TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ 2023 ರ ಸೀಸನ್ಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಲೈಕಾ ಕೋವೈ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲೈಕಾ ಕೋವೈ ಕಿಂಗ್ಸ್ ತಂಡವು 5 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 15 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 104 ರನ್ಗಳ ಅಮೋಘ ಗೆಲುವು ಸಾಧಿಸಿದ ಲೈಕಾ ಕೋವೈ ಕಿಂಗ್ಸ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಈ ಟೂರ್ನಿಯ ಸಂಪೂರ್ಣ ಬಹುಮಾನ ಮೊತ್ತ ಈ ಕೆಳಗಿನಂತಿದೆ:
ಲೈಕಾ ಕೋವೈ ಕಿಂಗ್ಸ್ ಪ್ಲೇಯಿಂಗ್ 11: ಎಸ್ ಸುಜಯ್ , ಜೆ ಸುರೇಶ್ ಕುಮಾರ್ (ವಿಕೆಟ್ ಕೀಪರ್) , ಬಿ ಸಚಿನ್ , ಯು ಮುಕಿಲೇಶ್ , ಶಾರುಖ್ ಖಾನ್ (ನಾಯಕ) , ರಾಮ್ ಅರವಿಂದ್ , ಅತೀಕ್ ಉರ್ ರೆಹಮಾನ್ , ಎಂ ಮೊಹಮ್ಮದ್ , ಮಣಿಮಾರನ್ ಸಿದ್ಧಾರ್ಥ್ , ಜಾತವೇಧ್ ಸುಬ್ರಮಣ್ಯನ್ , ವಲ್ಲಿಯಪ್ಪನ್ ಯುಧೀಶ್ವರನ್.
ಇದನ್ನೂ ಓದಿ: Team India: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ
ನೆಲ್ಲೈ ರಾಯಲ್ ಕಿಂಗ್ಸ್ ಪ್ಲೇಯಿಂಗ್ 11: ಅರುಣ್ ಕಾರ್ತಿಕ್ (ನಾಯಕ) , ಅಜಿತೇಶ್ ಗುರುಸ್ವಾಮಿ , ನಿಧಿಶ್ ರಾಜಗೋಪಾಲ್ , ರಿತಿಕ್ ಈಶ್ವರನ್ (ವಿಕೆಟ್ ಕೀಪರ್) , ಲಕ್ಷ್ಮೇಶ ಸೂರ್ಯಪ್ರಕಾಶ್ , ಸೋನು ಯಾದವ್ , ಎನ್ಎಸ್ ಹರೀಶ್ , ಎಂ ಪೊಯಿಮುಝಿ, ಮೋಹನ್ ಪ್ರಸಾದ್ , ಸಂದೀಪ್ ವಾರಿಯರ್ , ಲಕ್ಷಯ್ ಜೈನ್.