
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಸ್ಪೋಟಕ ಶತಕ ಬಾರಿಸಿ ಟಾಮ್ ಬ್ಯಾಂಟನ್ ಹೊಸ ಇತಿಹಾಸ ರಚಿಸಿದ್ದಾರೆ. ಎಂಐ ಎಮಿರೇಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಸರ್ಟ್ ವೈಪರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಎಂಐ ಎಮಿರೇಟ್ಸ್ ಪರ ಟಾಮ್ ಬ್ಯಾಂಟನ್ ಹಾಗೂ ಆ್ಯಂಡ್ರೆ ಫ್ಲೆಚರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಸ್ಪೋಟಕ ಇನಿಂಗ್ಸ್ಗೆ ಒತ್ತು ನೀಡಿದ ಬ್ಯಾಂಟನ್ 55 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 105 ರನ್ ಬಾರಿಸಿದರು. ಇದರೊಂದಿಗೆ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಟಾಮ್ ಬ್ಯಾಂಟನ್ ಪಾಲಾಯಿತು.
ಇದಕ್ಕೂ ಮುನ್ನ ಟಾಮ್ ಬ್ಯಾಂಟನ್ ಶಾರ್ಜಾ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 102 ರನ್ ಬಾರಿಸಿದ್ದರು. ಇದೀಗ ಮತ್ತೊಮ್ಮೆ ಸೆಂಚುರಿ ಸಿಡಿಸಿ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ 2 ಶತಕ ಬಾರಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
CARNAGE! DESTRUCTION! RUTHLESS!
Tom Banton & Andre Fletcher were at their unforgiving best tonight.
The two batters sent the fielders on a leather hunt, thumping 6️⃣4️⃣ runs off 18 deliveries, in the 16th, 17th and 18th over. 🥵#MIEvDV #DPWorldILT20 #AllInForCricket… pic.twitter.com/nn5jozZpNj— International League T20 (@ILT20Official) January 27, 2025
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಎಮಿರೇಟ್ಸ್ ತಂಡದ ಪರ ಟಾಮ್ ಬ್ಯಾಂಟನ್ 105 ರನ್ ಬಾರಿಸಿದರೆ, ಆ್ಯಂಡ್ರೆ ಫ್ಲೆಚರ್ ಅಜೇಯ 96 ರನ್ ಸಿಡಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡವು 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿತು.
229 ರನ್ಗಳ ಕಠಿಣ ಗುರಿ ಬೆನ್ನತ್ತಿದ ಡೆಸರ್ಟ್ ವೈಪರ್ಸ್ ತಂಡವು ರೋಹಿದ್ ಖಾನ್ ಹಾಗೂ ಅಲ್ಝಾರಿ ಜೋಸೆಫ್ ಅವರ ಮಾರಕ ದಾಳಿಗೆ ತತ್ತರಿಸಿದೆ. ಪರಿಣಾಮ ಡೆಸರ್ಟ್ ವೈಪರ್ಸ್ ತಂಡ 12.3 ಓವರ್ಗಳಲ್ಲಿ 74 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಎಂಐ ಎಮಿರೇಟ್ಸ್ ತಂಡ 154 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಎಂಐ ಎಮಿರೇಟ್ಸ್ ಪ್ಲೇಯಿಂಗ್ 11: ಕುಸಾಲ್ ಪೆರೆರಾ , ಮುಹಮ್ಮದ್ ವಸೀಮ್ , ಆ್ಯಂಡ್ರೆ ಫ್ಲೆಚರ್ , ಟಾಮ್ ಬ್ಯಾಂಟನ್ , ನಿಕೋಲಸ್ ಪೂರನ್ (ನಾಯಕ) , ಡಾನ್ ಮೌಸ್ಲಿ , ಕೀರಾನ್ ಪೊಲಾರ್ಡ್ , ರೊಮಾರಿಯೋ ಶೆಫರ್ಡ್ , ಮುಹಮ್ಮದ್ ರೋಹಿದ್ ಖಾನ್ , ಅಲ್ಜಾರಿ ಜೋಸೆಫ್ , ಫಜಲ್ಹಕ್ ಫಾರೂಕಿ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಮೊಹಮ್ಮದ್ ಸಿರಾಜ್ ವೈಲ್ಡ್ ಕಾರ್ಡ್ ಎಂಟ್ರಿ ಸಾಧ್ಯತೆ
ಡೆಸರ್ಟ್ ವೈಪರ್ಸ್ ಪ್ಲೇಯಿಂಗ್ 11: ಫಖರ್ ಝಮಾನ್ , ಡೇನಿಯಲ್ ಲಾರೆನ್ಸ್ , ಆಡಮ್ ಹೋಸ್ , ಸ್ಯಾಮ್ ಕರ್ರಾನ್ (ನಾಯಕ) , ಆಝಂ ಖಾನ್ ( ವಿಕೆಟ್ ಕೀಪರ್ ) , ಶೆರ್ಫೇನ್ ರುದರ್ಫೋರ್ಡ್ , ಧ್ರುವ ಪರಾಶರ್ , ನಾಥನ್ ಸೌಟರ್ , ಮೊಹಮ್ಮದ್ ಅಮೀರ್ , ಖುಜೈಮಾ ತನ್ವೀರ್ , ಡೇವಿಡ್ ಪೇನ್.