ಸೌಥಾಂಪ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕ ದಾಂಡಿಗ ಟ್ರಾವಿಸ್ ಹೆಡ್ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ಮ್ಯಾಥ್ಯೂ ಶಾರ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ಹೆಡ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಪವರ್ಪ್ಲೇನ 5ನೇ ಓವರ್ನಲ್ಲಿ ಅಕ್ಷರಶಃ ಅಬ್ಬರಿಸಿದ ಟ್ರಾವಿಸ್ ಹೆಡ್ ಒಂದೇ ಓವರ್ನಲ್ಲಿ 30 ರನ್ ಚಚ್ಚಿದರು. ಸ್ಯಾಮ್ ಕರನ್ ಎಸೆದ ಈ ಓವರ್ನ ಮೊದಲೆರಡು ಎಸೆತಗಳಲ್ಲಿ ಹೆಡ್ ಬ್ಯಾಟ್ನಿಂದ ಫೋರ್ಗಳು ಮೂಡಿಬಂತು. ಆ ಬಳಿಕ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಇದಾದ ಬಳಿಕ ಮತ್ತೊಂದು ಫೋರ್ ಬಾರಿಸುವ ಮೂಲಕ ಒಟ್ಟು 30 ರನ್ ಕಲೆಹಾಕಿದರು. ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಟ್ರಾವಿಸ್ ಹೆಡ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅಲ್ಲದೆ 23 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಟ್ರಾವಿಸ್ ಹೆಡ್ 59 ರನ್ ಬಾರಿಸಿದರು. ಹೆಡ್ ಅವರ ಈ ಸ್ಪೋಟಕ ಆರಂಭದ ಹೊರತಾಗಿಯೂ ಆಸ್ಟ್ರೇಲಿಯಾ ತಂಡವು 19.3 ಓವರ್ಗಳಲ್ಲಿ 179 ರನ್ಗಳಿಸಿ ಆಲೌಟ್ ಆಯಿತು.
6️⃣6️⃣6️⃣: Number of the batting beast, i.e. Travis Head 🔥
The explosive Aussie opener hit 30 runs off a Sam Curran over, including 3 successive sixes! #RivalsForever #ENGvAUSonFanCode pic.twitter.com/R6Bac6Sd6R
— FanCode (@FanCode) September 11, 2024
180 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ ಕೇವಲ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಚೊಚ್ಚಲ ಪಂದ್ಯವಾಡಿದ ಜೋರ್ಡನ್ ಕಾಕ್ಸ್ ಅವರ ಇನಿಂಗ್ಸ್ 17 ರನ್ಗಳಿಗೆ ಸೀಮಿತವಾಗಿತ್ತು. ಹಾಗೆಯೇ ನಾಯಕ ಫಿಲ್ ಸಾಲ್ಟ್ 20 ರನ್ಗಳೊಂದಿಗೆ ಪೆವಿಲಿಯನ್ಗೆ ಮರಳಿದ್ದರು.
ಪರಿಣಾಮ ಇಂಗ್ಲೆಂಡ್ ತಂಡವು 19.2 ಓವರ್ಗಳಲ್ಲಿ 151 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡವು 28 ರನ್ಗಳ ಜಯ ಸಾಧಿಸಿದೆ.
Published On - 10:33 am, Thu, 12 September 24