TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ವಿರುದ್ಧ ಜಯ ಸಾಧಿಸಿ ಲೈಕಾ ಕೋವೈ ಕಿಂಗ್ಸ್ ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕ ಬಾಬಾ ಇಂದ್ರಜಿತ್ ಬೌಲಿಂಗ್ ಆಯ್ಕೆ ಮಾಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಲೈಕಾ ಕೋವೈ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಸುಜಯ್ (12) ಹಾಗೂ ಸುರೇಶ್ ಕುಮಾರ್ (26) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ 19ರ ಹರೆಯದ ಯುವ ದಾಂಡಿಗ ಬಿ ಸಚಿನ್ ಸ್ಪೋಟಕ ಇನಿಂಗ್ಸ್ ಆಡಿದರು. ಬಿರುಸಿನ ಆಟಕ್ಕೆ ಒತ್ತು ನೀಡಿದ ಸಚಿನ್ ದಿಂಡಿಗಲ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಸಚಿನ್ ಬ್ಯಾಟ್ನಿಂದ 7 ಫೋರ್ ಹಾಗೂ 2 ಭರ್ಜರಿ ಸಿಕ್ಸ್ಗಳು ಮೂಡಿಬಂತು. ಅಲ್ಲದೆ 46 ಎಸೆತಗಳಲ್ಲಿ 70 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಮುಕಿಲೇಶ್ 27 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ 3 ಫೋರ್ನೊಂದಿಗೆ 44 ರನ್ ಸಿಡಿಸಿದರು. ಪರಿಣಾಮ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಲೈಕಾ ಕೋವೈ ಕಿಂಗ್ಸ್ ತಂಡವು 197 ರನ್ಗಳಿಸಿತು.
198 ರನ್ಗಳ ಕಠಿಣ ಗುರಿ ಪಡೆದ ದಿಂಡಿಗಲ್ ಡ್ರಾಗನ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಲೈಕಾ ಕೋವೈ ಕಿಂಗ್ಸ್ ಬೌಲರ್ಗಳು ಯಶಸ್ವಿಯಾದರು. 58 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಡ್ರಾಗನ್ಸ್ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಕಣಕ್ಕಿಳಿದ ಸರತ್ ಕುಮಾರ್ ಅಕ್ಷರಶಃ ಅಬ್ಬರಿಸಿದರು.
ಕೇವಲ 26 ಎಸೆತಗಳನ್ನು ಎದುರಿಸಿದ ಸರತ್ ಕುಮಾರ್ 8 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 62 ರನ್ ಚಚ್ಚಿದರು. ಆದರೆ ಮತ್ತೊಂದೆಡೆ ವಿಕೆಟ್ ಉರುಳಿಸುತ್ತಾ ಸಾಗಿದ ಕೋವೈ ಕಿಂಗ್ಸ್ ಬೌಲರ್ಗಳು ದಿಂಡಿಗಲ್ ಡ್ರಾಗನ್ಸ್ ತಂಡವನ್ನು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 163 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಇದರೊಂದಿಗೆ ಲೈಕಾ ಕೋವೈ ಕಿಂಗ್ಸ್ ತಂಡವು 30 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶಾರುಖ್ ಖಾನ್ ನೇತೃತ್ವದ ಲೈಕಾ ಕೋವೈ ಕಿಂಗ್ಸ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್ 2023 ರ ಫೈನಲ್ಗೆ ಪ್ರವೇಶಿಸಿದೆ.
ದಿಂಡಿಗಲ್ ಡ್ರಾಗನ್ಸ್ ಪ್ಲೇಯಿಂಗ್ 11: ವಿಮಲ್ ಖುಮರ್ , ಶಿವಂ ಸಿಂಗ್ , ಬಾಬಾ ಇಂದ್ರಜಿತ್ (ನಾಯಕ) , ಆದಿತ್ಯ ಗಣೇಶ್ , ಬೂಪತಿ ಕುಮಾರ್ , ಸುಭೋತ್ ಭಾಟಿ , ಪಿ ಸರವಣ ಕುಮಾರ್ , ಎಂ ಮತಿವಣ್ಣನ್ , ವರುಣ್ ಚಕ್ರವರ್ತಿ , ಸರತ್ ಕುಮಾರ್, ಜಿ ಕಿಶೂರ್.
ಇದನ್ನೂ ಓದಿ: TNPL 2023: 10 ಫೋರ್, 5 ಸಿಕ್ಸ್ನೊಂದಿಗೆ ಅರುಣ್ ಅಬ್ಬರದ ಶತಕ..!
ಲೈಕಾ ಕೋವೈ ಕಿಂಗ್ಸ್ ಪ್ಲೇಯಿಂಗ್ 11: ಎಸ್ ಸುಜಯ್ , ಜೆ ಸುರೇಶ್ ಕುಮಾರ್ (ವಿಕೆಟ್ ಕೋರ್) , ಬಿ ಸಚಿನ್ , ರಾಮ್ ಅರವಿಂದ್ , ಅತೀಕ್ ಉರ್ ರೆಹಮಾನ್ , ಮುಕಿಲೇಶ್ , ಶಾರುಖ್ ಖಾನ್ (ನಾಯಕ) , ಎಂ ಮೊಹಮ್ಮದ್ , ಮಣಿಮಾರನ್ ಸಿದ್ಧಾರ್ಥ್ , ಜಾತವೇಧ್ ಸುಬ್ರಮಣ್ಯನ್ , ವಲ್ಲಿಯಪ್ಪನ್ ಯುಧೀಶ್ವರನ್.