ಇನ್ನು ರಣಜಿ ಕ್ರಿಕೆಟ್ನ ಅತ್ಯುತ್ತಮ ಬೌಲಿಂಗ್ ದಾಖಲೆ ಇರುವುದು ಪ್ರೇಮಾಂಗ್ಸು ಚಟರ್ಜಿ ಅವರ ಹೆಸರಿನಲ್ಲಿ. 1957 ರಲ್ಲಿ ಬೆಂಗಾಳ್ ಪರ ಕಣಕ್ಕಿಳಿದಿದ್ದ ಪ್ರೇಮಾಂಗ್ಸು, ಅಸ್ಸಾಂ ವಿರುದ್ಧ ಕೇವಲ 20 ರನ್ ನೀಡಿ 10 ವಿಕೆಟ್ಗಳನ್ನು ಕಬಳಿಸಿದ್ದರು. ಈ ಮೂಲಕ ದೇಶೀಯ ಕ್ರಿಕೆಟ್ನಲ್ಲಿ 10 ವಿಕೆಟ್ಗಳನ್ನು ಕಬಳಿಸಿದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದರು.