Tilak Varma: ತಿಲಕ್ ವರ್ಮಾ ಏಷ್ಯನ್ ಗೇಮ್ಸ್​ನಲ್ಲಿ ಆಡುವುದು ಅನುಮಾನ..! ಕಾರಣವೇನು ಗೊತ್ತಾ?

|

Updated on: Sep 13, 2023 | 11:58 AM

Tilak Varma: ಐಪಿಎಲ್​ನಲ್ಲಿ ಮಿಂಚಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದ ಉದಯೋನ್ಮುಖ ಪ್ರತಿಭೆ ತಿಲಕ್ ವರ್ಮಾ ಏಷ್ಯನ್ ಗೇಮ್ಸ್​ನಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ಕೇಳಿಬರುತ್ತಿರುವ ವರದಿ ಪ್ರಕಾರ ತಿಲಕ್​ರನ್ನು ಮುಂಬರುವ ವಿಶ್ವಕಪ್‌ಗೆ ಭಾರತ ತಂಡದ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Tilak Varma: ತಿಲಕ್ ವರ್ಮಾ ಏಷ್ಯನ್ ಗೇಮ್ಸ್​ನಲ್ಲಿ ಆಡುವುದು ಅನುಮಾನ..! ಕಾರಣವೇನು ಗೊತ್ತಾ?
ತಿಲಕ್ ವರ್ಮಾ
Follow us on

ಐಪಿಎಲ್​ನಲ್ಲಿ (IPL 2023) ಮಿಂಚಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದ ಉದಯೋನ್ಮುಖ ಪ್ರತಿಭೆ ತಿಲಕ್ ವರ್ಮಾ (Tilak Varma) ಏಷ್ಯನ್ ಗೇಮ್ಸ್​ನಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದ ತಿಲಕ್ ಅವರನ್ನು ಭಾರತ ಏಷ್ಯಾಕಪ್‌ (Asia Cup 2023) ತಂಡದ ಜೊತೆಗೆ ಏಷ್ಯನ್ ಗೇಮ್ಸ್ (Asian Games) ತಂಡಕ್ಕೂ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಕೇಳಿಬರುತ್ತಿರುವ ವರದಿ ಪ್ರಕಾರ ತಿಲಕ್​ರನ್ನು ಮುಂಬರುವ ವಿಶ್ವಕಪ್‌ಗೆ (ODI World cup 2023) ಭಾರತ ತಂಡದ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಇದ್ದು, ಬಹಳ ದಿನಗಳ ಬಳಿಕ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಆಡಿದ ಏಕೈಕ ಪಂದ್ಯದ ಬಳಿಕ ಮತ್ತೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ತಿಲಕ್​ ವರ್ಮಾ ಅವರನ್ನು ಅಯ್ಯರ್ ಅವರ ಬದಲಿ ಆಟಗಾರನಾಗಿ ಟೀಂ ಇಂಡಿಯಾದಲ್ಲಿ ಸೇರಿಸಿಕೊಳ್ಳುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ.

ಏಷ್ಯಾಕಪ್ ಆರಂಭಕ್ಕೂ ಮುನ್ನ ಬಿಸಿಸಿಐ ಏಷ್ಯನ್ ಗೇಮ್ಸ್​ಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ತಿಲಕ್ ವರ್ಮಾ ಅವರಿಗೂ ತಂಡದಲ್ಲಿ ಸ್ಥಾನ ನೀಡಿತ್ತು. ಆದಾಗ್ಯೂ, ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಮ್ಯಾನೇಜ್‌ಮೆಂಟ್, ಇದೀಗ ಶ್ರೇಯಸ್ ಅಯ್ಯರ್ ಬದಲಿಗೆ ತಿಲಕ್ ಅವರನ್ನು ವಿಶ್ವಕಪ್ ತಂಡದಲ್ಲಿ ಇರಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಪೂರ್ಣ ಫಿಟ್ ಆದರೆ, ತಿಲಕ್ ವರ್ಮಾ ಏಷ್ಯನ್ ಗೇಮ್ಸ್​ನಲ್ಲಿ ಆಡಲಿದ್ದಾರೆ.

