Tim Seifert Catch Video: ಮುಂಬೈನ ಬ್ರಬೋರ್ನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಐಪಿಎಲ್ನ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿದ ಬಳಿಕ ರೋಹಿತ್ ಶರ್ಮಾ (41) ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅನ್ಮೋಲ್ ಪ್ರೀತ್ ಸಿಂಗ್ (8) ಹಾಗೂ ತಿಲಕ್ ವರ್ಮಾ (22) ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಕೀರನ್ ಪೊಲಾರ್ಡ್ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು.
ಅದರಂತೆ ಬ್ಯಾಟ್ ಬೀಸಲಾರಂಭಿಸಿದ ಕೀರನ್ ಪೊಲಾರ್ಡ್ 3 ರನ್ಗಳಿಸಿ ಕ್ರೀಸ್ನಲ್ಲಿದ್ದರು. ಈ ವೇಳೆ 16ನೇ ಓವರ್ ಎಸೆದ ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು. 5ನೇ ಎಸೆತದಲ್ಲಿ ಪೊಲಾರ್ಡ್ ಲೆಗ್ ಸೈಡ್ನತ್ತ ಭರ್ಜರಿ ಹೊಡೆತ ಬಾರಿಸಿದ್ದರು. ಆದರೆ ಇನ್ಫೀಲ್ಡ್ನಲ್ಲಿದ್ದ ಟಿಮ್ ಸೈಫರ್ಟ್ ಅದ್ಭುತವಾಗಿ ಗಾಳಿಯಲ್ಲಿ ಹಾರುವ ಮೂಲಕ ಚೆಂಡನ್ನು ಹಿಡಿದರು. ಇದೀಗ ನ್ಯೂಜಿಲೆಂಡ್ ಆಟಗಾರ ಟಿಮ್ ಸೈಫರ್ಟ್ ಅವರ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕ್ಯಾಚ್ ಆಫ್ ದಿ ಮ್ಯಾಚ್ ಎಂದು ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
WHAT A CATCH! ?
TIM SEIFERT, TAKE A BOW! ?#IPL2022 #YehHaiNayiDilli #DCvMI #DCvsMI pic.twitter.com/g9PPLHE7gC
— Cricket Spectacle ? (@CricketSpectac1) March 27, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ಇಶಾನ್ ಕಿಶನ್ ಅವರ 81 (48) ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ 178 ರನ್ಗಳ ಟಾರ್ಗೆಟ್ ನೀಡಿದೆ.
ಟಿಮ್ ಸೈಫರ್ಟ್ ಅವರ ಈ ಅದ್ಭುತ ಕ್ಯಾಚ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11:
ಪೃಥ್ವಿ ಶಾ , ಟಿಮ್ ಸೈಫರ್ಟ್ , ಮನದೀಪ್ ಸಿಂಗ್ , ರಿಷಬ್ ಪಂತ್ (ನಾಯಕ) , ರೋವ್ಮನ್ ಪೊವೆಲ್ , ಲಲಿತ್ ಯಾದವ್ , ಅಕ್ಷರ್ ಪಟೇಲ್ , ಶಾರ್ದೂಲ್ ಠಾಕೂರ್ , ಖಲೀಲ್ ಅಹ್ಮದ್ , ಕುಲದೀಪ್ ಯಾದವ್ , ಕಮಲೇಶ್ ನಾಗರಕೋಟಿ
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11:
ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್, ತಿಲಕ್ ವರ್ಮಾ , ಅನ್ಮೋಲ್ಪ್ರೀತ್ ಸಿಂಗ್ , ಕೀರನ್ ಪೊಲಾರ್ಡ್ , ಟಿಮ್ ಡೇವಿಡ್ , ಡೇನಿಯಲ್ ಸಾಮ್ಸ್ , ಮುರುಗನ್ ಅಶ್ವಿನ್ , ಜಸ್ಪ್ರೀತ್ ಬುಮ್ರಾ , ಟೈಮಲ್ ಮಿಲ್ಸ್ , ಬೇಸಿಲ್ ಥಂಪಿ