AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs IND: ಇಂದು ದ್ವಿತೀಯ ಟಿ20: ಕಿಂಗ್ ಕೊಹ್ಲಿಗೆ ಜಾಗ ಕೊಡುವವರು ಯಾರು? ಪಂತ್, ಜಡ್ಡು ಕೂಡ ಕಮ್​ಬ್ಯಾಕ್

India vs England: ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ.

ENG vs IND: ಇಂದು ದ್ವಿತೀಯ ಟಿ20: ಕಿಂಗ್ ಕೊಹ್ಲಿಗೆ ಜಾಗ ಕೊಡುವವರು ಯಾರು? ಪಂತ್, ಜಡ್ಡು ಕೂಡ ಕಮ್​ಬ್ಯಾಕ್
ENG vs IND 2nd T20I
TV9 Web
| Updated By: Vinay Bhat|

Updated on:Jul 09, 2022 | 7:35 AM

Share

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 50 ರನ್​ಗಳ ಅಮೋಘ ಗೆಲುವು ಕಂಡಿದ್ದ ಭಾರತ (India vs England) ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು (ಜು. 9) ಬರ್ಮಿಂಗ್​ಹ್ಯಾಮ್​ನ ಎಜ್‌ಬಾಸ್ಟನ್‌ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದ್ದು ಟೀಮ್ ಇಂಡಿಯಾ (Team India) ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಆಂಗ್ಲರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ ಇಂದಿನ ಮ್ಯಾಚ್​ಗೆ ಮುಖ್ಯ ಬದಲಾವಣೆ ಆಗುವುದು ಖಚಿತ. ಆದರೆ, ಯಾರು ಯಾರ ಸ್ಥಾನವನ್ನು ಆಕ್ರಮಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಕಳೆದ ಐದು ತಿಂಗಳ ಅವಧಿಯಲ್ಲಿ ಕೊಹ್ಲಿ ಐಪಿಎಲ್ ಬಿಟ್ಟರೆ ಇತರೆ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ. ಹೀಗಾಗಿ ಕೊಹ್ಲಿ ಜಾಗದಲ್ಲಿ ದೀಪಕ್ ಹೂಡ ಕಣಕ್ಕಿಳಿದಿದ್ದರು. ಹೂಡ ಪ್ರತಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೀನ ಕೊಹ್ಲಿ ಬಂದ ಕಾರಣ ಅನಿವಾರ್ಯವಾಗಿ ಹೂಡ ಹಿಂದೆ ಸರಿಯಬೇಕಿದೆ. ಅಲ್ಲದೆ ಇಂಗ್ಲೆಂಡ್‌ ವಿರುದ್ಧ ಈ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳು ವಿರಾಟ್‌ ಕೊಹ್ಲಿಗೆ ನಿರ್ಣಾಯಕವಾಗಿದೆ. ಒಂದು ವೇಳೆ ವೈಫಲ್ಯ ಅನುಭವಿಸಿದರೆ, ಅವರ ಸ್ಥಾನಕ್ಕೆ ಕಂಟಕ ಎದುರಾಗಹುದು. ಏಕೆಂದರೆ ದೀಪಕ್‌ ಹೂಡ ಅವರಂಥ ಯುವ ಆಟಗಾರರು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಏಷ್ಯಾಕಪ್‌ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ
Image
IND vs ENG: 5 ತಿಂಗಳ ನಂತರ ಶಾರ್ಟ್ ಫಾರ್ಮ್ಯಾಟ್‌ಗೆ ಕೊಹ್ಲಿ ರೀ ಎಂಟ್ರಿ; ವಿಫಲವಾದರೆ ಸ್ಥಾನಕ್ಕೆ ಕುತ್ತು!
Image
IND vs ENG: ಯುವರಾಜ್ ದಾಖಲೆ ಮುರಿದ ಹಾರ್ದಿಕ್; ಮೊದಲ ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಆಲ್ ರೌಂಡರ್
Image
IND VS ENG 2nd T20 Match Live Streaming: 2ನೇ ಟಿ20 ಪಂದ್ಯಕ್ಕೆ ಸಮಯ ಬದಲಾವಣೆ; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
Image
ಹಬ್ಬಕ್ಕೆಂದು ಪಾಕ್ ಕ್ರಿಕೆಟಿಗ ತಂದಿದ್ದ ದುಬಾರಿ ಮೇಕೆಯನ್ನೇ ಕದ್ದ ಭೂಪರು! ಲಾಹೋರ್ ನಿವಾಸದಿಂದ ಕಳವು

