Duleep Trophy 2024: ದುಲೀಪ್ ಟ್ರೋಫಿಯಿಂದ ಮೂವರು ಆಟಗಾರರು ಔಟ್
Duleep Trophy 2024: ದುಲೀಪ್ ಟ್ರೋಫಿ ಟೂರ್ನಿಯು ಸೆಪ್ಟೆಂಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಟೀಮ್ ಎ ಮತ್ತು ಟೀಮ್ ಬಿ ನಡುವೆ ನಡೆಯಲಿದ್ದು, ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನುಳಿದ ಪಂದ್ಯಗಳು ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂ ನಲ್ಲಿ ಜರುಗಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಣಕ್ಕಿಳಿಯುತ್ತಿರುವುದು ವಿಶೇಷ.
ಸೆಪ್ಟೆಂಬರ್ 5 ರಿಂದ ಶುರುವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಿಂದ ಮೂವರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಇವರಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ಅನಾರೋಗ್ಯದ ಸಮಸ್ಯೆಯಿಂದ ಹೊರಗುಳಿದರೆ, ರವೀಂದ್ರ ಜಡೇಜಾ ವೈಯುಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಅದರಂತೆ ಇದೀಗ ಟೀಮ್ B ಮತ್ತು ಟೀಮ್ C ತಂಡಗಳಿಗೆ ಬದಲಿಯಾಗಿ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಇಲ್ಲಿ ಮೊಹಮ್ಮದ್ ಸಿರಾಜ್ ಬದಲಿಯಾಗಿ ಟೀಮ್ ಇಂಡಿಯಾ ವೇಗಿ ನವದೀಪ್ ಸೈನಿ ಆಯ್ಕೆಯಾಗಿದ್ದು, ಹಾಗೆಯೇ ಉಮ್ರಾನ್ ಮಲಿಕ್ ಸ್ಥಾನದಲ್ಲಿ ಗೌರವ್ ಯಾದವ್ ಕಣಕ್ಕಿಳಿಯಲಿದ್ದಾರೆ. ಇದಾಗ್ಯೂ ರವೀಂದ್ರ ಜಡೇಜಾ ಅವರ ಬದಲಿ ಆಟಗಾರನನ್ನು ಹೆಸರಿಸಲಾಗಿಲ್ಲ.
4 ತಂಡಗಳು ಕಣಕ್ಕೆ:
ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಒಟ್ಟು ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಹಾಗೂ ಅಭಿಮನ್ಯು ಈಶ್ವರನ್ ಮುನ್ನಡೆಸಲಿದ್ದಾರೆ. ಈ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಟೀಮ್ A: ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ, ಶಾಶ್ವತ್ ರಾವತ್ .
ಟೀಮ್ B: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೇಶನ್ (ವಿಕೆಟ್ ಕೀಪರ್)
ಟೀಮ್ C: ರುತುರಾಜ್ ಗಾಯಕ್ವಾಡ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮಾರ್ಕಾಂಡೆ , ಸಂದೀಪ್ ವಾರಿಯರ್, ಗೌರವ್ ಯಾದವ್.
ಇದನ್ನೂ ಓದಿ: IPL 2025: ಕುತೂಹಲ ಮೂಡಿಸಿದ ಕೆಎಲ್ ರಾಹುಲ್ ನಡೆ..!
ಟೀಮ್ D: ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ಟೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆಎಸ್ ಭರತ್ (ವಿಕೆಟ್ ಕೀಪರ್) , ಸೌರಭ್ ಕುಮಾರ್.