- Kannada News Photo gallery Cricket photos IND vs ENG Jack Leach ruled out rest of India tour with a knee injury
IND vs ENG: ಇಂಗ್ಲೆಂಡ್ ತಂಡಕ್ಕೆ ಆಘಾತ; ಸ್ಟಾರ್ ಆಟಗಾರ ಇಡೀ ಸರಣಿಯಿಂದಲೇ ಔಟ್..!
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ತಂಡದ ಸ್ಟಾರ್ ಸ್ಪಿನ್ನರ್ ಜಾಕ್ ಲೀಚ್ ಹೊರಬಿದ್ದಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಂಡು ಎರಡನೇ ಟೆಸ್ಟ್ ಪಂದ್ಯದೊಂದ ಹೊರಗುಳಿದಿದ್ದ ತಂಡದ ಅನುಭವಿ ಸ್ಪಿನ್ನರ್ ಜಾಕ್ ಲೀಚ್ ಇದೀಗ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ.
Updated on:Feb 11, 2024 | 4:01 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯ ಆರಂಭಕ್ಕೂ ಮುನ್ನ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಂಡು ಎರಡನೇ ಟೆಸ್ಟ್ ಪಂದ್ಯದೊಂದ ಹೊರಗುಳಿದಿದ್ದ ತಂಡದ ಅನುಭವಿ ಸ್ಪಿನ್ನರ್ ಜಾಕ್ ಲೀಚ್ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಹೈದರಾಬಾದ್ ಟೆಸ್ಟ್ ಬಳಿಕ ಗಾಯಗೊಂಡಿದ್ದ ಜಾಕ್ ಲೀಚ್ರನ್ನು ವಿಶಾಖಪಟ್ಟಣಂ ಟೆಸ್ಟ್ನಿಂದ ಹೊರಗಿಡಲಾಗಿತ್ತು. ಇದೀಗ ಬಂದಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಲೀಚ್ ಸಂಪೂರ್ಣ ಸರಣಿಯಿಂದ ಹೊರಗುಳಿಯಲಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಲೀಚ್ ಸರಣಿಯಿಂದ ಹೊರಗುಳಿಯಲ್ಲಿರುವ ಮಾಹಿತಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಇಂಜುರಿಗೊಂಡಿರುವ ಜಾಕ್ ಲೀಚ್ ಅಬುಧಾಬಿ ಮೂಲಕ ತಮ್ಮ ದೇಶಕ್ಕೆ ಮರಳಲಿದ್ದಾರೆ. ಆ ನಂತರ ಲೀಚ್ ಇಂಗ್ಲೆಂಡ್ ಮತ್ತು ಸೋಮರ್‌ಸೆಟ್‌ನ ವೈದ್ಯಕೀಯ ತಂಡದೊಂದಿಗೆ ಪುನರ್ವಸತಿ ಪ್ರಕ್ರಿಯೆಗೆ ಒಳಗಾಗಲಿದ್ದಾರೆ ಎಂದು ECB ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಲೀಚ್ ಅವರ ಬದಲಿ ಆಟಗಾರನನ್ನು ಇಂಗ್ಲೆಂಡ್ ಇನ್ನೂ ಘೋಷಿಸಿಲ್ಲ. ತಂಡದಲ್ಲಿ ಈಗಾಗಲೇ ಶೋಯೆಬ್ ಬಶೀರ್, ರೆಹಾನ್ ಅಹ್ಮದ್ ಮತ್ತು ಟಾಮ್ ಹಾರ್ಟ್ಲಿ ರೂಪದಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ. ಅವರೊಂದಿಗೆ ಜೋ ರೂಟ್ ಕೂಡ ನಾಲ್ಕನೇ ಸ್ಪಿನ್ನರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಈ ಪ್ರವಾಸದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದ ಲೀಚ್, ಹೈದರಾಬಾದ್ ಟೆಸ್ಟ್‌ನಲ್ಲಿ ಎರಡು ವಿಕೆಟ್ ಪಡೆದಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದ ಲೀಚ್ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. 2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಲೀಚ್, ಇದುವರೆಗೆ 126 ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫಾಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್, ಒಲ್ಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಗಸ್ ಅಟ್ಕಿನ್ಸನ್ .
Published On - 3:43 pm, Sun, 11 February 24




