ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (Australia vs India) ನಡುವಿನ 19 ವರ್ಷದೊಳಗಿನವರ ವಿಶ್ವಕಪ್ (Under-19 World Cup 2024) ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 253 ರನ್ ಕಲೆಹಾಕಿದೆ. ಈ ಮೂಲಕ ಭಾರತಕ್ಕೆ254 ರನ್ ಟಾರ್ಗೆಟ್ ನೀಡಿದೆ. ತಂಡದ ಪರ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಸಿಡಿಸಿದರೆ, ಹರ್ಜಸ್ ಸಿಂಗ್ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹಾಗೆಯೇ ಕೆಳಕ್ರಮಾಂಕದ ಬ್ಯಾಟರ್ಗಳ ಉಪಯುಕ್ತ ಕೊಡುಗೆಯಿಂದಾಗಿ ಆಸ್ಟ್ರೇಲಿಯಾ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಭಾರತಕ್ಕೆ ಗುರಿಯಾಗಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಕೇವಲ 16 ರನ್ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಆದರೆ ಆ ಬಳಿಕ ಜೊತೆಯಾದ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಕಲೆಹಾಕುವ ಮೂಲಕ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಆದರೆ ಇಬ್ಬರೂ ಅರ್ಧಶತಕ ಪೂರ್ಣಗೊಳಿಸುವಲ್ಲಿ ಎಡವಿದರು.
U19 World Cup 2024 Final: ಭಾರತದ ಮುಡಿಗೆ ವಿಶ್ವಕಪ್? ಭವಿಷ್ಯ ನುಡಿಯುತ್ತಿದೆ ಹೀಗೊಂದು ಕಾಕತಾಳೀಯ
ನಂತರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹರ್ಜಸ್ ಸಿಂಗ್ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ತಂಡದ ಸ್ಕೋರ್ ಬೋರ್ಡ್ ಹೆಚ್ಚಿಸುವ ಕೆಲಸ ಮಾಡಿದ ಆಲಿ ಪೀಕ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 46 ರನ್ ಕಲೆಹಾಕಿದರು.
ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ರಾಜ್ ಲಿಂಬಾನಿ 10 ಓವರ್ಗಳಲ್ಲಿ 38 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರೆ, ನಮನ್ ತಿವಾರಿ 2 ವಿಕೆಟ್ ಪಡೆದು 63 ರನ್ ಬಿಟ್ಟುಕೊಟ್ಟು ಕೊಂಚ ದುಬಾರಿ ಎನಿಸಿಕೊಂಡರು. ಉಳಿದಂತೆ ಸೌಮ್ಯ ಕುಮಾರ್ ಪಾಂಡೆ ಹಾಗೂ ಮುಶೀರ್ ಖಾನ್ ತಲಾ 1 ವಿಕೆಟ್ ಪಡೆದು, ಆಸೀಸ್ ತಂಡವನ್ನು ಬಿಗ್ ಸ್ಕೋರ್ ಕಲೆಹಾಕದಂತೆ ತಡೆದರು.
Innings Break!#TeamIndia need 2⃣5⃣4⃣ to win the #U19WorldCup!
3⃣ wickets for Raj Limbani
2⃣ wickets for Naman Tiwari
A wicket each for Saumy Pandey & Musheer KhanOver to our batters 🙌
Scorecard ▶️ https://t.co/RytU4cGJLu#U19WorldCup | #INDvAUS pic.twitter.com/4SnelO2HMi
— BCCI (@BCCI) February 11, 2024
ಆಸ್ಟ್ರೇಲಿಯಾ ತಂಡ: ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೈಬ್ಜೆನ್(ನಾಯಕ), ಹರ್ಜಸ್ ಸಿಂಗ್, ರಯಾನ್ ಹಿಕ್ಸ್(ವಿಕೆಟ್ ಕೀಪರ್), ಆಲಿವರ್ ಪೀಕ್, ರಾಫೆ ಮೆಕ್‌ಮಿಲನ್, ಚಾರ್ಲಿ ಆಂಡರ್ಸನ್, ಟಾಮ್ ಸ್ಟ್ರೇಕರ್, ಮಹಾಲಿ ಬಿಯರ್ಡ್‌ಮ್ಯಾನ್, ಕ್ಯಾಲಮ್ ವಿಡ್ಲರ್
ಭಾರತ ತಂಡ: ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮ್ಯಾ ಪಾಂಡೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Sun, 11 February 24