Ravindra Jadeja: ಸಿಎಸ್ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ ಜಡೇಜಾ
Ravindra Jadeja: ಭಾರತದ ಸ್ಟಾರ್ ಆಲ್ರೌಂಡರ್ 2021 ಮತ್ತು 2022 ರಲ್ಲಿ ಸಿಎಸ್‌ಕೆ ತಂಡಕ್ಕೆ ಸಂಬಂಧಿತ ಎಲ್ಲಾ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.
ಈ ವರ್ಷದ ಐಪಿಎಲ್ ಆರಂಭಕ್ಕೂ ಮುನ್ನ ರವೀಂದ್ರ ಜಡೇಜಾ (Ravindra Jadeja) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ IPL-2022 ರ ಮಧ್ಯದಲ್ಲಿ ಗಾಯಗೊಂಡ ಕಾರಣ ಜಡೇಜಾ IPL ನಿಂದ ಹೊರಬಿದ್ದರು. ಜೊತೆಗೆ ಜಡೇಜಾ ಹಳದಿ ಬ್ರಿಗೇಡ್‌ನ ನಾಯಕತ್ವವನ್ನು ತ್ಯಜಿಸಿದರು. ಆಗ ಜಡ್ಡು ಗಾಯದ ಹೆಸರಲ್ಲಿ ಸಿಎಸ್‌ಕೆ ಮ್ಯಾನೇಜ್ಮೆಂಟ್ ಜತೆಗಿನ ಅಂತರವನ್ನು ಮುಚ್ಚಿಕೊಳ್ಳುವ ಯತ್ನ ನಡೆದಿದೆಯೇ ಎಂಬ ಪ್ರಶ್ನೆ ಎದ್ದಿತ್ತು. ಇದ್ದಕ್ಕಿದ್ದಂತೆ ಈ ಪ್ರಶ್ನೆ ಈಗ ಹೆಚ್ಚು ತೀವ್ರವಾಗಿದೆ. ಯಾಕೆಂದರೆ, ಭಾರತದ ಸ್ಟಾರ್ ಆಲ್ರೌಂಡರ್ 2021 ಮತ್ತು 2022 ರಲ್ಲಿ ಸಿಎಸ್‌ಕೆ ತಂಡಕ್ಕೆ ಸಂಬಂಧಿತ ಎಲ್ಲಾ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ. ಇದರ ಪರಿಣಾಮವಾಗಿ, ಜಡೇಜಾ ಚೆನ್ನೈನೊಂದಿಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬುದು ಗೋಚರಿಸುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಜಡೇಜಾ ಉತ್ತಮ ಬಾಂಧವ್ಯ ಹೊಂದಿದ್ದರು. 10 ವರ್ಷಗಳ ಕಾಲ ತಂಡದೊಂದಿಗೆ ಕಳೆದ ಕ್ಷಣಗಳನ್ನು ಜಡೇಜಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಆದರೆ ಐಪಿಎಲ್ -15 ರ ಅಂತ್ಯದ ವೇಳೆಗೆ, ಸಿಎಸ್‌ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಜಡೇಜಾ ಅವರನ್ನು ಅನ್‌ಫಾಲೋ ಮಾಡಿತ್ತು. ಆದರೆ, ತಂಡದ ಸಿಇಒ ಕಾಶಿ ಬಿಶ್ವನಾಥನ್ ಅವರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆದರೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಚೆನ್ನೈ ತಂಡದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರು ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಜಡೇಜಾಗೆ ಗಾಯವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ, ಅದೇ ಸಮಯದಲ್ಲಿ, ಟೀಮ್ ಮ್ಯಾನೇಜ್ಮೆಂಟ್ ಮತ್ತು ಜಡೇಜಾ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು ನಿಜ. ಜಡೇಜಾ ನಾಯಕನಾಗಿ ವಿಫಲವಾದಾಗಿನಿಂದ ಮ್ಯಾನೆಜ್ಮೆಂಟ್ ಜೊತೆಗಿನ ಅವರ ಸಂಬಂಧ ಹದಗೆಡಲು ಪ್ರಾರಂಬಿಸಿತು ಎಂದಿದ್ದಾರೆ.
Ravindra Jadeja has removed all his CSK posts from 2021 and 2022 ?.
We cskins missing @imjadeja soon for sure??
— Vamshi (@Vamshii9999) July 8, 2022
Ravindra Jadeja has removed all #CSK posts from his Instagram handle. What’s been up with this franchise? ?
— Srinjoy Sanyal (@srinjoysanyal07) July 8, 2022
IPL ನಲ್ಲಿ ಗಾಯಗೊಂಡ ನಂತರ, ವಿಶ್ರಾಂತಿ ಪಡೆದು ಗಾಯದಿಂದ ಚೇತರಿಸಿಕೊಂಡಿದ್ದ ಜಡೇಜಾ ಎಡ್ಜ್‌ಬಾಸ್ಟನ್ ಟೆಸ್ಟ್ ಮೂಲಕ ಮತ್ತೆ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಆದರೆ ಭಾರತ ಈ ಟೆಸ್ಟ್‌ನಲ್ಲಿ ಸೋತರೂ ಜಡೇಜಾ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಆದರೆ ಎಡ್ಜ್‌ಬಾಸ್ಟನ್ ಟೆಸ್ಟ್ ನಂತರ, ಇಂಗ್ಲೆಂಡ್ ವಿರುದ್ಧದ ಮೊದಲ T20 ಪಂದ್ಯಕ್ಕಾಗಿ ಜಡೇಜಾಗೆ ವಿಶ್ರಾಂತಿ ನೀಡಲಾಯಿತು. ಆದರೆ ಶನಿವಾರ ರಾತ್ರಿ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲ್ಲಿರುವ ಎರಡನೇ ಟಿ20 ಪಂದ್ಯದಲ್ಲಿ ಜಡೇಜಾ ಅಖಾಡಕ್ಕಿಳಿಯುವುದು ಖಚಿತವಾಗಿದೆ.
Published On - 9:52 pm, Fri, 8 July 22