IND vs WI: ಅರ್ಧಶತಕ ಸಿಡಿಸಿ ಸೂರ್ಯಕುಮಾರ್ ದಾಖಲೆ ಮುರಿದ ತಿಲಕ್ ವರ್ಮಾ

ಸ್ಪರ್ಧೆಯಲ್ಲಿ ನಾಲ್ವರು

ತಿಲಕ್ ಹೊರತಾಗಿ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಭಾರತ ವಿಶ್ವಕಪ್ ತಂಡದ ಮೀಸಲು ಆಟಗಾರರಾಗಲು ಸ್ಪರ್ಧೆಯಲ್ಲಿದ್ದಾರೆ ಎಂದು ವರದಿಯಾಗಿದೆ. ESPN Cricinfo ವರದಿ ಮಾಡಿರುವಂತೆ ಶ್ರೇಯಸ್ ಅಯ್ಯರ್ ಅವರ ನಿರಂತರ ಬೆನ್ನಿನ ಸಮಸ್ಯೆಯು ತಂಡದ ಆಡಳಿತ ಮಂಡಳಿಯನ್ನು ಕಳವಳಕ್ಕೀಡು ಮಾಡಿದ್ದು, ಅಯ್ಯರ್ ಬದಲಿಗೆ ತಿಲಕ್​ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಚಿಂತಿಸುತ್ತಿದೆ ಎಂದು ವರದಿ ಮಾಡಿದೆ.

ಇನ್ನು ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ತಮ್ಮ ಆಟದಿಂದ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದರು. ಪ್ರಸ್ತುತ ಕೇವಲ ಏಳು ಪಂದ್ಯಗಳನ್ನಾಡಿರುವ ತಿಲಕ್, ಅರ್ಧಶತಕದ ಇನ್ನಿಂಗ್ಸ್ ಜೊತೆಗೆ 138.09 ರ ಸ್ಟ್ರೈಕ್ ರೇಟ್‌ನೊಂದಿಗೆ 34.80 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.

ಅ.3 ರಿಂದ ಏಷ್ಯನ್ ಗೇಮ್ಸ್ ಆರಂಭ

ಈ ಬಾರಿಯ ಏಷ್ಯನ್ ಗೇಮ್ಸ್ ಅಕ್ಟೋಬರ್ 3 ರಂದು ಪ್ರಾರಂಭವಾಗಲಿದ್ದು, ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಭಾಗವಹಿಸಲು ಸಜ್ಜಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಗೆದ್ದರೆ ಅಕ್ಟೋಬರ್ 5 ರಂದು ಸೆಮಿಫೈನಲ್‌, ಮತ್ತು ಅಕ್ಟೋಬರ್ 7 ರಂದು ಫೈನಲ್ ಪಂದ್ಯವನ್ನು ಆಡಬೇಕಾಗುತ್ತದೆ. ಆದಾಗ್ಯೂ, ಟೀಂ ಇಂಡಿಯಾದ ವಿಶ್ವಕಪ್ ಅಭಿಯಾನವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಪ್ರಾರಂಭವಾಗುತ್ತಿದ್ದು, ಏಷ್ಯನ್ ಗೇಮ್ಸ್‌ಗೆ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಿದರೆ, ಅವರು ವಿಶ್ವಕಪ್‌ನ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.

ಒಂದು ವೇಳೆ ಏಷ್ಯನ್ ಗೇಮ್ಸ್‌ನಲ್ಲಿ ತಿಲಕ್ ವರ್ಮಾ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಅವರ ಸ್ಥಾನಕ್ಕೆ ಸ್ಟ್ಯಾಂಡ್‌ಬೈ ಆಟಗಾರರಾಗಿ ಏಷ್ಯನ್ ಗೇಮ್ಸ್​ ತಂಡದಲ್ಲಿರುವ ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಮತ್ತು ಸಾಯಿ ಸುದರ್ಶನ್ ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ವರ್ಮಾ ಅವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೆ, ಈ ಆಟಗಾರರಲ್ಲಿ ಒಬ್ಬರು ಮುಖ್ಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಏಷ್ಯನ್ ಗೇಮ್ಸ್​ಗೆ ಭಾರತ ತಂಡ:

ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್.

ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