ರವೀಂದ್ರ ಜಡೇಜಾ ಕಮ್​ಬ್ಯಾಕ್ ಮಾಡಿರುವ ಕಾರಣ ಅಕ್ಷರ್ ಪಟೇಲ್ ಹೊರಗುಳಿಯುವುದು ಖಚಿತ. ಅಂತೆಯೆ ಇಂಗ್ಲೆಂಡ್‌ ವಿರುದ್ಧ ಐದನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದ ರಿಷಭ್‌ ಪಂತ್‌ ಪ್ಲೇಯಿಂಗ್‌ ಇಲೆವೆನ್‌ಗೆ ಮರಳಲಿದ್ದು, ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದಿನೇಶ್‌ ಕಾರ್ತಿಕ್‌ ಎರಡನೇ ಪಂದ್ಯದಲ್ಲಿ ಬೆಂಚ್‌ ಕಾಯುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಕೂಡ ಆಡುವ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ಇತ್ತ ಇಂಗ್ಲೆಂಡ್ ತಂಡ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಇರುವುದರಿಂದ ಮಾಸ್ಟರ್ ಪ್ಲಾನ್​​ನೊಂದಿಗೆ ಕಣಕ್ಕಿಳಿಯುವುದು ಖಚಿತ. ತಂಡದಲ್ಲಿ ಬದಲಾವಣೆ ಅನುಮಾನ. ನೂತನ ನಾಯಕ ಜೋಸ್ ಬಟ್ಲರ್ ಮೇಲೆ ನಿರೀಕ್ಷೆಗಳಿದ್ದು ಫಾರ್ಮ್​​ಗೆ ಮರಳಬೇಕಿದೆ. ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಬಟ್ಲರ್ ಇಂದು ಯಾವರೀತಿ ತಿರುಗಿ ಬೀಳುತ್ತಾರೆ ಎಂದು ನೋಡಬೇಕಿದೆ. ಮೊಯಿನ್ ಆಲಿ ಆಲ್ರೌಂಡ್ ಆಟ ತಂಡಕ್ಕೆ ನೆರವಾಗುತ್ತಿದೆ. ಹ್ಯಾರಿಬ್ರೋಕ್ ಕೂಡ ರನ್ ಗಳಿಸುತ್ತಿದ್ದಾರೆ. ಆದರೆ, ಇತರೆ ಬ್ಯಾಟರ್​​ಗಳು ಸಾಥ್ ನೀಡಬೇಕಷ್ಟೆ. ಲಿವಿಂಗ್ ಸ್ಟೋನ್ ಕೂಡ ಅಪಾಯಕಾರಿ ಬ್ಯಾಟರ್.

ಬರ್ಮಿಂಗ್​ಹ್ಯಾಮ್​ನ ಎಜ್‌ಬಾಸ್ಟನ್‌ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಾಗಿ ಸಹಕರಿಸಲಿದ್ದು, ಬೌಲರ್‌ಗಳಿಗೆ ತಲೆನೋವಾಗಲಿದೆ. ಕ್ರೀಡಾಂಗಣದ ಸ್ಟ್ರೈಟ್ ಮತ್ತು ಸೈಡ್ ಬೌಂಡರಿಗಳು 59-60 ಮೀಟರ್ ಉದ್ದದಷ್ಟು ಇರಲಿದ್ದು, ಸ್ಕ್ವೇರ್ ಬೌಂಡರಿ 50 ಮೀಟರ್‌ಗಿಂತ ಕಡಿಮೆ ಇದೆ ಹಾಗೂ ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಅತ್ಯಂತ ಕಡಿಮೆ ಉದ್ದದ ಬೌಂಡರಿಗಳಲ್ಲಿ ಒಂದಾಗಿದ್ದು, ಬ್ಯಾಟ್ಸ್‌ಮನ್‌ಗಳು ಈ ಭಾಗದಲ್ಲಿಯೇ ಹೆಚ್ಚಿನ ಸಿಕ್ಸರ್ ಬಾರಿಸಲಿದ್ದು, ರನ್ ಹೊಳೆ ಹರಿಯಲಿದೆ.

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ನೆಟ್‌ವರ್ಕ್ ಚಾನೆಲ್‌ ಹಾಗೂ ಸೋನಿ ಲೀವ್ ಅಪ್ಲಿಕೇಶನ್‌ನಲ್ಲಿ ಲೈವ್ ವೀಕ್ಷಿಸಬಹುದು.

Ravindra Jadeja: ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ ಜಡೇಜಾ

Published On - 7:35 am, Sat, 9 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