ ಎಸೆತಗಳಿಗೆ ಬ್ಯಾಟ್ಸ್‌ಮನ್‌ಗಳು ಮುಂದೆ ಹೋಗಿ ಬೌಂಡರಿ ಹೊಡೆಯುತ್ತಿದ್ದರು. ಆದರೆ ಈಗ ಚಹಲ್ ಸ್ಟಂಪ್ ಟು ಸ್ಟಂಪ್ ಬೌಲಿಂಗ್ ಮಾಡಲು ಪ್ರಾರಂಭಿಸಿದ್ರರಿಂದ ಬ್ಯಾಟರ್ಗಳಿಗೆ ರನ್ ಗಳಿಸಲು ಕಷ್ಟಕರವಾಗುತ್ತಿದೆ ಎಂದಿದ್ದಾರೆ.
ಆದರೆ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಎರಡು T20 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ ತುಂಬಾ ನಿರಾಶಾದಾಯಕವಾಗಿ ಬೌಲಿಂಗ್ ಮಾಡಿದರು. ಆದರೆ, ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಯುವ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕಳೆದ ಕೆಲವು ಸಮಯದಿಂದ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಮುಂಬರುವ T20 ವಿಶ್ವಕಪ್ 2022 ಪಂದ್ಯಾವಳಿಯಲ್ಲಿ ಚಹಲ್ ಭಾರತ ತಂಡದ ಪ್ರಮುಖ ಬೌಲರ್ ಆಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.